Header Ads
Header Ads
Breaking News

ಪ್ಲಾಸ್ಟಿಕ್ ನಿಷೇಧ ಮಕ್ಕಳಿಂದಲೇ ಆರಂಭವಾಗಬೇಕು:ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ

ತ್ಯಾಜ್ಯ ಸಮಸ್ಯೆ ಮತ್ತು ಪ್ಲಾಸ್ಟಿಕ್ ನಿಶೇಧ ಮಕ್ಕಳಿಂದ ಪ್ರಾರಂಭವಾಗಬೇಕು. ಮಕ್ಕಳು ತಮ್ಮ ಮನೆಯ ಹಿರಿಯರಿಗೆ ಇದರಬಗ್ಗೆ ಮಾಹಿತಿ ನೀಡಿ ಈ ಸಮಸ್ಯೆಯನ್ನು ಬಗೆ ಹರಿಸಲು ಸಹಕಾರಿ ಯಾಗಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹೇಳಿದರು.ಹೆಜಮಾಡಿ ಪಂಚಾಯತ್ ವಠಾರದಲ್ಲಿ ಎಸ್.ಎಲ್.ಆರ್.ಎಮ್ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಜಿಲ್ಲೆಯ ಬಹು ದೊಡ್ಡ ಸಮಸ್ಯೆ ತ್ಯಾಜ್ಯ ವಿಲೆವಾರಿ. ಇದನ್ನು ಮನಗಂಡು ಹೆಜಮಾಡಿ ಪಂಚಾಯತ್ ನವರು ಜೋಡಿ ಗುಂಡಿ ಶೌಚಾಲಯದೊಂದಿಗೆ ಎಸ್.ಎಲ್.ಆರ್.ಎಮ್ ಘಟಕ ಸ್ಥಾಪಿಸಿ ಜಿಲ್ಲೆಗೆ ಮಾದರಿಯಾಗಿದ್ದಾರೆ. ಪ್ಲಾಸ್ಟಿಕ್ ಸೇವನೆಯಿಂದ ಹಲವಾರು ಜಾನುವಾರುಗಳು ಪ್ರಾಣ ಕಳಕೊಂಡ ಉದಾಹರಣೆ ಇದೆ. ಪ್ಲಾಸ್ಟಿಕ್ ಬಳಕೆಯಿಂದ ಮಾರಕ ಖಾಯಿಲೆಗಳು ಬರುವ ಸಾಧ್ಯತೆಗಳಿವೆ. ಇದರ ಬಗ್ಗೆ ಸಮಾಜಕ್ಕೆ ತಿಳುವಳಿಕೆ ಕೊಟ್ಟು ಸಂಪೂರ್ಣ ಪ್ಲಾಸ್ಟಿಕ್ ನಿಶೇಧವಾಗಬೇಕು. ಮನೆಯಲ್ಲಿ ಉತ್ಪತ್ತಿಯಾಗುವ ಕಸಗಳನ್ನು ತಾವೇ ವಿಲೇವಾರಿ ಮಾಡುವ ಮೂಲಕ ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಬೇಕು ಎಂದರು.ಎಸ್.ಎಲ್.ಆರ್.ಎಮ್ ಘಟಕದ ಉದ್ಘಾಟನೆಯನ್ನು ಜಿಲ್ಲಾಪಂಚಾಯತ್ ಅಧ್ಯಕ್ಷ ದಿನಕರಬಾಬು ನೆರವೇರಿಸಿದರು. ಈ ಸಂದರ್ಭ ತ್ಯಾಜ್ಯ ವಿಲೆವೇರಿ ಸಹಿತ ಇತರೆ ಉತ್ತಮ ಸೇವೆ ಪರಿಗಣಿಸಿ ನಾಲ್ವರನ್ನು ಸಮ್ಮಾನಿಸಲಾಯಿತು. ಜಿಲ್ಲಾಧಿಕಾರಿಗಳು ಪ್ಲಾಸ್ಟಿಕ್ ನಿಶೇಧಿಸುವ ಬಗ್ಗೆ ಪ್ರಮಾಣ ವಚನ ಭೋದಿಸಿದರು ಮತ್ತು ಪ್ಲಾಸ್ಟಿಕ್ ಚೀಲದ ಬದಲಿಗಾಗಿ ಬಟ್ಟೆ ಚೀಲ ವಿತರಿಸಿದರು. ಉಡುಪಿ ಸಿ.ಎ.ಒ ಶಿವಾನಂದ ಕಾಪಸಿ ತ್ಯಾಜ್ಯ ವಿಲೇವಾರಿ ಮಾಡುವ ಕೆಂಪು ಮತ್ತು ಹಸಿರು ಬಕೇಟ್ ವಿತರಿಸಿದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ.ಕೆ ಶೆಟ್ಟಿ, ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾಲೂಕು ಪಂಚಾಯತ್ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್,ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್, ಉಪಾಧ್ಯಕ್ಷ ಸುಧಾಕರ್ ಕರ್ಕೇರ ಮುಂತಾದವರಿದ್ದರು.

Related posts

Leave a Reply