Header Ads
Header Ads
Breaking News

ಫಿಶ್ ಸ್ಟೋರೇಜ್‌ನಲ್ಲಿ ಅಮೋನಿಯಾ ಲಿಕ್ವಿಡ್ ಸ್ಪೋಟ : ಇಪ್ಪತ್ತಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು ಅಸ್ವಸ್ಥ

ಫಿಶ್‌ಸ್ಟೋರೇಜ್ ಘಟಕದಲ್ಲಿ ಅಮೋನಿಯಾ ಲಿಕ್ವಿಡ್ ಸೋರಿಕೆಯಾಗಿ ಸ್ಫೋಟಗೊಂಡು 20ಕ್ಕೂ ಅಧಿಕ ಮಂದಿ ಮಹಿಳಾ ಕಾರ್ಮಿಕರು ಗಾಯಗೊಂಡಿದ್ದಾರೆ. ಕುಂದಾಪುರದ ಹೆಮ್ಮಾಡಿಯ ಬಗ್ವಾಡಿ ಸಮೀಪದ ದೇವಲ್ಕುಂದದಲ್ಲಿರುವ ಮಲ್ಪೆ ಮರೈನ್ ಫಿಶ್ ಸ್ಟೋರೇಜ್‌ನಲ್ಲಿ ಈ ಅವಘಡ ಸಂಭವಿಸಿದೆ. ಇಂದು ನಸುಕಿನ ಜಾವ ಫ್ಯಾಕ್ಟರಿಯಲ್ಲಿ ಐಸ್ ಫ್ರೀಝ್ ಮಾಡಲು ಬಳಸುವ ಅಮೋನಿಯಾ ಲಿಕ್ವಿಡ್ ಸೋರಿಕೆಯಾಗಿದೆ.

ಇದರಿಂದ ಪಕ್ಕದ ವಿಶ್ರಾಂತಿ ಕೊಠಡಿಯಲ್ಲಿ ಮಲಗಿದ್ದ ಮಹಿಳಾ ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಕುಂದಾಪುರ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಸ್ಥಳದಲ್ಲಿ ಅಗ್ನಿಶಾಮಕ ದಳದವರಿಂದ ಕಾರ್ಯಾರಣೆ ನಡೆದಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಆಸ್ಪತ್ರೆಗೆ ಸಹಾಯಕ ಆಯುಕ್ತರು, ಆರೋಗ್ಯಾಧಿಕಾರಿ ಸಹಿತ ಉನ್ನತ ಅಧಿಕಾರಿಗಳು ದೌಡಾಯಿಸಿ, ಚಿಕಿತ್ಸೆ ಪಡೆಯುತ್ತಿರುವವರ ಬಗ್ಗೆ ಮಾಹಿತಿ ಪಡೆದಿದ್ದಾರೆ.

Related posts

Leave a Reply

Your email address will not be published. Required fields are marked *