Breaking News

ಪ್ರಿಪೇಯ್ಡ್ ಆಟೋ ದರ ಬಗೆಗೆ ಸಾರ್ವಜನಿಕರ ದೂರು ಹಿನ್ನೆಲೆ, ಮಂಗಳೂರು ಸೆಂಟ್ರಲ್ ರೈಲ್ವೇ ಸ್ಟೇಷನ್‌ಗೆ ಕಮಿಶನರ್ ಚಂದ್ರಶೇಖರ್ ಭೇಟಿ

ಮಂಗಳೂರಿನ ಸೆಂಟ್ರಲ್ ರೈಲ್ವೇ ಸ್ಟೇಷನ್‌ನಲ್ಲಿ ಪ್ರಿಪೇಡ್ ಆಟೋ ದರದಲ್ಲಿ ದುಪ್ಪಟ್ಟು ಹಣ ವಸೂಲಾತಿ ಮಾಡಲಾಗುತ್ತಿರುವ ದೂರಿನ ಮೇರೆಗೆ ಪೋಲಿಸ್ ಕಮೀಷನರ್ ಚಂದ್ರಶೇಖರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಆಟೋ ದರದಲ್ಲಿ ಹೆಚ್ಚುವರಿ ಹಣ ವಸೂಲು ಮಾಡದ ರೀತಿಯಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು. ಇನ್ನೂ ಮೇಲೆ ಆಟೋ ಪ್ರಿಪೇಡ್‌ನ್ನು ಕಂಪ್ಯೂಟರೀಕರಣಗೊಳಿಸಿಲಾಗುವುದು ಅಂತಾ ಹೇಳಿದರು. ಡಿಸಿಪಿ ಸಂಜೀವ್ ಪಾಟೀಲ್, ಅಪರ ಆರ್‌ಟಿ‌ಓ ಅಧಿಕಾರಿ ಜಿ. ಎಸ್. ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು. ಈ ನಡುವೆ ಟ್ರಾಫಿಕ್ ಪೊಲೀಸರ ನೇತೃತ್ವದಲ್ಲಿ ಆಟೋ ಪ್ರಿಪೇಡ್ ದರ ಹಾಗೂ ಸಾರ್ವಜನಿಕ ದೂರು ಪೆಟ್ಟಿಗೆಯನ್ನು ಅಳವಳಡಿಸಿಕೊಳ್ಳಲಾಗಿದೆ.

Related posts

Leave a Reply