
ಪ್ರೊ. ಇಬ್ರಾಹಿಂ ಬ್ಯಾರಿ ಅವರು ಬರೆದ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗಾಗಿ ನಾಲ್ಕು ಪುಸ್ತಕಗಳನ್ನು ಬರೆದಿದ್ದು ಆ ಪುಸ್ತಕಗಳ ಬಿಡುಗಡೆ ಸಮಾರಂಭವು ಡಿಸೆಂಬರ್ 20ರಂದು ಮಂಗಳೂರಿನ ರವೀಂದ್ರ ಕಲಾಭವನದಲ್ಲಿ ನಡೆಯಲಿದೆ.
ಈ ಬಗ್ಗೆ ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರೊ. ಇಬ್ರಾಹಿಂ ಬ್ಯಾರಿ ಅವರು, ಲಾಕ್ಡೌನ್ ಅವಧಿಯಲ್ಲಿ ಕೆಲಸದ ಒತ್ತಡ ಇಲ್ಲದ ಸಂದರ್ಭ ಕುವೆಂಪು ವಿಶ್ವವಿದ್ಯಾಲಯದ ಅಂತಿಮ ಬಿಕಾಂ ಪದವಿಯ ಒಂದು ಪುಸ್ತಕ, ದಾವಣಗೆರೆ ವಿಶ್ವವಿದ್ಯಾನಿಲಯದ ಅಂತಿಮ ಬಿಕಾಂಗೆ ಒಂದು ಪುಸ್ತಕ, ಮಂಗಳೂರು ವಿಶ್ವವಿದ್ಯಾನಿಲಯದ ಪ್ರಥಮ ಬಿ.ಕಾಂಗೆ ಒಂದು ಪುಸ್ತಕ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಥಮ ಎಂ.ಕಾಂಗೆ ಒಂದು ಹೀಗೆ ನಾಲ್ಕು ಪುಸ್ತಕಗಳನ್ನು ಬರೆದಿದ್ದೇನೆ. ಆ ಪುಸ್ತಕಗಳನ್ನು ಡಿಸೆಂಬರ್ 20ರಂದು ಮಧ್ಯಾಹ್ನ 3.30ಕ್ಕೆ ಮಂಗಳೂರಿನ ವಿಶ್ವವಿದ್ಯಾನಿಲಯದ ರವೀಂದ್ರ ಕಲಾಭವನದಲ್ಲಿ ಬಿಡುಗಡೆ ಸಮಾರಂಭ ನಡೆಯಲಿದೆ. ಈಗ ಬಿಡುಗಡೆಯಾಗುತ್ತಿರುವ ಪುಸ್ತಕಗಳು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ತುಂಬಾ ಮೆಚ್ಚುಗೆಯಾಗುವುದರಲ್ಲಿ ಸಂಶಯವಿಲ್ಲ. ಈ ಪುಸ್ತಕಗಳ ವಿಶೇಷವೆಂದ್ರೆ ಪ್ರತಿ ಟಾಪಿಕ್ ನಂತರ ಆ ಟಾಪಿಕ್ಗೆ ಸಂಬಂಧಪಟ್ಟ ಹಿಂದಿನ ವಿಶ್ವವಿದ್ಯಾನಿಲಯದ ಪ್ರಶ್ನೆಪತ್ರಿಕೆಯ ಪ್ರಶ್ನೆಗಳನ್ನು ಸಾಲ್ವ್ ಮಾಡಿರುವುದು ಎಂದು ಹೇಳಿದರು.
ಇನ್ನು ಪುಸ್ತಕವನ್ನು ಮಂಗಳೂರು ಯುನಿವರ್ಸಿಟಿಯ ವಯ್ಸ್ ಚಾನ್ಸಲರ್ ಪ್ರೊ. ಪಿ.ಎಸ್. ಯಡಪಡಿತ್ತಾಯ ಬಿಡುಗಡೆ ಮಾಡಲಿದ್ದಾರೆ. ಇನ್ನು ಮುಖ್ಯ ಅತಿಥಿಗಳಾಗಿ ಡಾ. ಎಸ್. ಬಿ. ಅಪ್ಪಾಜಿ ಗೌಡ, ಪ್ರೊ. ಸಿ. ರಾಜಶೇಖರ್ ಹೆಬ್ಬಾರ್, ಶಾಸಕ ಯು.ಟಿ. ಖಾದರ್, ಮಾಜಿ ಎಮ್ಎಲ್ಸಿ ಐವನ್ ಡಿಸೋಜಾ, ಡಾ. ಎ. ಹರೀಶ್, ಪ್ರೊ. ಅಬ್ದುಲ್ ಶರೀಫ್, ಮೊದಲಾದವರು ಭಗವಹಿಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಹುಸೈನ್ ಕಾಟಿಪಳ್ಳ, ಅಶ್ಪಕ್, ಬಶೀರ್ ಉಪಸ್ಥಿತರಿದ್ದರು.