Header Ads
Header Ads
Breaking News

ಫಾದರ್ ಮುಲ್ಲರ್ ಚಾರಿಟೇಬಲ್ ಇನ್ಸ್‌ಸ್ಟಿಟ್ಯೂಷನ್ ನ ರಿಸರ್ಚ್ ಸೆಂಟರ್ ಮತ್ತು ಆಡಿಯೋಲಜಿ ಬ್ಲಾಕ್‌ನ ಉದ್ಘಾಟನೆ ಕಾರ್ಯಕ್ರಮ

ಮಂಗಳೂರಿನ ಕಂಕನಾಡಿಯಲ್ಲಿರುವ ಫಾದರ್ ಮುಲ್ಲರ್ ಚಾರಿಟೇಬಲ್ ಇನ್ಸ್‌ಸ್ಟಿಟ್ಯೂಷನ್‌ನ ಫಾದರ್ ಮುಲ್ಲರ್ ರಿಸರ್ಚ್ ಬ್ಲಾಕ್ ಮತ್ತು ಫಾದರ್ ಮುಲ್ಲರ್ ಆಡಿಯೋಲಜಿ ಬ್ಲಾಕ್‌ನ ಉದ್ಘಾಟನಾ ಕಾರ್ಯಕ್ರಮ ನಡೆಯಿತು.ಉತ್ತಮ ಗುಣಮಟ್ಟದ ಸೇವೆಯನ್ನು ನೀಡುತ್ತಿರುವ ಫಾದರ್ ಮುಲ್ಲರ್ ಚಾರಿಟೇಬಲ್ ಇನ್ಸ್‌ಸ್ಟಿಟ್ಯೂಷನ್ ಇದೀಗ ಎರಡು ಹೊಸ ಬ್ಲಾಕ್‌ಗಳನ್ನು ಆರಂಭಿಸಿದ್ದಾರೆ. ಫಾದರ್ ಮುಲ್ಲರ್ ರಿಸರ್ಚ್ ಬ್ಲಾಕ್ ಮತ್ತು ಆಡಿಯೋಲಜಿ ಬ್ಲಾಕ್‌ನ್ನು ಆರಂಭಿಸಿದ್ದು ಇದರ ಉದ್ಘಾಟನೆಯನ್ನು ಮಲೇಶಿಯಾದ ಪೆರ್‌ಡಾನ ವಿಶ್ವವಿದ್ಯಾನಿಲಯದ ವಯ್ಸ್ ಚಾನ್ಸ್‌ಲರ್ ಪ್ರೊ. ಡಾ. ಝಬಿಡಿ ಎಎಮ್. ಹುಸಿನ್ ಅವರು ರಿಬ್ಬನ್ ಕತ್ತರಿಸಿ ನೆರವೇರಿಸಿದರು.

ಮಂಗಳೂರು ಬಿಷಪ್ ರೆವರೆಂಡ್ ಪಾದರ್ ಡಾ. ಪೀಟರ್ ಪೌಲ್ ಸಲ್ಡಾನಾ ಅವರು ಆಶೀರ್ವವಚನ ನೀಡಿದರು.ಫಾದರ್ ಮುಲ್ಲರ್ ಚಾರಿಟೇಬಲ್ ಇನ್ಸ್‌ಸ್ಟಿಟ್ಯೂಷನ್ ನಿರ್ದೆಶಕರಾದ ರೆವರೆಂಡ್ ಫಾದರ್ ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಅವರು ಮಾತನಾಡಿ, ಈ ರಿಸರ್ಚ್ ಸೆಂಟರ್‌ನ ನಿರ್ಮಾಣದ ಹಿಂದೆ ಹಲವರ ಶ್ರಮವಿದೆ. ದೇವರ ಆರ್ಶೀವಾದದೊಂದಿಗೆ ಈ ರಿಸರ್ಚ್ ಸೆಂಟರ್ ಯಾವುದೇ ತೊಂದರೆಗಳಿಲ್ಲದೆ ಶೀಘ್ರವಾಗಿ ನಿರ್ಮಾಣಗೊಂಡಿದೆ ಎಂದರು.ಈ ಸಂದರ್ಭ ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ರೆವರೆಂಡ್ ಫಾದರ್ ರುಡಾಲ್ಫ್ ರವಿ ಡೇಸಾ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಅಡಳಿತಾಧಿಕಾರಿ ಫಾದರ್ ಅಜಿತ್. ಬಿ. ಮಿನೇಜಸ್, ಫಾದರ್ ಮುಲ್ಲರ್ ಹೋಮಿಯೋಪಥಿಕ್ ಕಾಲೇಜಿನ ಫಾದರ್ ವಿನ್ಸೆಂಟ್ ಸಲ್ಡಾನ, ಡೀನ್ ಡಾ. ಜಯಪ್ರಕಾಶ್ ಆಳ್ವ, ರಿಸರ್ಚ್ ಸೆಂಟರ್‌ನ ಮುಖ್ಯಸ್ಥರಾದ ಡಾ. ಸಂಜೀವ್ ಬಿ. ರೈ, ವಯ್ಸ್ ಡೀನ್ ಡಾ. ಪದ್ಮಜ ಉದಯಕುಮಾರ್, ಪ್ರೊ. ಅಖಿಲೇಶ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *