Header Ads
Breaking News

ಪ್ರಯೋಗಾಲಯಗಳಲ್ಲಿ ಸುರಕ್ಷಾ ಕ್ರಮಗಳು ಅತಿ ಅವಶ್ಯಕ : ಜಗದೀಶ ಭಟ್

ಪ್ರಯೋಗಾಲಯಗಳಲ್ಲಿ ಅದರಲ್ಲೂ ರಸಾಯನಶಾಸ್ತ್ರ ಪ್ರಯೋಗಾಲಯದಲ್ಲಿ ಸುರಕ್ಷತಾ ಮಾರ್ಗಗಳನ್ನು ವಿದ್ಯಾರ್ಥಿಗಳಿಗೆ ತಿಳಿಹೇಳುವುದು ಅತೀ ಅವಶ್ಯಕ ಎಂದು ಮಂಗಳೂರಿನ ಸೊಲಾರ ಫಾರ್ಮಾಸುಟಿಕಲ್ ಕಂಪೆನಿಯ ಪರಿಸರ ಆರೋಗ್ಯ ಮತ್ತು ಸುರಕ್ಷತಾ ವಿಭಾಗದ ಮುಖ್ಯಸ್ಥರಾದ ಜಗದೀಶ ಭಟ್ ಅಭಿಪ್ರಾಯಪಟ್ಟರು.

ಅವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ರಸಾಯನಶಾಸ್ತ್ರ ವಿಭಾಗವು ಪ್ರಥಮ ಬಿ.ಎಸ್ .ಸಿ . ವಿದ್ಯಾರ್ಥಿಗಳಿಗೆ ಆಯೋಜಿಸಿದ ‘ಕೆಮಿಕಲ್ ಸೇಫ್ಟಿ – ಸೇಫ್ ಕೆಮಿಸ್ಟ್ರಿ ‘ ಮಾಹಿತಿ ಮತ್ತು ಪ್ರಾತ್ಯಕ್ಷಿಕೆಯ ಕಾರ್ಯಕ್ರಮದಲ್ಲಿ ತರಬೇತಿ ನೀಡುತ್ತಾ ಹೇಳಿದರು. ರಸಾಯನ ಶಾಸ್ತ್ರದ ಪ್ರಯೋಗಾಲಯಗಳಲ್ಲಿ ಬೇರೆ ಬೇರೆ ಪ್ರಯೋಗಗಳನ್ನು ಮಾಡುವ ಸಂದರ್ಭಗಳಲ್ಲಿ ತೆಗೆದುಕೊಳ್ಳಬೇಕಾದ ಸುರಕ್ಷಿತ ಕ್ರಮಗಳ ಬಗ್ಗೆ ವಿವರಿಸಿದರು. ರಸಾಯನಶಾಸ್ತ್ರ ಪ್ರಯೋಗಾಲಯಗಳಲ್ಲಿ, ಬೇರೆ ಬೇರೆ ಹಾನಿಕಾರಕ ಗುಣಧರ್ಮಗಳನ್ನು ಹೊಂದಿರುವ ರಾಸಾಯನಿಕ ವಸ್ತುಗಳನ್ನು ಉಪಯೋಗಿಸುವುದು ಅನಿವಾರ್ಯ. ಆದರೆ ರಾಸಾಯನಿಕ ವಸ್ತುಗಳ ಜೊತೆಗೆ ಅದಕ್ಕೆ ಸಂಬಂಧಪಟ್ಟ ಏಲ್ಲಾ ಮಾಹಿತಿಯನ್ನು ತಿಳಿದುಕೊಂಡು ಸೂಕ್ಷ್ಮ ಸುರಕ್ಷತಾ ಕ್ರಮಗಳನ್ನು ಕೈಗೊಂಡ ನಂತರವೇ ಪ್ರಯೋಗ ನಡೆಸಬೇಕಾಗಿ ವಿದ್ಯಾರ್ಥಿಗಳಿಗೆ ತಿಳಿಹೇಳಿದರು. ಇದರಿಂದಾಗಿ ಆಗುವ ಆಕಸ್ಮಿಕ ಅನಾಹುತಗಳನ್ನು ತಪ್ಪಿಸುವುದರ ಮಾಹಿತಿ ನೀಡಿದರು.

ರಸಾಯನಶಾಸ್ತ್ರ ವಿಭಾಗದ ಮುಖಸ್ಥ ಡಾ. ವಿಶ್ವನಾಥ ಪಿ. ಇವರು ಅಧ್ಯಕ್ಷತೆ ವಹಿಸಿದ್ದರು. ವಿಭಾಗದ ಉಪನ್ಯಾಸಕ ಡಾ. ರಾಜೇಶ ಹೆಗಡೆ ಸಂಯೋಜಿಸಿದ ಈ ಕಾರ್ಯಕ್ರಮದಲ್ಲಿ ವಿಭಾಗದ ಉಪನ್ಯಾಸಕರಾದ ನಂದಾಕುಮಾರಿ ಕೆ. ಪಿ., ದಿವ್ಯ, ಸಂಗೀತ, ಗಾನವಿ ಡಿ. ಮತ್ತು ಡಾ. ನಾರಾಯಣ ಹೆಬ್ಬಾರ್ ಸಹಕಾರ ನೀಡಿದರು. ಪ್ರಥಮ ಬಿ.ಎಸ.ಸಿ.ಯ ವೇದಶ್ರೀ ಸ್ವಾಗತಿಸಿ, ಶ್ರೀನಯನಾ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಧ್ಯಾ ಎಮ್ . ಅತಿಥಿಯನ್ನು ಪರಿಚಯಿಸಿ, ದೀಪಾ ಬಿ. ವಂದಿಸಿದರು.

Related posts

Leave a Reply

Your email address will not be published. Required fields are marked *