Header Ads
Header Ads
Breaking News

ಫರಂಗಿಪೇಟೆಯಲ್ಲಿ ಶ್ರೀ ಆಂಜನೇಯ ದೇವಸ್ಥಾನದ ಕಾಷ್ಠ ಶಿಲ್ಪ ನಿರ್ಮಾಣ

ಬಂಟ್ವಾಳ: ಫರಂಗಿಪೇಟೆಯಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀ ಆಂಜನೇಯ ದೇವಸ್ಥಾನದ ಕಾಷ್ಠ ಶಿಲ್ಪ ಮುಹೂರ್ತ ವಳವೂರಿನಲ್ಲಿ ನಡೆಯಿತು. ತುಂಬೆ ವಳವೂರಿನ ಬಡಿಲಗುತ್ತು ರವಿಶಂಕರ ಆಳ್ವರ ತೋಟದಲ್ಲಿನ ಕಿರಾಲ್ ಬೋವು ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ಮುಹೂರ್ತ ನೆರವೇರಿಸಲಾಯಿತು. ಕಲ್ಲತಡಮೆ ಮುರಳಿಭಟ್ ರವರ ನೇತೃತ್ವ ದಲ್ಲಿ ಪೂಜಾವಿಧಿಗಳನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಆಂಜನೇಯ ದೇವಸ್ಥಾನ ಫರಂಗಿಪೇಟೆ ಪುನರ್ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ಐತಪ್ಪ ಆಳ್ವ ಸುಜೀರು ಗುತ್ತು, ಅಧ್ಯಕ್ಷರಾದ ಅಜಿತ್ ಚೌಟ ದೇವಸ್ಯ, ಕಾರ್ಯಾಧ್ಯಕ್ಷ ಕೊಡ್ಮಾಣ್ ಕಾಂತಪ್ಪ ಶೆಟ್ಟಿ, ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಶಿಲ್ಪಿಗಳಾದ ರಾಮಚಂದ್ರ ಆಚಾರ್ಯ ಬೋಳಂತೂರು ಮತ್ತು ತಂಡ ಪೂಜಾವಿಧಿ ಯಲ್ಲಿ ಪಾಲ್ಗೊಂಡಿತ್ತು ಈ ಸಂದರ್ಭದಲ್ಲಿ ಮರವನ್ನು ದಾನವಾಗಿ ನೀಡಿದ ಬಡಿಲಗುತ್ತು ರವಿ ಶಂಕರ ಆಳ್ವ ದಂಪತಿ ಗಳನ್ನು ಗೌರವಿಸಲಾಯಿತು. ಒಂದು ಮರಕಡಿದ ಜಾಗದ ಪರಿಸರದಲ್ಲಿ 15 ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು.

Related posts

Leave a Reply

Your email address will not be published. Required fields are marked *