
ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಬೆಂಡೆಕೆರೆ ತಾಂಡ್ಯದಲ್ಲಿ ಚಿರತೆ ಪ್ರತ್ಯಕ್ಷವಾದ ಘಟನೆ ನಡೆದಿದೆ.
ಅದು ರಸ್ತೆಯಲ್ಲಿ ಬರುತ್ತಿದ್ದ ಸುಮಾರು 40 ವರ್ಷದ ರಾಜ ಗೋಪಾಲನಾಯಕ ಅವರ ಪತ್ನಿ ಭಾಗ್ಯಮ್ಮ ಮತ್ತು ಮಗು ಚಂದನ ಅವರ ಮೇಲೆ ದಾಳಿ ಮಾಡಲು ಮುಂದಾಗಿದೆ. ಪತ್ನಿಯನ್ನು ಚಿರತೆಯಿಂದ ರಕ್ಷಿಸಲು ರಾಜಗೋಪಾಲ ನಾಯಕ ಮುಂದಾಗಿದ್ದು ನಂತರ ಕುಪಿತಗೊಂಡ ಚರಿತೆಯು ರಾಜಗೋಪಾಲ ನಾಯಕನ ಮೇಲೆ ಎರಗಿದೆ. ತನ್ನ ಪ್ರಾಣರಕ್ಷಣೆಗಾಗಿ ಚಿರತೆಯನ್ನು ಕೊಂದು ಅದೃಷ್ಟವಶಾತ್ ಆ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.