Header Ads
Header Ads
Header Ads
Breaking News

ಪ್ಲಾಸ್ಟಿಕ್ ಬಾಟಲಿಯೊಳಗೆ ತಲೆ ಸಿಕ್ಕಿಸಿಕೊಂಡ ಬೀದಿ ನಾಯಿ ಅನ್ನ, ಆಹಾರವಿಲ್ಲದೆ ಸುತ್ತಾಡುತ್ತಿದ್ದ ನಾಯಿ ಸಾಮಾಜಿಕ ಕಾರ್ಯಕರ್ತರಿಂದ ನಾಯಿಯ ರಕ್ಷಣೆ

ಉಡುಪಿಯ ಒಳಕಾಡು ವಾರ್ಡಿನಲ್ಲಿ ಬೀದಿ ನಾಯಿಯೊಂದು ಚಾಕಲೇಟ್ ಬಾಟಲಿಯೊಳಗೆ ತಲೆ ಸಿಕ್ಕಿಸಿಕೊಂಡು ಅನ್ನ ಆಹಾರ ಇಲ್ಲದೆ ಕಳೆದು ಎಂಟು ದಿನಗಳಿಂದ ಸುತ್ತಾಡುತ್ತ, ಅಸಹಾಯಕ ಪರಿಸ್ಥಿತಿಯಲ್ಲಿದ್ದ ನಾಯಿಯ ತಲೆ ಭಾಗದಿಂದ ಬಾಟಲಿ ತೆಗೆದು ಸಾಮಾಜಿಕ ಕಾರ್ಯಕರ್ತರು ರಕ್ಷಿಸಿದ್ದಾರೆ.

ನಗರದಲ್ಲಿ ತಲೆಯೊಳಗೆ ಬಾಟಲಿ ಸಿಕ್ಕಿಸಿ ಕೊಂಡ ನಾಯಿಯ ಚಿಂತಾಜನಕ ಪರಿಸ್ಥಿತಿಯ ಬಗ್ಗೆ ಸ್ಥಳಿಯರಿಂದ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ಗಮನಕ್ಕೆ ಬಂದಿದೆ. ಕಳೆದ ಏಳು ದಿನಗಳಿಂದ ನಾಯಿಯನ್ನು ಸೆರೆ ಹಿಡಿಯಲು ಪ್ರಯತ್ನಿಸಿದ್ದಾರೆ. ತಪ್ಪಿಸಿ ಕೊಂಡ ನಾಯಿ ಪ್ರಯತ್ನ ವಿಫಲಗೊಳಿಸಿದೆ. ಬೀದಿ ಶ್ವಾನವಾದರಿಂದ ಕಚ್ಚುತ್ತದೆ ಎನ್ನುವ ಭೀತಿಯು ಸಾಮಾಜಿಕ ಕಾರ್ಯಕರ್ತರಿಗೆ ಎದುರಾಗಿತ್ತು.

ಅನ್ನ ಆಹಾರ ಇಲ್ಲದೆ ನಿತ್ರಾಣಗೊಂಡ ನಾಯಿ ನ.30 ರಂದು ಸುಲಭವಾಗಿ ಸೆರೆ ಸಿಕ್ಕಿದೆ. ತದನಂತರ ನಿತ್ಯಾನಂದ ಒಳಕಾಡು, ವಿನಯಚಂದ್ರ ಸಾಸ್ತನ ಸೇರಿಕೊಂಡು ನಾಯಿಯ ಕುತ್ತಿಯೊಳಗಿದ್ದ ಬಾಟಲಿಯನ್ನು ಬೆರ್ಪಡಿಸಿದ್ದಾರೆ. ನಂತರ ನಾಯಿ ಬದುಕಿದೆಯೇ ಬಡ ಜೀವವೆಂದು ಪಲಾಯನ ಮಾಡಿದೆ. ಬೀದಿ ಶ್ವಾನ ರಕ್ಷಿಸಿದ, ಸಾಮಾಜಿಕ ಕಾರ್ಯಕರ್ತರ ಪ್ರಾಣಿದಯೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ನಗರಾಡಳಿತ ನಗರದಲ್ಲಿ ಹೆಚ್ಚಳ ಕಂಡಿರುವ ಬೀದಿ ನಾಯಿಗಳ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳ ಬೇಕೆಂದು ಸಾಮಾಜಿಕ ಕಾರ್ಯಕರ್ತರು ಆಗ್ರಹಪಡಿಸಿದ್ದಾರೆ.

*ವರದಿ: ಪಲ್ಲವಿ ಉಡುಪಿ ..

Related posts

Leave a Reply