Header Ads
Header Ads
Breaking News

ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಣೆ : ಉಳ್ಳಾಲ ನಗರಸಭೆಯಲ್ಲಿ ನಡೆದ ಕಾರ್ಯಕ್ರಮ

ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಣಾ ಕಾರ್ಯಕ್ರಮ ಉಳ್ಳಾಲ ನಗರಸಭೆಯಲ್ಲಿ ನಡೆಯಿತು.ಪೌರ ಕಾರ್ಮಿಕರ ಖಾಯಮಾತಿ ಆದೇಶ ಪತ್ರ , ಮೀಸಲು ಅನುದಾನದಲ್ಲಿ ವಿವಿಧ ಸವಲತ್ತು, ಸ್ವ ಉದ್ಯೋಗ ಯೋಜನೆಯ ಫಲಾನುಭವಿಗಳಿಗೆ ಆದೇಶ ಪತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ವಿತರಿಸಿದರು.

ನಂತರ ಮಾತನಾಡಿದ ಸಚಿವ ಖಾದರ್ ಅವರು, ಅವರು ಪೌರ ಕಾರ್ಮಿಕರ ಖಾಯಂಗೊಳಿಸುವುದು ಸಾಮಾಜಿಕ ಕಲ್ಪಿಸುವ ಕಾರ್ಯಕ್ರಮವಾಗಿದೆ, ಮುಂದಿನ ದಿನಗಳಲ್ಲಿ ಲೋಡರ್, ಚಾಲಕರು, ನೀರು ಸಿಬ್ಬಂದಿಗಳನ್ನೂ ಖಾಯಂಗೊಳಿಸಲು ಯೋಚಿಸಲಾಗಿದೆ.ಸರ್ಕಾರದ ಸವಲತ್ತು ಅರ್ಹರಿಗೆ ಸಿಗಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದ್ದು, ಸಿದ್ಧರಾಮಯ್ಯ ಸರ್ಕಾರದ ಯೋಜನೆಗಳನ್ನು ಈಗಿನ ಸರ್ಕಾರ ಮುಂದುವರಿಸಿದೆ. ನಗರಸಭೆ ಮೀಸಲು ಅನುದಾನದಲ್ಲಿ ಸಣ್ಣ ಪ್ರಮಾಣದ ಸಹಾಯಧನ ವಿತರಿಸುವುದು, ಅನಗತ್ಯ ಕಾರ್ಯಕ್ರಮಗಳನ್ನು ನಡೆಸುವ ಬದಲು ಮುಂದಿನ ವರ್ಷದಿಂದ ಪಿಯುಸಿ, ಪದವಿ ಆದವರು, ಐಎಎಸ್, ಕೆ.ಎಎಸ್ ಮಾಡಲು ಬಯಸುವವರಿಗೆ ತರಬೇತಿ ನೀಡುವ ಯೋಜನೆ ರೂಪಿಸಲು ಯೋಚಿಸಬೇಕಿದೆ ಎಂದು ಕಿವಿಮಾತು ಹೇಳಿದರು.  ನಗರಸಭಾ ಪೌರಾಯುಕ್ತೆ ವಾಣಿ ವಿ.ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಈ ಸಂದರ್ಭ ಯೋಜನಾ ನಿರ್ದೇಶಕ ಪ್ರಸನ್ನ ಹಾಗೂ ನಗರಸಭಾ ಸದಸ್ಯರು ಉಪಸ್ಥಿತರಿದ್ದರು.

Related posts

Leave a Reply