Header Ads
Header Ads
Breaking News

ಫಲ್ಗುಣಿ ನದಿ ತೀರದಲ್ಲಿ ಅಕ್ರಮ ಮರಳು ಸಾಗಾಟ : ಟಿಪ್ಪರ್ ಲಾರಿ ಸಹಿತ ಚಾಲಕ ಪೊಲೀಸರು ವಶಕ್ಕೆ

ತಣ್ಣೀರುಬಾವಿ ಮುಖ್ಯ ರಸ್ತೆಯ ಫಲ್ಗುಣಿ ನದಿ ತೀರದಲ್ಲಿ ಅಕ್ರಮವಾಗಿ ಮರಳನ್ನು ಲಾರಿಗೆ ಲೋಡ್ ಮಾಡುತ್ತಿದ್ದ ವೇಳೆ ಟಿಪ್ಪರ್ ಲಾರಿ ಸಹಿತ ಚಾಲಕನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.

ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಆರ್.ಶ್ರೀನಿವಾಸ್ ಗೌಡ, ಐ.ಪಿ.ಎಸ್ ರವರು ಹೊಸ ವರ್ಷದ ನಿಮಿತ್ತ ವಿಶೇಷ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ತಣ್ಣಿರುಬಾವಿ ಮುಖ್ಯ ರಸ್ತೆಯ ಫಲ್ಗುಣಿ ನದಿ ತೀರದಲ್ಲಿ ಅಕ್ರಮವಾಗಿ ಯಾವುದೇ ಪರವಾನಗೆ ಇಲ್ಲದೇ ಮರಳನ್ನು ಲಾರಿಗೆ ಲೋಡ್ ಮಾಡುತ್ತಿರುವುದನ್ನು ಕಂಡು ಬೆನ್ನಟ್ಟಿ ದಾಳಿ ನಡೆಸಿ ವಿಚಾರಿಸಿದಾಗ ರಾಮಚಂದ್ರ ಎಂಬವರ ಮರಳು ಧಕ್ಕೆಯಿಂದ ಲೋಡ್ ಮಾಡುತ್ತಿದ್ದ ಮರಳು ಇರುವ ಟಿಪ್ಪರ್ ಲಾರಿ ಮತ್ತು ಅದರ ಚಾಲಕನನ್ನು ಮರಳು ಧಕ್ಕೆಯ ವ್ಯವಹಾರ ನೋಡಿಕೊಳ್ಳುತ್ತಿದ್ದವನನ್ನು ವಶಕ್ಕೆ ಪಡೆದಿದ್ದಾರೆ.

ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಮಂಗಳೂರು ಉತ್ತರ ವಿಭಾಗದ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ. ಆರ್.ಶ್ರೀನಿವಾಸ್ ಗೌಡ, ಐ.ಪಿ.ಎಸ್ ರವರು ಹಾಗೂ ಪಣಂಬೂರು ಠಾಣಾ ಪಿ.ಐ ಶ್ರೀ ರಫೀಕ್ ಕೆ.ಎಮ್, ಪಿ.ಎಸ್.ಐ ಶ್ರೀ ಉಮೇಶ್ ಕುಮಾರ್.ಎಂ.ಎನ್ ಹಾಗೂ ಪಣಂಬೂರು ಠಾಣಾ ಸಿಬ್ಬಂದಿಗಳು ಶ್ರಮಿಸಿರುತ್ತಾರೆ.

Related posts

Leave a Reply