Header Ads
Header Ads
Header Ads
Breaking News

ಫರಂಗಿಪೇಟೆಯಲ್ಲಿ ನಾಲ್ವರ ಮೇಲೆ ತಲವಾರು ದಾಳಿ ಇಬ್ಬರು ಮೃತ್ಯು , ಮೂವರು ಗಂಭೀರ ಗಾಯ, ತಡರಾತ್ರಿ ನಡೆದ ಘಟನೆ, ಎಜಾಝ್ ಕೊಲೆಗೆ ಪ್ರತಿಕಾರದ ಶಂಕೆ

ಇನೋವಾದಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಸ್ವಿಫ್ಟ್ ಕಾರ್‌ನಲ್ಲಿದ್ದ ಐವರ ಮೇಲೆ ದಾಳಿ ನಡೆಸಿದ ಪರಿಣಾಮ ಇಬ್ಬರು ಮೃತಪಟ್ಟು, ಉಳಿದ ಮೂರು ಗಂಭೀರ ಗಾಯಗೊಂಡ ಘಟನೆ ಸೋಮವಾರ ತಡರಾತ್ರಿ ಫರಂಗಿಪೇಟೆಯ ಪೊಲೀಸ್ ಹೊರಠಾಣೆಯ ಎದುರಿನ ರಿಕ್ಷಾ ನಿಲ್ದಾಣದ ಬಳಿ ನಡೆದಿದೆ.ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಅಡ್ಯಾರ್-ಕಣ್ಣೂರು ನಿವಾಸಿ ಫಯಾಝ್ ಹಾಗೂ ರಿಯಾಖ್ ಅಲಿಯಾಸ್ ಝಿಯಾ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಅಡ್ಯಾರ್ ನಿವಾಸಿ ಹಮೀಝ್ ಹಾಗೂ ಮುಸ್ತಾಖ್, ಫಝಲ್ ಎಂಬವರು ಗಂಭೀರ ಗಾಯಗೊಂಡಿದ್ದು, ಇವರನ್ನು ಬಂಟ್ವಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ವಿಫ್ಟ್ ಕಾರ್‌ನಲ್ಲಿದ್ದ ಈ ಐವರ ಮೇಲೆ ಪಿಕಪ್ ವಾಹನದಲ್ಲಿ ಬಂದ ತಂಡವೊಂದು ಏಕಾ‌ಏಕಿ ದಾಳಿ ನಡೆಸಿದೆ.

ಈ ವೇಳೆ “ ಝಿಯಾ ಸ್ಥಳದಲ್ಲೇ ಮೃತಪಟ್ಟಿದ್ದರೆ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಫಯಾಜ್ ಮೃತಪಟ್ಟಿದ್ದಾನೆ. ದಾಳಿಯ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಕಾನ್‌ಸ್ಟೇಬಲ್ ಓರ್ವರು ಸ್ಥಳಕ್ಕೆ ಬಂದು ದಾಳಿಗೋಳಗಾದ ಓರ್ವನನ್ನು ಔಟ್‌ಪೋಸ್ಟ್‌ನಲ್ಲಿ ಇಟ್ಟು ಬಚಾವ್ ಮಾಡಿದ್ದಾರೆ.2012 ಅಬ್ದುಲ್ ರಹಿಮಾನ್ ಯಾನೆ ಚರಿಯಪುತ್ತ ಎಂಬಾತನ ಕೊಲೆಯಾಗಿತ್ತು. ಈ ಪ್ರಕರಣಕ್ಕೆ 2014 ರಲ್ಲಿ ಅಕ್ಟೋಬರ್ರಂ31ದು ಕಣ್ಣೂರಿನಲ್ಲಿ ಏಜಾಜ್ ಎಂಬಾತನ್ನು ಸೆಲೂನ್‌ಗೆ ನುಗ್ಗಿ ಹತ್ಯೆ ಗೈಯಲಾಗಿತ್ತು. ಏಜಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಝೀಯಾ ಹಾಗೂ ರಿಯಾಜ್ ಸೇರಿದಂತೆ ಆರು ಮಂದಿ ಬಂಧನಕ್ಕೊಳಗಾಗಿದ್ದರು. ನಿನ್ನೆ ರಾತ್ರಿ ನಡೆದ ಕೊಲೆ ಪ್ರಕರಣ ಏಜಾಜ್ ಕೊಲೆ ಪ್ರಕರಣಕ್ಕೆ ಪ್ರತಿಕಾರ ಎಂದು ಹೇಳಲಾಗುತ್ತಿದೆ.

Related posts

Leave a Reply