Header Ads
Header Ads
Breaking News

ಪ್ರಿ. ಬಿ.ಎಂ. ಇಚ್ಲಂಗೋಡು ಅವರು ರಚಿಸಿದ ಪ್ರಪ್ರಥಮ ಬ್ಯಾರಿ ವ್ಯಾಕರಣ ಪುಸ್ತಕ ಲೋಕಾರ್ಪಣೆ

ಮೂಡುಬಿದ್ರೆಯ ಕನ್ನಡ ಸಂಘದ ವತಿಯಿಂದ ಪ್ರಿ. ಬಿ.ಎಂ. ಇಚ್ಲಂಗೋಡು ಅವರು ರಚಿಸಿದ ಪ್ರಪ್ರಥಮ ಬ್ಯಾರಿ ವ್ಯಾಕರಣ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆಯಿತು.

ಬ್ಯಾರಿ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಎಡ್ವಕೇಟ್ ಮಹಮ್ಮದ್ ಹನೀಫರವರ ದಿವ್ಯ ಹಸ್ತದಿಂದ ಪುಸ್ತಕವನ್ನು ಅನಾವರಣ ಮಾಡಲಾಯಿತು. ಈ ಸಂದರ್ಭ ಮಾತನಾಡಿದ ಅವರು, 1982ರಿಂದೀಚೆಗೆ ಬ್ಯಾರಿ ಬಾಷೆಯನ್ನು ನಿರಂತರ ಸಂಶೋಧನೆ ಮತ್ತು ಬರಹಗಳ ಮೂಲಕ ಉಳಿಸುವ ಕೆಲಸವನ್ನು ಪ್ರೊ. ಇಚ್ಲಂಗೋಡು ಮಾಡಿದ್ದಾರೆ. ಇದೀಗ ಬ್ಯಾರಿ ವ್ಯಾಕರಣ ಪುಸ್ತಕವನ್ನು ರಚಿಸಿದ್ದು, ಅತಿ ಸರಳ ರೂಪದಲ್ಲಿ ಬ್ಯಾರಿ ಪದಗಳ ಪ್ರಯೋಗ ಮತ್ತು ವಾಕ್ಯ ರಚನೆಯ ವಿವರ ಕೃತಿಯಲ್ಲಿದೆ. ಬ್ಯಾರಿ ಭಾಷೆಯ ಮೇಲಿನ ಅರಬೀ ಭಾಷಾ ಪ್ರಭಾವವನ್ನು ಈ ಕೃತಿಯು ತೋರಿಸಿಕೊಟ್ಟಿದೆ ಎಂದು ಹೇಳಿದರು.ಈ ಸಂದರ್ಭ ಬ್ಯಾರಿ ಸಾಹಿತಿ ಬಿ.ಎ. ಸಂಶುದ್ದಿನ್, ಕನ್ನಡ ಸಂಘದ ಕಾರ್ಯದರ್ಶಿ ಜೀವನ್ ಮತ್ತು ಹಾರೀಸ್ ಇಚ್ಲಂಗೋಡು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *