Header Ads
Breaking News

ಫಿಫಾ ನೂರನೇ ರ್‍ಯಾಂಕ್‌ಗೇರಿದ ಭಾರತ, ಎರಡು ದಶಕದ ಬಳಿಕ ಫುಟ್‌ಬಾಲ್ ಸಾಧನೆ

ಬರೋಬ್ಬರಿ ಎರಡು ದಶಕಗಳನಂತರ ಭಾರತ ಫುಟ್ಬಾಲ್ ತಂಡ ಅಂತರರಾಷ್ಟ್ರೀಯ ಫುಟ್ಬಾಲ್ ಒಕ್ಕೂಟ ಫಿಫಾದ ರ್ಯಾಂಕಿಂಗ್ ಪಟ್ಟಿಯಲ್ಲಿ ನೂರನೇ ಸ್ಥಾನ ಪಡೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.
ಸದ್ಯ ಭಾರತ ತಂಡ ಫಿಫಾ ರ್ಯಾಂಕಿಂಗ್ನಲ್ಲಿ ೧೦೦ನೇ?ಸ್ಥಾನದಲ್ಲಿದ್ದು, ೧೯೯೬ರನಂತರ ಪಡೆದುಕೊಂಡಿರುವ ಅತ್ಯುತ್ತಮ ರ್ಯಾಂಕಿಂಗ್ ಇದಾಗಿದೆ. ೧೯೯೬ರಲ್ಲಿ ೯೪ನೇ ಸ್ಥಾನ ಗಳಿಸಿದ್ದು ಭಾರತ ಫುಟ್ಬಾಲ್ ತಂಡದ ಇದುವರೆಗಿನ ಸಾಧನೆಯಾಗಿದೆ. ಸದ್ಯ ನಾವು ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದೇವೆ. ಮುಂದೆ ಬಹಳ ಮುಖ್ಯವಾದ ಸರಣಿಗಳಲ್ಲಿ ಪಾಲ್ಗೊಳ್ಳಲಿದ್ದು, ಯಾವುದನ್ನೂ ಹಗುರವಾಗಿ ಪರಿಗಣಿಸುವುದಿಲ್ಲ ಎಂದು ತಂಡದ ತರಬೇತುದಾರ ಸ್ಟೀಫನ್ ಕಾನ್ಸ್ಟಂಟೈನ್ ಹೇಳಿದ್ದಾರೆ.
ಅಖಿಲ ಭಾರತ ಫುಟ್ಬಾಲ್ ಒಕ್ಕೂಟದ ಕಾರ್ಯದರ್ಶಿ ಕುಶಾಲ್ ದಾಸ್ ಅವರು, ನಾವೀಗ ೧೦೦ನೇ ಸ್ಥಾದಲ್ಲಿದ್ದೇವೆ. ತಂಡಕ್ಕೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದ್ದು, ತಂಡದಿಂದ ಮತ್ತಷ್ಟು ಸಾಧನೆಯನ್ನು ನಿರಿಕ್ಷಿಸುತ್ತೇವೆ ಎಂದು ಹೇಳಿಕೊಂಡಿದ್ದಾರೆ. ಬ್ರೆಜಿಲ್, ಅರ