Header Ads
Header Ads
Breaking News

ಎಸ್ಡಿಪಿಐ ಕಾರ್ಯಕರ್ತರು ಪ್ಲೆಕ್ಸ್ ಕಟ್ಟುತ್ತಿದ್ದಾಗ ವಿದ್ಯುತ್ ಶಾಕ್: ಪುತ್ತೂರು ನಗರ ಎಸ್ಡಿಪಿಐ ಅಧ್ಯಕ್ಷ ಮೃತ್ಯು

ಪುತ್ತೂರು: ಎಸ್ಡಿಪಿಐ ಪಕ್ಷದ ಕಾರ್ಯಕರ್ತರ ಸಮಾವೇಶದ ಫ್ಲೆಕ್ಸ್ ಕಟ್ಟುತ್ತಿದ್ದಾಗ ವಿದ್ಯುತ್ ಆಘಾತಕ್ಕೊಳಗಾಗಿ ಪುತ್ತೂರು ನಗರ ಅಧ್ಯಕ್ಷ ಮೃತಪಟ್ಟ ಘಟನೆ ಬುಧವಾರ ತಡರಾತ್ರಿ ದರ್ಬೆಯಲ್ಲಿ ನಡೆದಿದೆ.ಶುಕ್ರವಾರದಂದು ಎಸ್ಡಿಪಿಐ ಪಕ್ಷದ ಕಾರ್ಯಕರ್ತರ ಜಾಥಾ ಸಮಾವೇಶವು ನಡೆಯಲಿದ್ದ ಹಿನ್ನೆಲೆಯಲ್ಲಿ ಪುತ್ತೂರಿನ ದರ್ಬೆ ಪೆಟ್ರೋಲ್ ಬಂಕ್ ಬಳಿ ಕಬ್ಬಿಣದ ಚೌಕಟ್ಟು ಹಾಕಿದ್ದ ಫ್ಲೆಕ್ಸನ್ನು ಕಟ್ಟುತ್ತಿರುವ ಸಂದರ್ಭದಲ್ಲಿ ಫ್ಲೆಕ್ಸ್ ವಿದ್ಯುತ್ ತಂತಿಗೆ ತಗುಲಿ ಶಾಕ್ ಹೊಡೆದ ಕಾರಣ ಫ್ಲೆಕ್ಸ್ ಕಟ್ಟುತ್ತಿದ್ದ ಪುತ್ತೂರು ನಗರ ಅಧ್ಯಕ್ಷ ಹಂಝ ಅಫ್ನಾನ್ ಮೃತಪಟ್ಟಿದ್ದಾರೆ. ಜೊತೆಯಲ್ಲಿದ್ದ ಕಾರ್ಯಕರ್ತರು ಅಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply