Header Ads
Breaking News

ಪ್ಲಾಸ್ಟಿಕ್ ಮುಕ್ತ ಉಡುಪಿ ಅಭಿಯಾನ : ಸಾರ್ವಜನಿಕರಿಗೆ ಬಟ್ಟೆಯ ಚೀಲ ವಿತರಣೆ

 ಬಟ್ಟೆಯ ಚೀಲಗಳನ್ನು ಸಾರ್ವಜನಿಕರಿಗೆ ಹಂಚುವುದರ ಮೂಲಕ ಪ್ಲಾಸ್ಟಿಕ್ ಮುಕ್ತ ಉಡುಪಿ ಅಭಿಯಾನಕ್ಕೆ ಉದ್ಯಮಿ ಮಾಧವ ಉಡುಪ ಅವರು ಚಾಲನೆ ನೀಡಿದರು.ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣದ ಜೊತೆಗೆ ಭೂಮಿಯ ಸತ್ವವನ್ನು ಕಾಪಾಡಿ ಪ್ರಾಕೃತಿಕ ವಿಕೋಪವನ್ನು ಕೂಡ ತಡೆಯುವುದರ ಮೂಲಕ ಸರ್ವ ಶ್ರೇಷ್ಠ ಭರತ ಭೂಮಿಯ ರಕ್ಷಣೆಗೆ ತಾವೆಲ್ಲರೂ ಸ್ವಯಂ ಪ್ರೇರಿತ ಸಂಕಲ್ಪ ಮಾಡಬೇಕೆಂದು ವಿಶ್ವ ಹಿಂದು ಪರಿಷದ್ ಬಜರಂಗದಳದ ಕಾರ್ಯಕರ್ತರು ಸಮಾಜ ಭಾಂದವರನ್ನ ವಿನಂತಿಸಿಕೊಂಡರು. ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷದ್ ಜಿಲ್ಲಾಧ್ಯಕ್ಷರಾದ ಪ್ರಮೋದ್ ಶೆಟ್ಟಿ ಮಂದಾರ್ತಿ, ವಿಶ್ವ ಹಿಂದು ಪರಿಷದ್ ಜಿಲ್ಲಾ ಕಾರ್ಯದರ್ಶಿಗಳಾದ ಸಂತೋಷ್ ಸುವರ್ಣ ಬೊಳ್ಜೆ, ಮಠ ಮಂದಿರ ಸಂಪರ್ಕ ಪ್ರಮುಖ್ ರಮೇಶ್ ಕಲ್ಲೊಟ್ಟೆ, ನಗರ ಸಂಚಾಲಕ ಲೋಕೇಶ್ ಶೆಟ್ಟಿಗಾರ್ ಮತ್ತು ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *