Header Ads
Header Ads
Breaking News

ಭಾಗವತ ಪ್ರಸಾದ್ ಬಲಿಪರಿಗೆ ಶ್ರೀ ಕದ್ರಿ ಪ್ರಶಸ್ತಿ ಪ್ರದಾನ

ಭಾಗವತ ಪ್ರಸಾದ್ ಬಲಿಪ ಅವರಿಗೆ ಮಹಾನಗರಪಾಲಿಕೆ ಕಚೇರಿ ಬಳಿ ನಡೆದ ಕಟೀಲು ಮೇಳದ ಬಯಲಾಟ ಸಂದರ್ಭ ಶ್ರೀ ಕದ್ರಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕುಂಜತ್ತೋಡಿ ವಾಸುದೇವ ಭಟ್ ಕದ್ರಿ ಮನೆಯವರ ಹತ್ತನೇ ಹರಕೆ ಬಯಲಾಟದ ಸಂಭ್ರಮದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು.

ಪ್ರಶಸ್ತಿ ಪ್ರದಾನ ಮಾಡಿದ ಮೂಡಾ ಕಮಿಷನರ್  ಶ್ರೀಕಾಂತ್ ರಾವ್ ಜೆ. ಮಾತನಾಡಿ, ಯಕ್ಷಗಾನ ಶಾಸ್ತ್ರೀಯ ಕಲೆ. ಇದು ಪ್ರತಿಯಾಗದೆ, ವಿವಾದಕ್ಕೆ ಆಸ್ಪದ ಇಲ್ಲದಂತೆ ಬೆಳೆಯಬೇಕು ಎಂದರು. ಯಕ್ಷಗಾನ ಆಕಾಡೆಮಿ ಸದಸ್ಯ ಕದ್ರಿ ನವನೀತ ಶೆಟ್ಟಿ ಮಾತನಾಡಿ, ಶ್ರೇಷ್ಠ ಬಲಿಪ ಪರಂಪರೆಯ ಕೊಂಡಿ ಪ್ರಸಾದ್ ಬಲಿಪರು, ಮುಂದಿನ ತಿರುಗಾಟದ ವೇಳೆ ಪ್ರಸಂಗಕರ್ತರೂ ಆಗಲಿದ್ದಾರೆ ಎಂದರು. ಕಾಮನ್ ವೆಲ್ತ್ ಪವರ್ ಲಿಪ್ಟಿಂಗ್ ನಲ್ಲಿ ಚಿನ್ನದ ಪದಕ ಪಡೆದ ಋತ್ವಿಕ್ ಅಲೆವೂರಾಯ, ಕುಂಜತ್ತೋಡಿ ವಾಸುದೇವ ಭಟ್, ದೀಪಾ ಕೆ.ಎಸ್., ಪತ್ರಕರ್ತರ ಸಂಘದ ಜಿಲ್ಲಾ ಕೇಂದ್ರ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಕದ್ರಿ ಕಾರ್ಪೊರೇಟರ್ ಶಕೀಲಾ ಕಾವ ಇದ್ದರು. ಬಳಿಕ ಕಟೀಲು ಮೇಳದಿಂದ ಶ್ರೀದೇವಿ ಮಹಾತ್ಮೆ ಪ್ರದರ್ಶನಗೊಂಡಿತು.

Related posts

Leave a Reply

Your email address will not be published. Required fields are marked *