Header Ads
Breaking News

ಪ್ರಾಚೀನ ವೈಶಿಷ್ಟ್ಯತೆ ದಾಖಲಿಸಲು ಶೋಧ ಪ್ರಜ್ಞೆ ಅಗತ್ಯ : ಡಾ.ಡಿ.ವೀರೇಂದ್ರ ಹೆಗ್ಗಡೆಅಭಿಮತ

ಧರ್ಮಸ್ಥಳ, ಫೆ.28: ಹೊಸ ಪೀಳಿಗೆಯ ಪ್ರತಿಭಾನ್ವಿತರು ಭಾರತದ ಪ್ರಾಚೀನಕಾಲದಇತಿಹಾಸ ಪ್ರತಿನಿಧಿಸುವ ಶಾಸನ, ಸ್ಥಳನಾಮ ಮತ್ತಿತರ ಪುರಾವೆಗಳನ್ನು ಸಂಗ್ರಹಿಸಿ ಭಾರತೀಯಜ್ಞಾನಪರಂಪರೆಗೆ ಕೊಡುಗೆಗಳನ್ನು ನೀಡುವ ಸಂಶೋಧನಾ ಪ್ರಜ್ಞೆ ಹೊಂದಬೇಕುಎಂದುಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ ವೀರೇಂದ್ರ ಹೆಗ್ಗಡೆ ನುಡಿದರು.

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರಕಾಲೇಜಿನಇತಿಹಾಸ ವಿಭಾಗದ ಸಹಯೋಗದೊಂದಿಗೆಧರ್ಮಸ್ಥಳದ ವಸಂತ್ ಮಹಲ್ ಸಭಾಭವನದಲ್ಲಿಏರ್ಪಟ್ಟಭಾರತೀಯ ಪುರಾಭಿಲೇಖ ಸಂಸ್ಥೆಯ 45ನೇ ವಾರ್ಷಿಕಅಧಿವೇಶನ ಮತ್ತು ಭಾರತೀಯ ಸ್ಥಳನಾಮ ಸಂಸ್ಥೆಯ 39ನೇ ವಾರ್ಷಿಕ ಸಮಾವೇಶದಎರಡು ದಿನಗಳ ಜಂಟಿ ಅಧಿವೇಶನ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತವು ಉಳಿದ ದೇಶಗಳಂತಲ್ಲ. ವಿದೇಶಗಳಿಗೆ ಅವುಗಳದ್ದೇ ಆದ ಐತಿಹಾಸಿಕ ಹಿನ್ನೆಲೆಇದೆ. ಭಾರತಕ್ಕೆ ಆ ಐತಿಹಾಸಿಕ ಹಿನ್ನೆಲೆಯಜೊತೆಗೆಪ್ರಾಚೀನ ಪರಂಪರೆಯ ಶ್ರೇಷ್ಠ ಮಾದರಿಗಳ ಇತಿಹಾಸವೂಇದೆ. ಈಗಾಗಲೇ ಆಗಿಹೋದ ವಿವರಗಳ ಜೊತೆಗೆ ಪ್ರಾಚೀನ ಪರಂಪರೆಯ ಮೌಲಿಕತೆಯನ್ನು ಬಿಂಬಿಸುವ ಹಾಗೆ ಧಾರ್ಮಿಕ, ಆಧ್ಯಾತ್ಮಿಕ ಮತ್ತು ವಿವೇಚನಾತ್ಮಕ ಅಂಶಗಳ ಇತಿಹಾಸವನ್ನೂ ಭಾರತದಲ್ಲಿಕಾಣಬಹುದು. ವಿದ್ಯಾರ್ಥಿಗಳು ಈ ಪರಂಪರೆಯ ಒಳಗೇ ಇರುವ ಮಹತ್ವದ ಐತಿಹಾಸಿಕ ಅಂಶಗಳನ್ನು ಶೋಧಿಸುವುದರಕಡೆಗೆ ಹೆಚ್ಚಿನಆದ್ಯತೆ ನೀಡಬೇಕುಎಂದು ಸಲಹೆ ನೀಡಿದರು.

ಇತಿಹಾಸ, ಪ್ರಾಚೀನತೆಪ್ರತಿನಿಧಿಸುವ ವಸ್ತು, ವಿಚಾರಗಳನ್ನು ವರ್ತಮಾನದಲ್ಲಿ ಪ್ರಚುರಪಡಿಸುವುದರ ಹಿಂದೆ ಮೌಲಿಕ ಕಾರಣಗಳಿವೆ. ಸಂಗ್ರಹಿತ ವಸ್ತುಗಳ ಪ್ರದರ್ಶನ ಕೇವಲ ಪ್ರಚಾರದಉದ್ದೇಶಕ್ಕೆ ಮಾತ್ರವಲ್ಲ. ಬದಲಾಗಿ ಹಳೆಯದ್ದರ ಶ್ರೇಷ್ಠತೆಯನ್ನು ಹೊಸ ಪೀಳಿಗೆಗೆ ಪರಿಚಯಿಸುವ ಮಹತ್ವದಉದ್ದೇಶವೂ ಐತಿಹಾಸಿಕ ವಸ್ತುಪ್ರದರ್ಶನ ಕಾರ್ಯಕ್ರಮಗಳ ಹಿಂದಿರುತ್ತದೆಎಂದರು.

ಹಿಂದಿನ ಕಾಲದಲ್ಲಿಯಾವುದೇರೀತಿಯದಾಖಲೀಕರಣಅಥವಾತಂತ್ರಜ್ಞಾನದ ಸಹಾಯವಿಲ್ಲದೇಜ್ಞಾನ-ವಿಜ್ಞಾನದ ಮೌಲ್ಯಗಳು ಪೀಳಿಗೆಯಿಂದ ಪೀಳಿಗೆಗಳಿಗೆ ದಾಟಿಕೊಂಡವು. ಇದೀಗ ಹಳೆಯದ್ದರ ದಾಖಲೀಕರಣಕ್ಕೆತಂತ್ರಜ್ಞಾನದ ನೆರವಿದೆ. ವಿದ್ಯಾರ್ಥಿಗಳು ಈ ಆಯಾಮ ಪರಿಗಣಿಸಿ ಐತಿಹಾಸಿಕ, ಪ್ರಾಚೀನ ಅಂಶಗಳನ್ನು ಶೋಧಿಸುವಉತ್ಸಾಹತೋರಬೇಕುಎಂದರು.

ಈ ಸಂದರ್ಭದಲ್ಲಿಪ್ರಕಟಿತವಾದ ವಿಶೇಷ ಸಂಚಿಕೆಗಳನ್ನು ಎಸ್.ಡಿ.ಎಂ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ ಯಶೋವರ್ಮ, ಕಾಲೇಜಿನ ಪ್ರಾಂಶುಪಾಲ ಡಾ.ಸತೀಶ್ಚಂದ್ರ ಬಿಡುಗಡೆಗೊಳಿಸಿದರು. ಭಾರತೀಯ ಪುರಾಭಿಲೇಖ ಸಂಸ್ಥೆಯ ವತಿಯಿಂದಡಾ.ಡಿ ವೀರೇಂದ್ರ ಹೆಗ್ಗಡೆ, ಡಾ.ಬಿ ಯಶೋವರ್ಮ ಹಾಗೂ ಡಾ. ಸತೀಶ್ಚಂದ್ರಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿಭಾರತೀಯ ಪುರಾಭಿಲೇಖ ಸಂಸ್ಥೆಯಅಧ್ಯಕ್ಷಡಾ.ಟಿ.ಎಸ್‍ರವಿಶಂಕರ್, ಉಪಾಧ್ಯಕ್ಷ ಪಿ.ಎನ್ ನರಸಿಂಹಮೂರ್ತಿ, ಕಾರ್ಯಾಧ್ಯಕ್ಷಜೈ ಪ್ರಕಾಶ್ ಹಾಗೂ ಭಾರತೀಯ ಸ್ಥಳನಾಮ ಸಂಸ್ಥೆಯಕಾರ್ಯಾಧ್ಯಕ್ಷಡಾ.ಕೃಷೇಂದುರೇ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನುಡಾ. ಸತೀಶ್ಚಂದ್ರ ಸ್ವಾಗತಿಸಿದರು. ಸೂರ್ಯನಾರಾಯಣ ಭಟ್ ನಿರೂಪಿಸಿದರು.ಟಿ.ಎಸ್‍ರವಿಶಂಕರ್ ವಂದಿಸಿದರು.

Related posts

Leave a Reply

Your email address will not be published. Required fields are marked *