Header Ads
Breaking News

ಪ್ರೀತಿಯ ಅಮಲಲ್ಲಿ ಬಿದ್ದು ಪ್ರಿಯತಮನಿಂದಲೇ ಕೊಲೆಯಾದಳು ನತದೃಷ್ಟೆ..!ಮದುವೆಯಾಗಿದೆ ಎಂದು ಸುಳ್ಳು ಹೇಳಿ ಪಿಜಿಯಲ್ಲಿ ವಾಸವಾಗಿದ್ರು ಪ್ರೇಮಿಗಳು..!

 ಆಕೆ ಸ್ಪುರದ್ರೂಪಿ ಚೆಲುವೆ.. ಚಿಕ್ಕಮಗಳೂರುನಿಂದ ವಿಧ್ಯಾಭ್ಯಾಸಕ್ಕೆ ಅಂತ ಉಜಿರಗೆ ಬಂದ ಯುವತಿ ಪ್ರೀತಿಯ ಅಮಲಲ್ಲಿ ಬಿದ್ದು, ಮಂಗಳೂರಿನಲ್ಲಿ ತನ್ನ ಪ್ರಿಯತಮನಿಂದ ಕೊಲೆಯಾದ ನತದೃಷ್ಟೆ.. ಅಷ್ಟಕ್ಕೂ ಉಜಿರೆಯಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದ ಯುವತಿ ಮಂಗಳೂರಿನ ಹುಡುಗರ ಪಿಜಿಯಲ್ಲಿ ಹೇಗೆ ಕೊಲೆಯಾದಳು,, ಅನ್ನೋ ರೋಚಕ ಸ್ಟೋರಿ ಇಲ್ಲಿದೆ ನೋಡಿ..
 ಚಿಕ್ಕಮಗಳೂರು ಮೂಲದ ಮಂಜುನಾಥ ಎಂಬುವವರ ಮಗಳು ಅಂಜನಾ ವರಿಷ್ಠ ಎಂಬ ಯುವತಿ ಉಜಿರೆಯ ಕಾಲೇಜಿನಲ್ಲಿ ಎಮ್‌ಎಸ್‌ಸಿ ಮುಗಿಸಿ, ಬ್ಯಾಂಕ್ ಪರೀಕ್ಷೆ ಬರೆಯುದಕ್ಕಾಗಿ ಮಂಗಳೂರಿಗೆ ಬಂದಿದ್ದಳು. ಬರುವಾಗ ತನ್ನ ಪ್ರಿಯತಮ ವಿಜಯಪುರ ಜಿಲ್ಲೆಯ ಸಿಂಧಗಿ ನಿವಾಸಿ ೨೭ ವರ್ಷದ ಸಂದೀಪ್ ರಾಥೋಡ್ ಎಂಬುವನನ್ನು ಕರೆದುಕೊಂಡು ಬಂದು ಮಂಗಳೂರಿನ ಅತ್ತಾವರದಲ್ಲಿ ಪಿಜಿಯಲ್ಲಿ ಇದ್ದು ನಾವು ಗಂಡ ಹೆಂಡತಿ ಅಂತ ಹೇಳಿದ್ರು.. ನಂತರ ಆಕೆ ಎರಡು ದಿನ ಇದ್ದು ಊರಿಗೆ ಹೋಗಿದ್ದ ಆಕೆಯನ್ನು ಸಂದೀಪ್ ರಾಥೋಡ್ ನಿನ್ನೆ ಮತ್ತೆ ಮಂಗಳೂರಿನ ಅತ್ತಾವರದ ಪಿಜಿಗೆ ಕರೆಸಿ ವೈರ್‌ನಿಂದ ಉಸಿರು ಗಟ್ಟಿಸಿ ಕೊಲೆ ಮಾಡಿದ್ದಾನೆ…

ನಂತರ ಸಂಜೆ ಪಿಜಿ ಗುಡಿಸಲು ಬಂದ ಕೆಲಸದಾಕೆ ಎಷ್ಟು ಕಾದರೂ ಕೋಣೆಯಲ್ಲಿ ಯಾರು ಮಾತನಾಡದೇ ಇದ್ದಾಗ ಕೋಣಿಯ ಒಳಗೆ ಹೋಗಿ ನೋಡಿದಾಗ ಯುವತಿ ಶವವಾಗಿದ್ದಳು.. ಬೆಡ್‌ನಲ್ಲಿ ಮಲಗಿಸಿದ ರೀತಿಯಲ್ಲಿ, ಕತ್ತಿನಲ್ಲಿ ಕೇಬಲ್ ವೈರ್ ಕೂಡಾ ಇತ್ತು. ಘಟನಾ ಸ್ಥಳಕ್ಕೆ ಬಂದ ಪೊಲೀಸರು ಇದು ಕೊಲೆ ಎಂದು ಅನುಮಾನ ವ್ಯಕ್ತಪಡಿಸಿದ್ದರು. ತನಿಖೆ ಮಾಡುತ್ತಿರುವಾಗ ಈ ಕೊಲೆಯನ್ನು ಸ್ವತಃ ಗೆಳೆಯನೇ ಮಾಡಿರುವುದು ಪ್ರಾಥಮಿಕ ತನಿಖೆ ಮೂಲಕ ಗೊತ್ತಾಗಿದೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಮಂಗಳೂರು ಪೊಲೀಸರು ಆರೋಪಿ ಸಂದೀಪ್‌ನನ್ನು ೨೪ ಗಂಟೆ ಒಳಗಡೆ ಸಿಂಧಗಿಯಲ್ಲಿ ಬಂಧಿಸಿದ್ದಾರೆ …

ಪ್ರಾಥಮಿಕ ಮಾಹಿತಿಯಲ್ಲಿ ಇವರಿಬ್ಬರ ಮಧ್ಯೆ ಮದುವೆ ವಿಚಾರದಲ್ಲಿ ಗಲಾಟೆಯಾಗಿರೋದು ಗೊತ್ತಾಗಿದೆ. ಪೊಲೀಸರು ಹೆಚ್ಚಿನ ತನಿಖೆ ಮುಂದುರಿಸಿದ್ದಾರೆ.

Related posts

Leave a Reply

Your email address will not be published. Required fields are marked *