Header Ads
Header Ads
Breaking News

ಫರಂಗಿಪೇಟಯ ಸೇವಾಂಜಲಿ ಸಭಾಂಗಣದಲ್ಲಿ ಕೃಷ್ಣಕುಮಾರ್ ಪೂಂಜಾ ಅವರಿಗೆ ಅಭಿಮಾನದ ಅಭಿನಂದನೆ

ಬಂಟ್ವಾಳ: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ ಅವರಿಗೆ ಅಭಿಮಾನದ ಅಭಿನಂದನೆ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ನಡೆಯಿತು. ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ದೀಪ ಪ್ರಜ್ವಲಿಸಿ ಪೂಂಜ ಅವರನ್ನು ಅಭಿನಂದಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸಮಾಜದ ಕಟ್ಟಕಡೆಯ ಜನರ ಕಣ್ಣೋರೆಸುವ ಕೆಲಸವನ್ನು ಪೂಂಜರು ಮಾಡಿಕೊಂಡು ಬರುತ್ತಿದ್ದರೆ ಅವರ ಅರ್ಹತೆಗನುಗುಣವಾಗಿ ಯಾವುದೇ ಶಿಫಾರಸ್ಸು ಇಲ್ಲದೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ ಎಂದರು. ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ ಕೃಷ್ಣ ಕುಮಾರ್ ಪೂಂಜರು ಸೇವೆಯ ಮೂಲಕ ಮಿನುಗುವ ನಕ್ಷತ್ರವಾಗಿ ಗುರುತಿಸಿಕೊಂಡಿದ್ದಾರೆ, ಊರಿನ ಜನ ಅಭಿಮಾನದಿಂದ ಗೌರವಿಸುತ್ತಿರುವುದು ರಾಜ್ಯೋತ್ಸವ ಪ್ರಶಸ್ತಿಗಿಂತಲೂ ಮಿಗಿಲಾದುದು ಎಂದರು. ಶಾಸಕ ರಾಜೇಶ್ ನಾಕ್, ಮಾಜಿ ಸಚಿವ ರಮಾನಾಥ ರೈ ಶುಭ ಹಾರೈಸಿದರು. ಹಿರಿಯ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅಧ್ಯಕ್ಷತೆ ವಹಿಸಿದ್ದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕೃಷ್ಣ ಕುಮಾರ್ ಪೂಂಜಾ ಅವರು ಸೇವಾಂಜಲಿ ಪ್ರತಿಷ್ಠಾನದ ಎಲ್ಲಾ ಟ್ರಸ್ಟಿಗಳು, ಹಿತೈಷಿಗಳು ಹಾಗೂ ಕಾರ್ಯಕರ್ತ ಬಂಧುಗಳ ಸಹಕಾರದಿಂದಾಗಿ ಈ ಪ್ರಶಸ್ತಿ ಬಂದಿದೆ. ಈ ಪ್ರಶಸ್ತಿಯನ್ನು ಸೇವಾಂಜಲಿಯ ಕಾರ್ಯಕರ್ತರಿಗೆ ಸಮರ್ಪಿಸುವುದಲ್ಲದೆ ಪ್ರಶಸ್ತಿಯ ಜೊತೆ ಸಿಕ್ಕಿರುವ 1ಲಕ್ಷ ರುಪಾಯಿ ಮೊತ್ತವನ್ನು ತನ್ನ ತಂದೆ ತಾಯಿಯ ಹೆಸರಿನಲ್ಲಿ ಸೇವಾಂಜಲಿಯ ಸೇವಾ ಕಾರ್ಯಗಳಿಗೆ ಠೇವಣಿ ಇಡುವುದಾಗಿ ಘೋಷಿಸಿದರು.ಮುಖ್ಯ ಅತಿಥಿಗಳಾಗಿ ಉದ್ಯಮಿ ಸೇಸಪ್ಪ ಕೋಟ್ಯಾನ್, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋ, ಪುದು ಗ್ರಾ.ಪಂ. ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಸೇವಾಂಜಲಿ ಪ್ರತಿಷ್ಠಾನದ ಅಧ್ಯಕ್ಷ ವಜ್ರನಾಭ ಶೆಟ್ಟಿ, ಕೃಷಿಕ ನೋರ್ಬರ್ಟ್ ಡಿಸೋಜಾ, ಪೂಂಜಾ ಅವರ ಧರ್ಮಪತ್ನಿ ಶಾಲಿನಿ ಕೆ. ಪೂಂಜಾ ಹಾಜರಿದ್ದರು. ಕಾರ್ಯಕ್ರಮದಲ್ಲಿ ಕೃಷ್ಣ ಕುಮಾರ್ ಪೂಂಜ ಅವರ ಅಂಚೆ ಚೀಟಿ ಬಿಡುಗಡೆಗೊಳಿಸಲಾಯಿತು, ತೈಲವರ್ಣದ ಭಾವಚಿತ್ರವನ್ನು ಪೂಂಜರಿಗೆ ಹಸ್ತಾಂತರಿಸಲಾಯಿತು.

Related posts

Leave a Reply