Breaking News

ಫಲ್ಗುಣಿ ನದಿಯಲ್ಲಿ ಅಪಾಯಕ್ಕೆ ಸಿಲುಕಿದ ಮಿಂಚುಳ್ಳಿ, ಕಂಟಕಗಳಿಂದ ಹಕ್ಕಿ ಸಂಕುಲ ನಾಶದ ಸುಳಿಯಲ್ಲಿ


ವಿಭಿನ್ನ ಬಣ್ಣವನ್ನ ತನ್ನ ಮೈ ಮೇಲೆ ಹೊಂದಿದೆ. ನೀರಿನಲ್ಲಿ ಇದ್ದ ಮೀನನ್ನ ಹಿಡಿಯುವಲ್ಲಿ ಬಲು ಹುಷಾರ್. ಆದರೆ ನಗರದ ಫಲ್ಗುಣಿ ನದಿಯಲ್ಲಿ ಮೀನನ್ನು ಅರಸಿಬಂದ ಈ ಹಕ್ಕಿಗೆ ನೀರಿನಿಂದ ಕಂಟಕವಾಗಿದೆ. ನೀರಿನಲ್ಲಿರುವ ಸಂಚರಿಸುವ ಮೀನನ್ನು ಹೊಂಚುಹಾಕಿ, ನೀರಿಗೆ ಮುಳುಗಿ ಮೀನು ಸಹಿತ ಮೇಲೆ ಹಾರಬಲ್ಲ ಹಕ್ಕಿ ಕಿಂಗ್‌ಫಿಷರ್.
ಆದರೆ ಇಲ್ಲಿ ಮೈತುಂಬಾ ಗ್ರೀಸ್ ಅಂಟಿಕೊಂಡು, ರೆಕ್ಕೆ ಬಿಚ್ಚಲಾಗದೆ, ಹಾರಲಾಗದ ಪರಿಸ್ಥಿತಿಯಲ್ಲಿ ಧ್ಯಾನಸ್ಥನಂತೆ ಕುಳಿತುಕೊಂಡಿದೆ. ಅಷ್ಟಕ್ಕೂ ಈ ಹಕ್ಕಿ ಆಹಾರ ಅರಸಿಕೊಂಡು ಬಂದಿದ್ದು ನಗರದ ಫಲ್ಗುಣಿ ನದಿ ತೀರಕ್ಕೆ. ಶುದ್ದ ಸಮೃದ್ಧವಾಗಿ ಹರಿಯಬೇಕಾಗಿರುವ ನದಿ ಇಂದು ಮಲೀನಗೊಂಡಿದೆ. ನಗರದೆಲ್ಲೆಡೆ ಸ್ವಚ್ಛತಾ ಅಭಿಯಾನಗಳು ನಡೆಯುತ್ತಿದ್ದರೂ, ಇಂತಹ ನದಿಗಳ ಸ್ವಚ್ಛತೆಯ ಕಾರ್ಯ ನಡೆಯುತ್ತಿಲ್ಲ. ದೊಡ್ಡ ದೊಡ್ಡ ಕಂಪನಿಗಳಿಂದ ಹೊರಬರುವ ವಿಷಪೂರಿತ ನೀರನ್ನು ನದಿಗೆ ಬಿಡಲಾಗುತ್ತಿದ್ದು ನದಿ ಮಾಲಿನ್ಯಗೊಳ್ಳುತ್ತಿದೆ. ಇದರಿಂದ ಜಲಚರಗಳು ಸಾವನ್ನಪ್ಪುತ್ತಿದೆ.
ಅದೇ ರಿತಿ ವಿಶ್ವ ಪರಿಸರದ ದಿನವಾದ ನಿನ್ನೆ ಫಲ್ಗುಣಿ ನದಿಯಲ್ಲಿ ಮೀನನ್ನು ತಿನ್ನಲೆಂದು ಬಂದ ಹಕ್ಕಿಯ ರೆಕ್ಕೆಗಳು, ಕೊಕ್ಕು ಎಲ್ಲವೂ ನದಿಯಲ್ಲಿರುವ ಮಲೀನಕಾರಕ ಅಂಶಗಳಿಂದ ಕಪ್ಪಾಗಿದೆ. ರೆಕ್ಕೆಯ ಮೇಲೆ ಅಂಟಾಗಿರುವ ಕಪ್ಪು ಕೊಳೆ ಸೇರಿದೆ. ಇದಕ್ಕೆಲ್ಲಾ ಕಾರಣ ನದಿ ಮಲೀನವಾದುದು ಎಂಬುದಾಗಿ ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸುತ್ತಿರುವುದು ಇಂದು ನಿನ್ನೆಯ ವಿಷಯವಲ್ಲ.
ಹಾರಲಾಗದ ಪರಿಸ್ಥಿತಿಯಲ್ಲಿರುವ ಈ ಹಕ್ಕಿಯನ್ನು ಅಲ್ಲಿಂದ ತಂದು ಸಂರಕ್ಷಿಸಿರುವುದು ಪ್ರಕಾಶ್ ಶೆಟ್ಟಿ. ಇವರು ಆ ಹಕ್ಕಿಯನ್ನು ಒಂದು ಬಕೆಟಿನಲ್ಲಿ ಶುದ್ಧ ನೀರಿನಲ್ಲಿಟ್ಟಾಗ ಅದರ ಮೈಯಿಂದ ಕಪ್ಪು ಗ್ರೀಸ್ ಜಾರುತ್ತಿತ್ತು. ಇದನ್ನು ರಕ್ಷಿಸಿದ ದೃಶ್ಯವು ಸಾಮಾಜಿಕ ಜಾಲ ತಾಣದಲ್ಲಿ ಇದೀಗ ಹರಿದಾಡುತ್ತಿದೆ. ಇಂತಹ ಮಾಲೀನ್ಯದಿಂದ ಹಲವಾರು ಪಕ್ಷಿಗಳಿಗೆ ಅಪತ್ತು ಮಾತ್ರ ಕಟ್ಟಿಟ್ಟ ಬುತ್ತಿ. ಸಂಬಧ ಪಟ್ಟ ಅಧಿಕಾರಿಗಳು ಇದಕ್ಕೆ ಸ್ಪಂದನೆ ನೀಡಿದರೆ ಇಂತಹ ಅಪರೂಪದ ಪಕ್ಷಿ ಸಂಕುಲನವನ್ನು ಸಂರಕ್ಷಿಸಬಹುದು.

Related posts

Leave a Reply