Header Ads
Breaking News

ಪ್ರೊ. ಗೋಪಾಲ್ ಪಟವರ್ಧನ್‍ರಿಗೆ ಸನ್ಮಾನ

ಇತ್ತೀಚಿಗೆ ನಿವೃತ್ತರಾದ ಉಜಿರೆ ಎಸ್.ಡಿ.ಎಂ ಪದವಿ ಕಾಲೇಜಿನ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಗೋಪಾಲ್ ಪಟವರ್ಧನ್‍ರಿಗೆ ಅವರನ್ನು ಕಾಲೇಜಿನ ಪ್ರಾಧ್ಯಾಪಕರ ಸಂಘವು ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಸನ್ಮಾನಿಸಿತು.

 

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ವೃತ್ತಿಪರ ಅನುಭವಗಳ ಮೆಲುಕು ಹಾಕಿದರು. ಎಸ್.ಡಿ.ಎಂ ಸಂಸ್ಥೆಯಲ್ಲಿ
ವಿದ್ಯಾರ್ಥಿಯಾಗಿ ಹಾಗೂ ಅಧ್ಯಾಪಕನಾಗಿ ಸೇವೆ ಸಲ್ಲಿಸಿದ ದಿನಗಳನ್ನು ಭಾವುಕರಾಗಿ ನೆನಪಿಸಿಕೊಂಡರು. ಅಧ್ಯಾಪಕನಾಗಿ ಸೇವೆ ಸಲ್ಲಿಸುವ ಮೊದಲು ತಾವು ಇದೇ ಸಂಸ್ಥೆಯ ವಿದ್ಯಾರ್ಥಿಯಾಗಿದ್ದನ್ನು ಹಾಗೂ ವಿದ್ಯಾರ್ಥಿ ಜೀವನದ ಅನುಭವವನ್ನು ಮೆಲುಕು ಹಾಕಿಕೊಂಡರು.
‘1999ರಲ್ಲಿ ನಾನು ವಿಭಾಗ ಮುಖ್ಯಸ್ಥನಾದಾಗ ಕೆಲವು ವರ್ಷ ನಮ್ಮ ವಿಭಾಗಕ್ಕೆ ಸರಿಯಾದ ಅಧ್ಯಾಪಕರು ಇರಲಿಲ್ಲ.
ನಂತರ ನಮ್ಮ ವಿಭಾಗ ಗಟ್ಟಿಯಾಗುತ್ತಾ ಹೋಯಿತು. ಅಧ್ಯಾಪಕರು, ವಿದ್ಯಾರ್ಥಿಗಳ ಸಂಖ್ಯೆ ಬೆಳೆಯುತ್ತಾ ಹೋಯಿತು. ಆದರೂ ಅಲ್ಲಿಂದ ಇಲ್ಲಿಯವರೆಗೂ ನನಗೆ ಎಲ್ಲರೂ ಉತ್ತಮ ಸಹಕಾರ ನೀಡಿದ್ದಾರೆ’ ಎಂದು ವಿಭಾಗದ ಮೇಲೆ ತಮಗಿರುವ ಅಭಿಮಾನವನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಪ್ರೊ. ಗೋಪಾಲ್ ಪಟವರ್ಧನ್ ಅವರ ಸಹೋದ್ಯೋಗಿ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ವಂದನಾ ಜೈನ್ ಮಾತನಾಡಿದರು.

 

ಮನಃಶಾಸ್ತ್ರದಲ್ಲಿ ಅಬ್ರಹಾಮ್ ಮಾಸ್ಲೋ ಎಂಬ ಮನಃ ಶಾಸ್ತ್ರಜ್ಞ  ‘ಹೈರಾರ್ಕಿ ಆಫ್ ನೀಡ್ಸ್’ ಎನ್ನುವ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. ಅದರ ಪ್ರಕಾರ ಇರುವುದರಲ್ಲಿಯೇ ತೃಪ್ತಿ ಪಡುವುದು ಮನುಷ್ಯ ಜೀವನದ ಪ್ರಮುಖ ಹಾಗೂ ಕೊನೆಯ ಘಟ್ಟ. ಈಗ ಇರುವುದರಲ್ಲಿಯೇ ತೃಪ್ತಿ ಪಡುವ ಮನಸ್ಥಿತಿ ಎಲ್ಲರಿಗೂ ಬರುವುದಿಲ್ಲ. ಬದ್ಧತೆ ಶ್ರದ್ಧೆಯ ಮುಖಾಂತರ ಇರುವುದರಲ್ಲಿಯೇ ತೃಪ್ತಿಪಟ್ಟು ಇವರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.
ಪ್ರಾಂಶುಪಾಲ ಪ್ರೊ. ಎಸ್. ಸತೀಶ್ಚಂದ್ರ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ ಮುಖ್ಯಸ್ಥ ಡಾ. ಬಿ. ಗಣಪಯ್ಯ, ಡಾ.ಕೆ. ಶಂಕರನಾರಾಯಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನ ಇಂಗ್ಲೀಷ್ ವಿಭಾಗದ ಅಧ್ಯಾಪಕಿ ಸ್ಮಿತಾ ಹೆಚ್ ಬೆಡೇಕರ್ ಕಾರ್ಯಕ್ರಮ ನಿರ್ವಹಿಸಿದರು.

Related posts

Leave a Reply

Your email address will not be published. Required fields are marked *