Header Ads
Header Ads
Header Ads
Breaking News

ಫಾದರ್ ಮುಲ್ಲರ್ ಕಾಲೇಜಿನಲ್ಲಿ ಮತ್ತೊಂದು ಕೋರ್ಸ್ ನೇಮಕ ಅಲೈಡ್ ಹೆಲ್ತ್ ಸಯನ್ಸ್ ಕೋರ್ಸ್ ಉದ್ಘಾಟನೆ ರೆವರೆಂಡ್ ಮರಿಯ ಶೃತಿಯವರಿಂದ ಚಾಲನೆ

ಮಂಗಳೂರಿನ ಕಂಕನಾಡಿಯಲ್ಲಿರುವ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ಅಲೈಡ್ ಹೆಲ್ತ್ ಸಯನ್ಸ್ ವಿಭಾಗ ಉದ್ಘಾಟನೆಗೊಂಡಿತು.

ಈಗಾಗಲೇ ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ಮತ್ತೊಂದು ಹೊಸ ಕೋರ್ಸ್‌ನ್ನು ಆರಂಭಿಸಿದೆ. ಅದುವೇ ಅಲೈಡ್ ಹೆಲ್ತ್ ಸಯನ್ಸ್. 2017-18 ಸಾಲಿನ ನೂತನ ಬ್ಯಾಚ್‌ನ್ನು ಸೈಂಟ್ ಆಗ್ನೇಸ್ ಸ್ಪೆಷಲ್ ಸ್ಕೂಲ್‌ನ ಪ್ರಿನ್ಸಿಪಾಲ್ ರೆವರೆಂಡ್ ಮರಿಯ ಶ್ರುತಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಅನಂತರ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ಆಫ್ ಇನ್ಸ್‌ಸ್ಟಿಟ್ಯೂಷನ್‌ನ ರೆವರೆಂಡ್ ಫಾದರ್ ರಿಚರ್ಡ್ ಕೊಯಿಲೋ ಮಾತನಾಡಿ ನಮ್ಮ ಸಂಸ್ಥೆಯಲ್ಲಿ ಹೊಸದೊಂದು ವಿಭಾಗ ಉದ್ಘಾಟನೆಗೊಂಡಿದೆ ಎಂದ ಅವರು, ಮೆಡಿಕಲ್ ಕ್ಷೇತ್ರದಲ್ಲೇ ಅಲೈಡ್ ಹೆಲ್ತ್ ಸಯನ್ಸ್ ಕೋರ್‍ಸ್‌ನ ಪ್ರಯೋಜನವನ್ನು ಮುಂದಿನ ದಿನಗಳಲ್ಲಿ ನಮ್ಮ ಕಾಲೇಜಿನಲ್ಲೇ ಪಡೆಯಬಹುದು ಎಂದರು.

ಈ ಸಂದರ್ಭ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಡೀನ್ ಡಾ. ಜೆ.ಪಿ. ಆಳ್ವ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಎಡ್‌ಮಿನಿಸ್ಟ್ರೇಟರ್ ರೆವರೆಂಡ್ ಫಾದರ್ ಅಜಿತ್ ಮಿನೇಜಸ್, ರಿನಾ ಟಿ.ಡಿ, ಕೋರ್ಸ್ ಕೋ ಆರ್ಡಿನೇಟರ್ ಸುದೀಪ್ ಎಮ್.ಜೆ. ಉಪಸ್ಥಿತರಿದ್ದರು.

Related posts

Leave a Reply