Header Ads
Header Ads
Header Ads
Breaking News

ಪ್ರಾದೇಶಿಕ ಅರಣ್ಯ ಕ್ರೀಡಾಕೂಟ ತೆರೆ ಮೂಡಬಿದ್ರೆ ಸ್ವರಾಜ್ ಮೈದಾನದಲ್ಲಿ ಸಮಾಪ್ತಿ

ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ಮತ್ತು ಕೊಡಗು ಅರಣ್ಯ ವೃತ್ತಗಳ ಪ್ರಾದೇಶಿಕ ಕ್ರೀಡಾಕೂಟದಲ್ಲಿ 334 ಅಂಕಗಳನ್ನು ಪಡೆದುಕೊಂಡ ಮಂಗಳೂರು ವೃತ್ತ ಚಾಂಪಿಯನ್ ಚಾಂಪಿಯನ್ ಆಗಿ ಮೂಡಿಬಂದಿದೆ. ಮುಕ್ತ ಮಹಿಳಾ ವಿಭಾಗದಲ್ಲಿ ದೀಕ್ಷಾ ಕೆ. ಮಂಗಳೂರು, ಮುಕ್ತ ಪುರುಷ ವಿಭಾಗದಲ್ಲಿ ಸುನೀಲ್ ಬಾಬು, ಸತ್ಯನ್ ಡಿ.ಜಿ, ವೆಟರನ್ ವಿಭಾಗದಲ್ಲಿ ಪ್ರವೀಣ್ ಶೆಟ್ಟಿ ಮಂಗಳೂರು, ಸೀನಿಯರ್ ವೆಟರನ್ ವಿಭಾಗದಲ್ಲಿ ಸತೀಶ್ ಬಾಬಾ ರೈ ವೈಯಕ್ತಿಕ ಚಾಂಪಿಯನ್ ಆಗಿ ಮೂಡಿಬಂದರು. ಇನ್ನೂ ಮೂಡಬಿದ್ರೆಯ ಸ್ವರಾಜ್ ಮೈದಾನದಲ್ಲಿ ಕ್ರೀಡಾಕೂಟದ ಸಮಾರೋಪ ಸಮಾರಂಭದ ಸಚಿವ ಅರಣ್ಯ ಸಚಿವ ಬಿ.ರಮಾನಾಥ ರೈ ಪಾಲ್ಗೊಂಡು ಮಾತನಾಡಿದರು.

ಈಗಾಗಲೇ 70 ಮಂದಿ ಕ್ರೀಡಾಪಟುಗಳಿಗೆ ಅರಣ್ಯ ಇಲಾಖೆಯಲ್ಲಿ ಪ್ರಥಮ ಹಂತದಲ್ಲಿ ನೇಮಕಾತಿ ಮಾಡಲಾಗಿದೆ. ಎರಡನೇ ಹಂತದಲ್ಲಿ ಮತ್ತಷ್ಟು ಕ್ರೀಡಾಪಟುಗಳನ್ನು ಇಲಾಖೆಗೆ ನೇಮಕಾತಿ ಶೀಘ್ರವೇ ಮಾಡಲಾಗಿದೆ. ಮುಂದಿನ ವರ್ಷದಿಂದ ಅರಣ್ಯ ಇಲಾಖೆ ಕ್ರೀಡಾ ಸಪ್ತಾಹ ಮಾಡುವ ಚಿಂತನೆಯಿದೆ ಎಂದು ಹೇಳಿದರು. ಈ ವೇಳೆ ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್ ಖಾದರ್, ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಎಸ್.ನೆಟಲ್‌ಕರ್, ಮಂಗಳೂರು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಸಂಜಯ್ ಎಸ್.ಬಿಜ್ಜೂರ್, ಮತ್ತಿತರು ಉಪಸ್ಥತಿರಿದ್ರು.

Related posts

Leave a Reply