Header Ads
Header Ads
Header Ads
Breaking News

ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ರೋಗಲಕ್ಷಣ ಪತ್ತೆ ಕುರಿತ ಕಾರ್‍ಯಾಗಾರ ಪ್ಯಾಥೋಲಜಿ ತಜ್ಞರಿಂದ ಉಪನ್ಯಾಸ ಇಂಡಿಯನ್ ಸೊಸೈಟಿ ಆಫ್ ಟ್ರಾನ್ಸ್ ಫ್ಯೂಶನ್ ಮೆಡಿಸಿನ್ ಸಹಯೋಗ

ಮಂಗಳೂರಿನ ಕಂಕನಾಡಿಯಲ್ಲಿರುವ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಪ್ಯಾಥೋಲಜಿ ವಿಭಾಗ ಟ್ರಾನ್ಸ್‌ಕ್‌ಮಿ-2017 ಕಾರ್‍ಯಾಗಾರವನ್ನು ಆಯೋಜಿಸಿತ್ತು. ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಹಾಗೂ ಇಂಡಿಯನ್ ಸೊಸೈಟಿ ಆಫ್ ಟ್ರಾನ್ಸ್ ಫ್ಯೂಶನ್ ಮೆಡಿಸಿನ್ ಸಹಯೋಗದಲ್ಲಿ ಟ್ರಾನ್ಸ್‌ಕ್‌ಮಿ-2017 ಕಾರ್‍ಯಾಗಾರವನ್ನು ಡೇಸಿನಿಯಲ್ ಮೆಮೊರಿಯಲ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಈ ಕಾರ್‍ಯಾಗಾರವನ್ನು ನವದೆಹಲಿಯ ಅಪೊಲೋ ಹಾಸ್ಪಿಟಲ್‌ನ ಟ್ರಾನ್ಸ್‌ಫ್ಯೂಶನ್ ಮೆಡಿಸಿನ್ ವಿಭಾಗದ ನಿರ್ದೇಶಕರಾದ ಡಾ. ಆರ್. ಎನ್. ಮಾಕ್ರೂ ಉದ್ಘಾಟಿಸಿದರು.ಈ ವೇಳೆ ಮಾತನಾಡಿದ ಅವ್ರು, ರಕ್ತವರ್ಗಾವಣೆ ಬಗ್ಗೆ ಜಾಗೃತೆ ವಹಿಸಿಕೊಳ್ಳಬೇಕು. ಇದರ ಬಗ್ಗೆ ಸಂಬಂಧಪಟ್ಟ ವೈದ್ಯಾಧಿಕಾರಿ ರೋಗಿಗಳಿಗೆ ತಿಳಿಯಪಡಿಸಿಬೇಕೆಂದರು.

 

ಇನ್ನೂ ಸಂಸ್ಥೆ ನಿರ್ದೇಶಕ ರೇ.ಫಾದರ್ ರೀರ್ಚಡ್ ಕೊಯಿಲೋ ಮಾತನಾಡಿ, ಇಂತಹ ಕಾರ್ಯಕ್ರಮದಿಂದ ಜನಜಾಗೃತಿ ಮೂಡಿಸಲು ಸಾಧ್ಯವಾಗುತ್ತಿದೆ ಅಂತಾ ಹೇಳಿದ್ರು.
ಈ ಸಂದರ್ಭದಲ್ಲಿ ರೇ.ಫಾದರ್ ಅಜಿತ್ ಮೆನೇಜಸ್, ಎಜೆ ಆಸ್ಪತ್ರೆಯ ವೈದ್ಯಾಧಿಕಾರಿ ಅರವಿಂದ, ಎಚ್‌ಓಡಿ ಡಾ|ಜಯ ಪ್ರಕಾಶ್ , ಡಾ| ಉದಯ್ ಕುಮಾರ್, ಮತ್ತಿತರು ಉಪಸ್ಥತಿರಿದ್ರು.

ಕಾರ್‍ಯಾಗಾರದಲ್ಲಿ ರೋಗಲಕ್ಷಣ ಪತ್ತೆ ಕುರಿತಾದ ವಿವಿಧ ವಿಚಾರಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.

Related posts

Leave a Reply