Header Ads
Header Ads
Breaking News

ಫಲ್ಗುಣಿ ನದಿಯಲ್ಲಿ ಹಬ್ಬದ ಸಂಭ್ರಮ:ಮನರಂಜಿಸುತ್ತಿರುವ ಜಲಕ್ರೀಡೆ, ಸಾಂಸ್ಕೃತಿಕ ವೈಭವ

ಕೂಳೂರಿನ ಫಲ್ಗುಣಿಯ ನದಿಯಲ್ಲಿ ಹಬ್ಬದ ಕಳೆ ತುಂಬಿದೆ. ಜಲರಾಶಿಯಲ್ಲಿ ನಳನಳಿಸುವ ಬೋಟ್‌ಗಳ ಕಲರವ ಒಂದೆಡೆಯಾದರೆ, ದೋಣಿಗಳಲ್ಲಿ ಜಲವಿಹಾರ, ಜಲಕ್ರೀಡೆಯ ಪುಳಕ ಮೈರೋಮಾಂಚನ ಎನಿಸುತ್ತೆ. ಸುಂದರ ಪ್ರಕೃತಿ ಸೊಬಗಿನ ಜೊತೆಗೆ ಗಾನ, ನೃತ್ಯ ಸಂಗೀತದ ಪುಳಕ. ನದಿ ಉತ್ಸವದಲ್ಲಿ ಜಲಕ್ರೀಡೆ, ಸಾಂಸ್ಕೃತಿಕ ವೈಭವ ಜನಮನಸೂರೆಗೊಂಡಿತು.


ಹೌದು,,, ರಾಜ್ಯದ ಪಾಲಿಗೆ ವಿನೂತನ ಮತ್ತು ಪ್ರಥಮ ಎನ್ನಬಹುದಾದ ನದಿ ಉತ್ಸವ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಕೂಳೂರಿನ ಫಲ್ಗುಣಿ ನದಿಯಲ್ಲಿ ಎರಡು ದಿನಗಳ ಕಾಲ ನದಿ ಉತ್ಸವವನ್ನು ಹಮ್ಮಿಕೊಂಡಿದ್ದು, ಪ್ರಕೃತಿಯ ಜೊತೆಗೆ ಸುಂದರ ಆಸ್ವಾದ ನೀಡುವಂತಿದೆ. ಫಲ್ಗುಣಿ ನದಿಯಲ್ಲಿ ಕೂಳೂರು ಸೇತುವೆಯ ಬಳಿಯಿಂದ ಸುಲ್ತಾನ್ ಬತ್ತೇರಿಯವರೆಗೆ ಸುಮಾರು ೨೩ ಕಿ.ಮೀ. ವರೆಗೆ ನದಿ ಮತ್ತು ನದಿ ಪಾತ್ರದಲ್ಲಿ ನಡೆಯುವ ಉತ್ಸವದಲ್ಲಿ ವೈವಿಧ್ಯಮಯ ಮನೋರಂಜನೆ ಜಲ ಸಂಬಂಧಿತ ಕ್ರೀಡೆಗಳು ನಡೆದವು.


ಕೂಳೂರಿನಿಂದ ಬಂಗ್ರಕೂಳೂರುವರೆಗೆ ಸುಮಾರು ಎರಡೂವರೆ ಕಿ.ಮೀ ದೂರ ನದಿ ಬದಿಯಲ್ಲಿ ನಡೆಯುತ್ತಾ ಪ್ರಕೃತಿ ಸೌಂದರ್ಯವನ್ನು ಸವಿಯಬಹುದು. ಇನ್ನೂ ನದಿ ಉತ್ಸವಕ್ಕೆ ಆಗಮಿಸುವ ಜನತೆಗೆ ಜಲಕ್ರೀಡೆಗಳು ಮನಸ್ಸಿಗೆ ಉಲ್ಲಾಸ ನೀಡುತ್ತಿದೆ. ರೋಯಿಂಗ್, ಕಯಾಕ್, ಸ್ಟ್ಯಾಂಡ್ ಆಫ್ ಫೆಡಲಿಂಗ್, ವಿಂಡ್ ಸರ್ಫಿಂಗ್, ಸ್ಪೀಡ್ ಬೋಟು ಸಹಿತ ವಿವಿಧ ಜಲಕ್ರೀಡೆಗಳು ರೋಮಾಂಚನಗೊಳಿಸುತ್ತಿದೆ.


ನದಿ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮೆರುಗು ನೀಡುತ್ತಿದೆ. ಬಂಗ್ರಕೂಳೂರು ಮತ್ತು ಸುಲ್ತಾನ್ ಬತ್ತೇರಿಯಲ್ಲಿ ಅಳವಡಿಸಿರುವ ವೇದಿಕೆಯಲ್ಲಿ ಯುವ ಹಾಗೂ ವೃತ್ತಿಪರ ಕಲಾವಿದರಿಂದ ಗಾನ, ನೃತ್ಯ, ಸಂಗೀತ ಕಾರ್ಯಕ್ರಮಗಳು ನದಿ ಉತ್ಸವದಲ್ಲಿ ಆಗಮಿಸುವ ಸಾರ್ವಜನಿಕರ ಮನಸ್ಸುಗಳಿಗೆ ಮುದ ನೀಡುತ್ತಿದೆ. ಬಂಗ್ರ ಕೂಳೂರಿನಲ್ಲಿ ಆಯೋಜಿಸಲಾದ ಚಿತ್ರಕಲಾ ಪ್ರದರ್ಶನ ಜನರನ್ನು ಅಕರ್ಷಿಸುತ್ತಿದೆ.
ಫಲ್ಗುಣಿ ನದಿ ತೀರದಲ್ಲಿ ವಿಶಾಲ ಜಲರಾಶಿ ಮತ್ತು ನದಿಯ ಎರಡೂ ಬದಿಗಳಲ್ಲೂ ಇರುವ ಹಸಿರು ಸಿರಿಯ ರಮಣೀಯ ದೃಶ್ಯ ನೋಡುಗರ ಮನ ಸೆಳೆಯುತ್ತದೆ. ಪ್ರವಾಸಿಗರ ದಂಡು ನದಿ ಉತ್ಸವಕ್ಕೆ ಹರಿದು ಬರುತ್ತಿದ್ದು, ಪ್ರಕೃತಿಯ ಸೌಂದರ್ಯವನ್ನು ಆಸ್ವಾಧಿಸುವ ಜೊತೆಗೆ ಆನಂದವನ್ನು ಅನುಭವಿಸುತ್ತಿದ್ದಾರೆ.

 

Related posts

Leave a Reply