Header Ads
Header Ads
Breaking News

ಫರಂಗಿಪೇಟೆಯಲ್ಲಿ ನಿರ್ಮಾಣಗೊಂಡ ರಿಕ್ಷಾ ಪಾರ್ಕಿಂಗ್ : ಯು.ಟಿ. ಖಾದರ್ ಅವರಿಂದ ಉದ್ಘಾಟನೆ

ಬಂಟ್ವಾಳ: ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರ ಅನುದಾನದಲ್ಲಿ ನಿರ್ಮಾಣಗೊಂಡ ಮೇಲ್ಛಾವಣಿ ಹಾಸಿದ ಸುಸಜ್ಜಿತ ಫರಂಗಿಪೇಟೆಯ ನಂ.೧ ರಿಕ್ಷಾ ಪಾರ್ಕಿಂಗನ್ನು ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು.

ಅವರು ಈ ಸಂದರ್ಭ ಮಾತನಾಡಿ ಇಲ್ಲಿನ ರಿಕ್ಷಾಚಾಲಕರು ಮಳೆಗಾಲ ಹಾಗೂ ಬೇಸಿಗೆಯಲ್ಲಿ ಕಷ್ಟಪಡುತ್ತಿರುವುದನ್ನು ಸ್ವತಃ ನೋಡಿ ಈ ವ್ಯವಸ್ಥೆ ಕಲ್ಪಿಸಲಾಗಿದೆ. ರಿಕ್ಷಾಚಾಲಕರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.

ರಿಕ್ಷಾ ಚಾಲಕರು ಸದಾ ಜನರ ಜೊತೆ ಇದ್ದು ಸಮಾಜದ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಾರೆ, ಕೆಲವೊಂದು ಭಾರಿ ಸಾಕಷ್ಟು ತೊಂದರೆಗಳನ್ನು ಅವರು ಅನುಭವಿಸುತ್ತಾರೆ. ಜೀವನದಲ್ಲಿ ಶಿಸ್ತು, ಸಂಯಮವನ್ನು ಅಳವಡಿಸಿಕೊಂಡು ಉತ್ತಮ ಜೀವನ ನಡೆಸಬೇಕೆಂದು ಅವರು ತಿಳಿಸಿದರು. ಬಂಟ್ವಾಳ ಉಪವಿಭಾಗದ ಎಎಸ್ಪಿ ಸೈದುಲ್ ಅಡಾವತ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ರಿಕಾ ಚಾಲಕರ ಅನುಕೂಲದ ದೃಷ್ಟಿಯಿಂದ ಮೂಲಭೂತ ಸೌಕರ್ಯವನ್ನು ಒದಗಿಸಿಕೊಟ್ಟಿರವುದು ಅಭಿನಂದನೀಯ. ಕೆಲ ರಿಕ್ಷಾ ಚಾಲಕರು ಸರಿಯಾದ ದಾಖಲೆಗಳಿಲ್ಲದೆ ರಿಕ್ಷಾ ಓಡಿಸುತ್ತಾರೆ, ಈ ಬಗ್ಗೆ ಜಾಗೃತ ವಹಿಸಬೇಕೆಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಉಮ್ಮರ್ ಫಾರೂಕ್ ಪ್ರಾಸ್ತವಿವಾಗಿ ಮಾತನಾಡಿ ಇಲ್ಲಿನ ರಿಕ್ಷಾ ಚಾಲಕರ ಕಷ್ಟವನ್ನು ನೋಡಿ ಕೇವಲ ಒಂದು ವಾರದ ಕಾಲವಕಾಶದಲ್ಲಿ ಸಚಿವರು ಅನುದಾನ ಬಿಡುಗಡೆಗೊಳಿಸಿ ಮೇಲ್ಚಾವಣಿ ಹೊದಿಸಿದ ರಿಕ್ಷಾ ಪಾಕಿಂಗನ್ನು ಒದಗಿಸಿಕೊಟ್ಟಿದ್ದಾರೆ. ಪುದು ಗ್ರಾಮದಲ್ಲಿ ಶೇ.೯೦ ರಷ್ಟು ಅಭಿವೃದ್ದಿ ಕಾಮಗಾರಿಗಳು ಪೂರ್ತಿಯಾಗಿದ್ದು ಇದೆಲ್ಲವೂ ಸಚಿವ ಯು.ಟಿ.ಖಾದರ್ ಅವರ ಕೊಡುಗೆ ಎಂದರು.
ಪುದು ಗ್ರಾ.ಪಂ.ಅಧ್ಯಕ್ಷ ರಮ್ಮಾನ್ ಮಾರಿಪಳ್ಲ, ಉಪಾಧ್ಯಕ್ಷೆ ಲೀಡಿಯಾ ಪಿಂಟೋ, ಸದಸ್ಯ ಹಾಶೀರ್ ಪೇರಿಮಾರ್, ಕಿಶೋರ್ ಕುಮಾರ್, ಇಕ್ಬಾಲ್ ಸುಜೀರ್, ಮೊಯ್ಯುದ್ದೀನ್ ಜುಮ್ಮಾಮಸೀದಿ ಅಧ್ಯಕ್ಷ ಮಹಮ್ಮದ್ ಬಾವಾ, ತಾಲೂಕು ಪಂಚಾಯತಿ ಮಾಜಿ ಸದಸ್ಯ ಆಸೀಫ್‌ಇಕ್ಬಾಲ್ , ಎಫ್.ಎ ಖಾದರ್, ಬಂಟ್ವಾಳ ಗ್ರಾಮಾಂತರ ಠಾಣಾ ಎಸೈ ಪ್ರಸನ್ನ, ಜಾಫರ್ ಮತ್ತಿತರರು ಹಾಜರಿದ್ದರು.

Related posts

Leave a Reply

Your email address will not be published. Required fields are marked *