Header Ads
Breaking News

ಪ್ರವಾಸಿಗರ ತಾಣವಾದ ಮಂಗಳೂರಿನ ಪಣಂಬೂರು ಬೀಚ್ – ಬೀಚ್‌ನ ನಿರ್ವಹಣೆಗೆ ಜಿಲ್ಲಾಡಳಿತದೊಂದಿಗಿನ ಅವಧಿ ಮುಕ್ತಾಯ

ಮಂಗಳೂರಿನ ಪಣಂಬೂರ್ ಬೀಚ್‌ನ ನಿರ್ವಹಣೆಗಾಗಿ ಜಿಲ್ಲಾಡಳಿತದೊಂದಿಗಿನ ಒಪ್ಪಂದದ ಅವಧಿ ಮುಕ್ತಾಯಗೊಂಡಿದೆ. ಇನ್ನು ಮುಂದಿನ ದಿನಗಳಲ್ಲಿ ಬೀಚ್‌ನಲ್ಲಿ ಯಾವುದೇ ಚಟುವಟಿಕೆಗಳನ್ನು ನಿರ್ವಹಿಸುವುದಿಲ್ಲ ಎಂದು ಮಂಗಳೂರು ಬೀಚ್‌ನ ಸಿಇಒ ಯತೀಶ್ ಬೈಕಂಪಾಡಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಗಳೂರಿನ ಪಣಂಬೂರು ಬೀಚ್ ಕರಾವಳಿ ಕರ್ನಾಟಕದ ಪ್ರವಾಸಿ ತಾಣಗಳಲ್ಲಿ ಒಂದು. ಇಲ್ಲಿಗೆ ದೇಶ-ವಿದೇಶಗಳಿಂದ ಪ್ರವಾಸಿಗರ ದಂಡು ಹರಿದುಬರುತ್ತಿದೆ. ಪಣಂಬೂರು ಬೀಚ್‌ನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ದಿಪಡಿಸಲು ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಮತ್ತು ಪಣಂಬೂರು ಬೀಚ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಯತೀಶ್ ಬೈಕಂಪಾಡಿಯವರು ಕೂಡ ಶ್ರಮ ವಹಿಸಿದ್ದಾರೆ.

 

ಮಂಗಳೂರಿನ ಪಣಂಬೂರು ಕಡಲತೀರವನ್ನು ಸಕ್ರಿಯಗೊಳಿಸುವುದರಲ್ಲಿ ಮಾತ್ರವಲ್ಲದೆ ನಮ್ಮ ದೇಶದ ಕಡಲತೀರಗಳ ಪಾಲನೆ, ನಿರ್ವಹಣೆ ಮತ್ತು ಸುರಕ್ಷತೆ, ಸ್ವಚ್ಚತೆಯ ಬಗೆಗಿನ ಸಂಪೂರ್ಣ ಹೊಣೆಯನ್ನು ಹೊರಲಾಗಿತ್ತು. ಕಡಲತೀರಗಳ ಬ್ಲೂ ಪ್ಲೇಗ್ ಪರಿಕಲ್ಪನೆಯನ್ನು ಕೇಳುವ ಮೊದಲೇ ಸ್ಥಳೀಯ ಸಂಪನ್ಮೂಲಗಳೊಂದಿಗೆ ಕಡಲತೀರದ ಮುಖವನ್ನು ಬದಲಾಯಿಸಲು ಸಾಧ್ಯವಾಗಿತ್ತು. ಸ್ಥಳೀಯ ಜನರ ಭಾವನೆಗಳನ್ನು ನೋಯಿಸದೆ ವಿಶೇಷವಾಗಿ ಮೀನುಗಾರ ಸಮುದಾಯದವರಿಗೆ ಕಡಲತೀರವೇ ಅವರ ಜೀವನವಾಗಿರುವುದರಿಂದ ಬೋಟ್ ರೇಸ್, ಅಂತರರಾಷ್ಟ್ರೀಯ ಗಾಳಿಪಟ ಉತ್ಸವ, ರಾಷ್ಟ್ರೀಯ ಮಟ್ಟದ ಕಬ್ಬಡಿ ಪಂದ್ಯಗಳು, ಕಡಲತೀರದ ಹಬ್ಬಗಳು, ಸರ್ಫಿಂಗ್ ಸ್ಪರ್ಧೆಗಳು ಮತ್ತು ಯೋಗ ಸೇರಿದಂತೆ ಇತರ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಾರ್ಯಕ್ರಮಗಳನ್ನು ನಡೆಸಿ ಪ್ರವಾಸಿಗರ ಗಮನವನ್ನು ಸೆಳೆಯಲಾಗಿತ್ತು.

ಇನ್ನು ಕಡಲ ತೀರದಲ್ಲಿ ಜೀವ ಉಳಿಸುವಿಕೆ, ದೋಣಿ ವಿಹಾರ, ಜೆಟ್ ಸ್ಕೀ, ಈವೆಂಟ್ ಮ್ಯಾನೇಜ್ಮೆಂಟ್ ಮತ್ತು ಇತರ ಕಡಲತೀರದ ಸಂಬಂಧಿತ ಚಟುವಟಿಕೆಗಳುನ್ನು ನಡೆಸಲಾಗಿತ್ತು. ಸರ್ಫ್ ಲೈಫ್ ಆಸ್ಟ್ರೇಲಿಯಾದ ತರಬೇತುದಾರರನ್ನು ತೊಡಗಿಸಿಕೊಂಡಿದ್ದ ಲೈಫ್‌ಗಾರ್ಡ್‌ಗಳಿಗೆ ತರಬೇತಿಯನ್ನು ಕೂಡ ನೀಡಲಾಗಿತ್ತು. ಒಂದು ಅವಧಿಯಲ್ಲಿ ಪಣಂಬೂರ್ ಬೀಚ್‌ನ ಲೈಫ್ ಗಾರ್ಡ್‌ಗಳು ಕಡಲತೀರದಲ್ಲಿ 300ಕ್ಕೂ ಹೆಚ್ಚು ಜೀವಗಳನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರವಾಹ ವಿಪತ್ತುಗಳು ಮತ್ತು ಮುಳುಗುವಿಕೆಯನ್ನು ಒಳಗೊಂಡ ಅಪಘಾತದ ಸಮಯದಲ್ಲಿ ಜೀವ ಉಳಿಸುವ ಚಟುವಟಿಕೆಗಳಲ್ಲಿ ನಿರತರಾಗಿದ್ದರು. ಪ್ರತಿ ವರ್ಷ 20ಕ್ಕಿಂತ ಹೆಚ್ಚು ಸಾವುಗಳು ಸಂಭವಿಸುವುದರ ನಡುವೆ ಲೈಫ್ ಗಾರ್ಡ್‌ಗಳ ಈ ಒಂದು ಸಾಧನೆಯು ನಮಗೆ ತೃಪ್ತಿಯನ್ನು ತಂದಿದೆ.
ದೇಶದ ಹಲವಾರು ಕಡಲತೀರಗಳು ನಮ್ಮ ಆಸಕ್ತಿಯ ಅಭಿವ್ಯಕ್ತಿಯಲ್ಲಿ ಮೊದಲಿಗೆ ಜಿಲ್ಲಾಡಳಿತಕ್ಕೆ ಸೂಚಿಸಿದ ಸ್ವರೂಪದಿಂದ ಒಂದು ಭಾಗವನ್ನು ಮಾತ್ರ ತೆಗೆದುಕೊಂಡು ಕಡಲತೀರಗಳನ್ನು ನಿರ್ವಹಿಸುವಲ್ಲಿ ಪಣಂಬೂರ್ ಬೀಚ್ ಮಾದರಿಯನ್ನು ಅನುಸರಿಸುತ್ತಿದ್ದೇವೆ ಎಂದು ಪಣಂಬೂರು ಬೀಚ್‌ನ ಸಿಇಒ ಯತೀಶ್ ಬೈಕಂಪಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *