Header Ads
Header Ads
Breaking News

ಫಾಸ್ಟ್ ಟ್ಯಾಗ್ ಕಡ್ಡಾಯ ನೀತಿಗೆ ವಿರೋಧ : ತಲಪಾಡಿ ಟೋಲ್‍ಗೇಟ್ ಎದುರು ಪ್ರತಿಭಟನೆ

ಉಳ್ಳಾಲ: ಫಾಸ್ಟ್ ಟ್ಯಾಗ್ ಕಡ್ಡಾಯ ಜಾರಿಗೊಳಿಸುವ ಮೂಲಕ ಸರಕಾರದಿಂದ ಜನರ ಮೇಲಿನ ದಬ್ಬಾಳಿಕೆ ನಡೆಯುತ್ತಿದೆ. ಬೇಡಿಕೆಗಳನ್ನು ಈಡೇರಿಸದೇ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದಲ್ಲಿ ಹೋರಾಟ ನಿರಂತರವಾಗಿ ನಡೆಸಿ ಜೈಲಿಗೆ ಹಾಕಿದರೂ ಬಿಡುವುದಿಲ್ಲ ಎಂದು ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದೀಖ್ ತಲಪಾಡಿ ಹೇಳಿದ್ದಾರೆ. ಸ್ವನಿಯಂತ್ರಿತ (ಫಾಸ್ಟ್ ಟ್ಯಾಗ್ ) ಪದ್ಧತಿ ಜಾರಿಗೊಳಿಸಿರುವುದರ ವಿರುದ್ಧ ಹಾಗೂ ಈ ಮೂಲಕ ಟೋಲ್ ಶುಲ್ಕ ಕಡ್ಡಾಯಗೊಳಿಸಿರುವುದರ ವಿರುದ್ಧ ಕಡ್ಡಾಯ ನಿಯಮವನ್ನು ಸಡಿಲಗೊಳಿಸಬೇಕು ಎಂದು ಒತ್ತಾಯಿಸಿ ತಲಪಾಡಿ ಟೋಲ್ ಗೇಟ್ ಎದುರು ಕರ್ನಾಟಕ ಗಡಿನಾಡು ರಕ್ಷಣಾ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಪ್ರತಿಭಟನಾ ಸಭೆಯನ್ನು ಮಂಜೇಶ್ವರ ಗ್ರಾಹಕರ ವೇದಿಕೆ ಅಧ್ಯಕ್ಷ ಮುರಳೀಧರ್ ಭಟ್ ಉದ್ಘಾಟಿಸಿದರು.ಈ ಸಂದರ್ಭ ಬಿಜೆಪಿ ಮುಖಂಡ ಹರಿಶ್ಚಂದ್ರ, ಮುಸ್ಲಿಂ ಯೂತ್ ಲೀಗ್ ಬ್ಲಾಕ್ ಅಧ್ಯಕ್ಷ ಸೈಫುಲ್ಲಾ ತಂಞಳ್, ಸಿಪಿಎಂನ ರಝಾಕ್ ಚಿಟ್ಟುಪದವ್, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *