Header Ads
Header Ads
Breaking News

ವಿಶ್ವ ಅರೋಗ್ಯ ದಿನಾಚರಣೆ.! “ಫಸ್ಟ್ ನ್ಯೂರೋ” ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಡೆಯಿಂದ ಉತ್ತಮ ಆರೋಗ್ಯವಂತ ಸಮಾಜ ನಿರ್ಮಣದ ಕುರಿತು ಕಾಳಜಿ.! ವಿಶ್ವದೆಲ್ಲೆಡೆ ಉತ್ತಮ ಆರೋಗ್ಯ ಮತ್ತು ಚಿಕಿತ್ಸೆ ದೊರಕುವಂತಾಗಬೇಕು ಎಂಬುದೇ “ವಿಶ್ವ ಆರೋಗ್ಯ ಸಂಸ್ಥೆ”ಯ ಆಶಯವಾಗಿದೆ.

 ವಿಶ್ವದೆಲ್ಲೆಡೆ ಪ್ರತಿವರ್ಷ ಏಪ್ರಿಲ್ 7 ರಂದು, ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದಲ್ಲಿವಿಶ್ವ ಆರೋಗ್ಯ  ದಿನವನ್ನು ಆಚರಿಸುತ್ತಾರೆ.ಪ್ರತಿವರ್ಷ ಒಂದು ಆರೋಗ್ಯ ಸಂಬಂಧಿ ವಿಷಯದ ಬಗ್ಗೆ ಉಲ್ಲೇಖ ಮಾಡಿ,ವಿಶ್ವದ  ಜನರ ಗಮನವನ್ನು ಆ ವಿಷಯದ ಬಗ್ಗೆ ಸೆಳೆದು, ಜನರಲ್ಲಿ ಜಾಗ್ರತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ.1948ರಲ್ಲಿ  ವಿಶ್ವ ಆರೋಗ್ಯ ಸಂಸ್ಥೆಯು , ವಿಶ್ವ ಆರೋಗ್ಯ ದಿನಾಚರಣೆ ಬಗ್ಗೆ ನಿರ್ಧರಿಸಿ, 1950 ಏಪ್ರಿಲ್ 7 ರಂದು ಪ್ರಥಮವಾಗಿ ಇದರ ಆಚರಣೆ ನಡೆಸಿತು.

ವಿಶ್ವ ಆರೋಗ್ಯ ಸಂಸ್ಥೆಯ ಸ್ಥಾಪನಾ ನೆನಪಿಗೋಸ್ಕರ ಇದನ್ನು ಆಚರಣೆ ಮಾಡಿದ್ದಾದರೂ, ಆರೋಗ್ಯ ಸಂಬಂಧಿ ವಿಷಯದ ಬಗ್ಗೆ ಜನರಲ್ಲಿ ಮೂಡಿಸುವ ಜಾಗ್ರತಿ, ಇತರ ಆರೋಗ್ಯ ಸಂಬಂಧಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿಶ್ವದೆಲ್ಲೆಡೆ ಈ ಕಾರ್ಯಕ್ರಮ ತುಂಬಾ ಒಳ್ಳೆಯ ರೀತಿಯಲ್ಲಿ ಜನರಿಗೆ ಸಹಾಯವಾಗುತ್ತಿದೆ.

 ವಿಶ್ವ ಆರೋಗ್ಯ ದಿನಾಚರಣೆ ಯ ಮುಖ್ಯ ಉದ್ದೇಶಗಳು:

ಜನರಲ್ಲಿ ರಕ್ತದೊತ್ತಡ ದ ಬಗ್ಗೆ ಅರಿವು ಮೂಡಿಸುವಿಕೆ.

ಜನರಲ್ಲಿ ಉತ್ತಮ ಆರೋಗ್ಯದ ಬಗ್ಗೆ  ಮತ್ತು ರೋಗ ತಡೆಯುವಿಕೆ ಬಗ್ಗೆ ಅರಿವು ಮೂಡಿಸುವಿಕೆ .

ಆರೋಗ್ಯ ತಪಾಸಣೆಯ ಅಗತ್ಯತೆ ಬಗ್ಗೆ ಮಾಹಿತಿ ನೀಡುವುದು.

ಉತ್ತಮ ಸ್ವಚ್ಛತೆ,ಉತ್ತಮ ಆರೋಗ್ಯ ದ ಅರಿವು.

ಆರೋಗ್ಯ ಸಂಬಂಧಿ ಇಲಾಖೆ ಮತ್ತು ಅಧಿಕಾರಿಗಳು ತಮ್ಮಿಂದಾದ ಶ್ರಮದಿಂದ ಜನರಿಗೆ ಆರೋಗ್ಯ ಸಂಬಂಧಿ ಸಹಾಯ.

ಸಾಂಕ್ರಾಮಿಕ ರೋಗ ತಡೆಯುವಿಕೆ ಬಗ್ಗೆ ಮಾಹಿತಿ ನೀಡುವುದು.

 ಈ ವರ್ಷ 2018ರ ವಿಶ್ವ ಆರೋಗ್ಯ ದಿನಾಚರಣೆಯು , “ಎಲ್ರಿಗೂ ಉತ್ತಮ ಆರೋಗ್ಯ “- “ವಿಶ್ವದೆಲ್ಲೆಡೆ ಉತ್ತಮ ಆರೈಕೆ “, ಎಂಬ ಆರೋಗ್ಯ ಮಂತ್ರದೊಂದಿಗೆ ಆಚರಿಸಲ್ಪಡುತ್ತದೆ. ವಿಶ್ವದ ಪ್ರತಿಯೊಬ್ಬರಿಗೂ , ಯಾವುದೇ ರೀತಿಯ ಹಣದ ತೊಂದರೆ ಇಲ್ಲದೆ ಉತ್ತಮ ರೀತಿಯ ಆರೋಗ್ಯ ಮತ್ತು ಚಿಕಿತ್ಸೆ ದೊರಕುವಂತಾಗಬೇಕು ಎಂಬುದೇ ವಿಶ್ವ ಆರೋಗ್ಯ ಸಂಸ್ಥೆಯ ಆಶಯ.

 ಆರೋಗ್ಯವೇ ಭಾಗ್ಯ , ಉತ್ತಮ ಆರೋಗ್ಯವಂತ ಮನುಷ್ಯ ಯಾವುದೇ ಕೆಲಸವನ್ನು ಮಾಡಬಲ್ಲ, ಆರೋಗ್ಯವಂತ ವ್ಯಕ್ತಿ ದೇಶದ ಸಂಪತ್ತು. ಇಂದು ನಮ್ಮ ದೇಶದಲ್ಲಿ ಆರೋಗ್ಯದ ಬಗ್ಗೆ ಜನರು ಗಮನ ಕೊಡುವುದನ್ನು ಕಡಿಮೆ ಮಾಡಿರುವುದರಿಂದ ಮತ್ತು ಆರೋಗ್ಯವನ್ನು ಕಡೆಗೆಣಿಸಿರುವುದರಿಂದ ಜನರು ಅನೇಕ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ಇಂದು ಜನರು ಪೌಷ್ಟಿಕ  ಆಹಾರದ ಕೊರತೆ, ಕಡಿಮೆ/ಕೆಳಸ್ತರದ ಜೀವನ ನಿರ್ವಹಣೆ ರೀತಿ, ಸ್ವಚ್ಛತೆ, ಶಿಶು ಮರಣ ಪ್ರಮಾಣ, ಆರೋಗ್ಯ ಸಮಸ್ಯೆಗಳು, ಕುಡಿಯುವ ನೀರಿನ ಸಮಸ್ಯೆ, ಗ್ರಾಮೀಣ ಆರೋಗ್ಯ ಮತ್ತು ಮಹಿಳೆಯರ ಆರೋಗ್ಯ ಸ್ಥಿತಿ ಮುಂತಾದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಇವೆಲ್ಲ ಜನರ ಆರೋಗ್ಯದ ಮೇಲೆ ಪ್ರಭಾವ ಬೀರಿ , ಜನರು ರೋಗಕ್ಕೆ ತುತ್ತಾಗುವಂತೆ ಮಾಡುತ್ತದೆ.ಇವೆಲ್ಲವನ್ನೂ ಹೋಗಲಾಡಿಸಲು ನಮ್ಮ ಸರಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ, ಆದರೆ ಇಚ್ಛಾ ಶಕ್ತಿಯ ಕೊರತೆಯಿಂದ ಅದು ಸಾಧ್ಯವಾಗುತ್ತಿಲ್ಲ. ನಮ್ಮ ಆರೋಗ್ಯ ಸಮಸ್ಯೆಯನ್ನು ಹೋಗಲಾಡಿಸಲು ನಾವೇ ಮುಂದೆ ಬಂದು ತಜ್ಞ ವೈದ್ಯರ ಸಲಹೆ – ಚಿಕಿತ್ಸೆ ತಕ್ಷಣ ಪಡೆಯುವುದರ ಮೂಲಕಸಾಧ್ಯವಾಗುತ್ತದೆ.

ಆದ್ದರಿಂದ ಜನರು-ಸರಕಾರ-ಅಧಿಕಾರಿಗಳು – ವೈದ್ಯರು ಎಲ್ಲ  ಜೊತೆ ಸೇರಿ ಉತ್ತಮ ರೀತಿಯಲ್ಲಿ ಕೆಲಸ ಮಾಡುವುದರ ಮುಖಾಂತರ ಈ ಆರೋಗ್ಯ ಸಮಸ್ಯೆ ಯನ್ನು ಸಂಪೂರ್ಣ ಅಲ್ಲದಿದ್ದರೂ ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಗೊಳಿಸಬಹುದು, ಮತ್ತು ರೋಗಿಗಳು ಉತ್ತಮ ಚಿಕಿತ್ಸೆ ಪಡೆದು ಗುಣಮುಖರಾಗಬಹುದು.

 

                                                                                             *****

 ಡಾ.ರಕ್ಷಿತ್ ಸಿ.ಕೆದಂಬಾಡಿ – ಎಂ.ಡಿ., ಡಿ.ಎಂ .

ನರರೋಗ ತಜ್ಞ ವೈದ್ಯರು

ಫಸ್ಟ್ ನ್ಯೂರೋ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ

ಪಡೀಲ್, ಮಂಗಳೂರು .