Breaking News

ಫೆಂಗ್‌ಕ್ಸಿ ಶಾಲೆ ಬಳಿ ಬಾಂಬ್‌ನಂತೆ ಸಿಡಿದ ಸಿಲಿಂಡರ್, ಏಳು ಮಕ್ಕಳ ಸಾವು, ಅರುವತ್ತು ಜನರಿಗೆ ತೀವ್ರ ಗಾಯ

ಪೂರ್ವ ಚೀನಾದ ಜಿಯಾಂಗ್ಸು ಪ್ರಾಂತದ ಫೆಂಗ್ಕ್ಸಿಯಾನ್ ಕೌಂಟಿಯ ಶಾಲೆಯೊಂದರ ಮುಂಭಾಗದಲ್ಲಿ ಗುರುವಾರ ಸಂಜೆ ಸಂಭವಿಸಿದ ಪ್ರಬಲ ಸ್ಫೋಟಕ್ಕೆ ೭ ಜನ ಮೃತಪಟ್ಟು ೬೦ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ವಿದ್ಯಾರ್ಥಿಗಳು ಶಾಲೆ ಬಿಟ್ಟು ತೆರಳುವ ಸಮಯದಲ್ಲಿ, ಸಂಜೆ ೪.೫೦ರ ವೇಳೆಗೆ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ಸರ್ಕಾರಿ ಮಾಧ್ಯಮ ಕ್ಸಿನ್ಹುವಾ ವರದಿ ಮಾಡಿದೆ. ಇಬ್ಬರು ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದರೆ, ಐವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಗಾಯಾಳುಗಳ ಪೈಕಿ ೯ ಜನರ ಸ್ಥಿತಿ ಗಂಭೀರವಾಗಿದೆ.
ಮೃತಪಟ್ಟವರು ಮತ್ತು ಗಾಯಾಳುಗಳಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು ಎನ್ನಲಾಗಿದೆ. ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಘಟನೆಗೆ ಕಾರಣವೇನು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಆದಾಗ್ಯೂ, ಸ್ಫೋಟಗೊಂಡಿದ್ದು ಗ್ಯಾಸ್ ಸಿಲಿಂಡರ್ ಎಂದು ಗ್ಲೋಬಲ್ ಟೈಮ್ಸ್ ಮತ್ತು ಚೀನಾ ಯೂತ್ ಡೈಲಿ ಪತ್ರಿಕೆಗಳು ವರದಿ ಮಾಡಿವೆ.

Related posts

Leave a Reply