Header Ads
Header Ads
Breaking News

ಫಾದರ್ ಮುಲ್ಲರ್ ಸ್ಕೂಲ್ ಆಂಡ್ ಕಾಲೇಜ್ ಆಫ್ ನರ್ಸಿಂಗ್ : ಇಗ್ನೈಟ್ 2019ವಾರ್ಷಿಕ ಕ್ರೀಡಾ ಕೂಟದ ಸಂಭ್ರಮ

ಫಾದರ್ ಮುಲ್ಲರ್ ಸ್ಕೂಲ್ ಆಂಡ್ ಕಾಲೇಜ್ ಆಫ್ ನರ್ಸಿಂಗ್‌ನ ವಾರ್ಷಿಕ ಕ್ರೀಡಾ ಕೂಟ ಇಗ್ನೈಟ್ 2019 ಮಂಗಳೂರಿನ ಕಂಕನಾಡಿಯಲ್ಲಿರುವ ಫಾದರ್ ಮುಲ್ಲರ್ ಮೈದಾನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ನ್ಯಾಷನಲ್ ಸಬ್ ಜ್ಯೂನಿಯರ್ ಪೌವರ್ ಲಿಪ್ಟರ್ ವೆನಿಸ್ಸಿಯಾ ಅನ್ನಿ ಕಾರ್ಲೋ ಕಾಲೇಜಿನ ದ್ವಜಾರೋಹಣ ಹಾಗೂ ಬಲೂನ್ ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕಾಲೇಜುಗಳು ಶೈಕ್ಷಣೀಕ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿರಬಾರದು ಕ್ರೀಡಾ ಕೂಟ ಕಾಲೇಜು ಶಿಕ್ಷಣದ ಅಂಗ. ನಾವು ಮೊಬೈಲ್ ಮತ್ತು ಇಂಟರ್‌ನಟ್‌ಗಳಗಿ ಮಾರುಹೋಗುತ್ತಿದ್ದೇವೆ. ಅದರ ಜೊತೆಗೆ ಮೈದಾನಕ್ಕೆ ಬಂದು ಆಟವಾಡಿ ಪರಿಸರದ ಶುದ್ಧಗಾಳಿಯನ್ನು ಆಸ್ವಾದಿಸಬೇಕು ಎಂದು ಹೇಳಿದರು.
ಬಳಿಕ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ನಿರ್ದೇಶಕ ರೆವರೆಂಡ್ ಫಾದರ್ ರಿಚರ್‍ಡ್ ಅಲೋಶಿಯಸ್ ಕೊಯೆಲೋ ಮಾತನಾಡಿ ವಿದ್ಯಾರ್ಥೀಗಳು ಉತ್ತಮ ರೀತಿಯಲ್ಲಿ ಪಥಸಂಚಲನವನ್ನು ಮಾಡಿದ್ದೀರಿ ನಿಮಗೆ ಅಭಿನಂದನೆಗಳು ಹಾಗೂ ಇತ್ತಿಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್‌ನ ದಾಸರಾಗುತ್ತಿದ್ದಾರೆ. ನಮ್ಮ ಜೀವನದ ಒತ್ತಡವನ್ನು ಕಡಿಮೆ ಮಾಡಲು ದೇಹ ದಂಡನೆ ಅಗತ್ಯ ಅದ್ದರಿಂದ ಸ್ಟೋಟ್ಸ್ ಮತ್ತು ಗೇಮ್ಸ್‌ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.ಈ ವೇಳೆ ವಿದ್ಯಾರ್ಥಿಗಳಿಂದ ಶಿಸ್ತುಭದ್ಧ ಪಥಸಂಚಲನ ನೆರೆವೇರಿತು.


ಕಾರ್ಯಕ್ರಮದಲ್ಲಿ ಫಾದರ್ ಮುಲ್ಲರ್ ಕಾಲೇಜ್ ಆಫ್ ನರ್ಸಿಂಗ್‌ನ ಉಪ ಪ್ರಾಶುಪಾಲರಾದ ವಿಕ್ಟೋರಿಯಾ ಡಿ.ಅಲ್ಮೇಡಾ, ಫಾದರ್ ಮುಲ್ಲರ್ ಸ್ಕೂಲ್ ಆಫ್ ನರ್ಸಿಂಗ್‌ನ ಪ್ರಾಂಶುಪಾಲರಾದ ಜಾಸ್ಮಿನ್ ಸರಿತಾ ವಾಸ್, ಸ್ಪೋಟ್ಸ್ ಕಮಿಟಿ ಕೋರ್ಡಿನೇಟರ್ ಅಭಿನ್ ಕುರಿಯಾಕ್ರೋಸ್ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Related posts

Leave a Reply