Header Ads
Breaking News

ಫುಟ್ ಬೋರ್ಡ್‍ನಲ್ಲಿ ನೇತಾಡುತ್ತ ಪ್ರಯಾಣಿಸುತ್ತಿರುವ ಮಕ್ಕಳು : ಅಪಾಯಕಾರಿ ಎಂದು ಗೊತ್ತಿದ್ದರೂ ಕ್ಯಾರೇ ಅನ್ನದ ನಿರ್ವಾಹಕ

ಬಸ್ಸಿನ ಒಳಗಡೆ ಸ್ಥಳಾವಕಾಶ ಇದ್ದರೂ ಫುಟ್ ಬೋರ್ಡ್‍ನಲ್ಲಿನೇತಾಡಿಕೊಂಡೇ ಪ್ರಯಾಣಿಸುವುದೇ ಶೋಕಿಯನ್ನಾಗಿಸಿಕೊಂಡ ಶಾಲಾ ಮಕ್ಕಳು ಅಪಾಯಕಾರಿ ಸ್ಥಿತಿಯಲ್ಲಿ ಬಸ್‍ಲ್ಲಿ ನೇತಾಡುತ್ತಿದ್ದರೂ ನಿರ್ವಾಹಕ ವಿರೋಧಿಸದಿರುವುದು ಅಚ್ಚರಿ ಎಣಿಸಿದೆ.
ಹೆಜಮಾಡಿ ಪ್ರದೇಶದಲ್ಲಿ ಖಾಸಗಿ ಬಸ್ಸನ್ನೇರಿದ ಶಾಲಾ ಮಕ್ಕಳು ಬ್ಯಾಗನ್ನು ಬೆನ್ನಿಗೇರಿಸಿಕೊಂಡು ಅಪಾಯಕಾರಿಯಾಗಿ ಫುಟ್ ಬೋರ್ಡ್ ನಲ್ಲಿ ನೇತಾಡುತ್ತ ಪ್ರಯಾಣಿಸುವುದು ಗಮನಿಸಿದರೆ ಒಂದಲ್ಲ ಒಂದು ದಿನ ಅಪಾಯ ಕಟ್ಟಿಟ್ಟ ಬುತ್ತಿ. ಇದರ ಅರಿವಿದ್ದರೂ ಅನಾಹುತ ನಡೆದ ಬಳಿಕ ಬುದ್ಧಿ ಬರ ಬಹುದು ಎಂಬ ನಿಟ್ಟಿ ನಿಂದಲೋ ಏನೋ ನಿರ್ವಾಹಕ ತನ್ನ ಪಾಡಿಗೆ ಬಸ್ಸಿನೊಳಗೆ ಟಿಕೇಟ್ ನೀಡುವುದರಲ್ಲೇ ಬಿಸಿಯಾಗಿದ್ದರು. ಅನಾಹುತ ಸಂಭವಿಸುವ ಮುನ್ನ ಮಕ್ಕಳು ಎಚ್ಚರಗೊಳ್ಳುತ್ತಾರೋ…ಇಲ್ಲ ಪೊಲೀಸ್ರು ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುತ್ತಾರೋ ಕಾದು ನೋಡ ಬೇಕೆನ್ನುತ್ತಾರೆ ಈ ಅಪಾಯಕಾರಿ ಪ್ರಯಾಣವನ್ನು ವೀಕ್ಷಿಸಿದ ಮಂದಿ.

Related posts

Leave a Reply

Your email address will not be published. Required fields are marked *