Header Ads
Header Ads
Breaking News

ಫಿಬಾ ಮಹಿಳಾ ಏಶಿಯಾ ಕಪ್ ಬಾಸ್ಕೆಟ್‌ಬಾಲ್,  ಜೀನಾ ಸ್ಕರಿಯಾ ಜಾದೂವಿಂದ ಭಾರತ ಪೈನಲ್‌ಗೆ

ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ಮನಮೋಹಕ ಆಟ ಆಡಿದ ಜೀನಾ ಸ್ಕರಿಯಾ ಅವರು ತವರಿನ ಬ್ಯಾಸ್ಕೆಟ್ಬಾಲ್ ಪ್ರಿಯರು ಖುಷಿಯ ಕಡಲಲ್ಲಿ ತೇಲುವಂತೆ ಮಾಡಿದರು.
ಅವರ ಕೆಚ್ಚೆದೆಯ ಹೋರಾಟದ ಬಲದಿಂದ ಭಾರತ ತಂಡದವರು ಫಿಬಾ ಮಹಿಳಾ ಏಷ್ಯಾಕಪ್ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ. ಬಿ ಡಿವಿಷನ್ನ ಸೆಮಿಫೈನಲ್ ಹಣಾಹಣಿಯಲ್ಲಿ ಅನಿತಾ ಪಾಲ್ ದೊರೈ ಬಳಗ ೭೯-೬೯ ಪಾಯಿಂಟ್ಸ್ನಿಂದ ಬಲಿಷ್ಠ ಲೆಬನಾನ್ ತಂಡದ ಸವಾಲು ಮೀರಿ ನಿಂತಿತು. ಗುರುವಾರ ನಡೆದಿದ್ದ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಫಿಜಿ ವಿರುದ್ಧ ಸುಲಭ ಗೆಲುವು ಗಳಿಸಿ ವಿಶ್ವಾಸದಿಂದ ಬೀಗುತ್ತಿದ್ದ ಆತಿಥೇಯ ತಂಡದವರು ಲೆಬನಾನ್ ವಿರುದ್ಧವೂ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಅಣಿಯಾದರು.
ಚಾಂಪಿಯನ್ಷಿಪ್ನಲ್ಲಿ ಮೊದಲ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಭಾರತ ತಂಡದ ಪರ ಜೀನಾ ಅವರು ಲೆಬನಾನ್ ತಂಡದ ರಕ್ಷಣಾ ವಿಭಾಗಕ್ಕೆ ಸವಾಲಾದರು. ಏಳು ರೀಬೌಂಡ್ಸ್ ಸೇರಿದಂತೆ ಒಟ್ಟು ೨೦ ಪಾಯಿಂಟ್ಸ್ ಹೆಕ್ಕಿದ ಅವರು ತವರಿನ ಅಭಿಮಾನಿಗಳ ಮನ ಗೆದ್ದರು. ರಸ್ಪ್ರೀತ್ ಸಿಧು ಕೂಡ ಮೋಡಿ ಮಾಡಿದರು. ಐದು ರೀಬೌಂಡ್ಗಳನ್ನು ಮಾಡಿದ ಅವರು ಒಟ್ಟಾರೆ ೧೭ ಪಾಯಿಂಟ್ಸ್ ಸಂಗ್ರಹಿಸಿ ತಂಡದ ಪಾಯಿಂಟ್ಸ್ ಹೆಚ್ಚಿಸಿದರು. ಹಿಂದಿನ ಪಂದ್ಯಗಳಲ್ಲಿ ಮಿಂಚಿದ್ದ ನಾಯಕಿ ಅನಿತಾ, ಚೆಂಡನ್ನು ನಿಖರವಾಗಿ ಬ್ಯಾಸ್ಕೆಟ್ ಮಾಡಿ ಉದ್ಯಾನಗರಿಯ ಅಭಿಮಾನಿಗಳ ಸಂಭ್ರಮಕ್ಕೆ ಕಿಚ್ಚು ಹೊತ್ತಿಸಿದರು. ಅವರು ೧೩ ಪಾಯಿಂಟ್ಸ್ ಸಂಗ್ರಹಿಸಿ ಸಂಭ್ರಮಿಸಿದರು. ಲೆಬನಾನ್ ತಂಡ ಕೂಡ ಭಾರತಕ್ಕೆ ಪ್ರಬಲ ಪೈಪೋಟಿ ಒಡ್ಡಿತು. ಈ ತಂಡದ ರೆಬೆಕ್ಕಾ ಅಕಿ ೨೦ ಪಾಯಿಂಟ್ಸ್ ಗಳಿಸಿದರು. ಲಾಮಾ ಮೌಕಾಡೆಮ್ ಮತ್ತು ಚಿರೈನ್ ಎಲ್ ಚಾರಿಫ್ ಅವರು ಕ್ರಮವಾಗಿ ೧೬ ಮತ್ತು ೧೫ ಪಾಯಿಂಟ್ಸ್ ಸಂಗ್ರಹಿಸಿ ಸೋಲಿನ ನಡುವೆಯೂ ಗಮನ ಸೆಳೆದರು.

Related posts

Leave a Reply