Header Ads
Header Ads
Breaking News

ಫೆ.12ರಂದು ಪುತ್ತೂರಿನಲ್ಲಿ ನವದಿವಾ ಸಾಮೂಹಿಕ ಸೂರ್ಯ ನಮಸ್ಕಾರ

ಪ್ರಾಜೆಕ್ಟ್ ಭಾರತ ಆಯೋಜನೆಯಲ್ಲಿ ನವದಿವಾ ಸಾಮೂಹಿಕ ಸೂರ್ಯನಮಸ್ಕಾರ ಕಾರ್ಯಕ್ರಮವು ಫೆಬ್ರವರಿ 12ರಂದು ಪುತ್ತೂರಿನ ವಿವೇಕಾನಂದ ಅಂಗ್ಲ ಮಾಧ್ಯಮ ಶಾಲೆಯ ವಠಾರದಲ್ಲಿ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಸಂಯೋಜಕಿ ಶರಾವತಿ ರವಿ ನಾರಾಯಣ ಹೇಳಿದರು.

ಅವರು ಪುತ್ತೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು. ಪುತ್ತೂರಿನ ವಿವಿಧ ಯೋಗ ಸಂಸ್ಥೆಗಳು ಒಟ್ಟು ಸೇರಿ ಫೆಬ್ರವರಿ 12ರ ರಥಸಪ್ತಮಿಯಂದು ಸಾಮೂಹಿಕ ಸೂರ್ಯ ನಮಸ್ಕಾರ ನವದಿವಾವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ ೫೪.೩೦ರಿಂದ ೭.೩೦ರ ವರೆಗೆ ಆಯೋಜಿಸಲಾಗಿದೆ. ಜಾತಿ, ಮತ, ಧರ್ಮಗಳ ಭೇದವನ್ನು ಮೀರಿ, ಸ್ವಸ್ಥ ಸಮಾಜದ ಪರಿಕಲ್ಪನೆಯೊಂದಿಗೆ ಸುಮಾರು 1000 ಜನರು ಒಟ್ಟು ಸೇರಿ 108 ಸೂರ್ಯ ನಮಸ್ಕಾರವನ್ನು ಮಾಡುವ ಮೂಲಕ ಜನಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಿದ್ದಾರೆ ಎಂದು.

ಸುದ್ದಿಗೋಷ್ಠಿಯಲ್ಲಿ ಪ್ರಶಾಂತ್ ರೈ ಕೈಕಾರ, ಸುಬ್ರಹ್ಮಣ್ಯ ನಟ್ಟೋಜ,  ಗುರುಪ್ರಿಯಾ ನಾಯಕ್ ಉಪಸ್ಥಿತರಿದ್ದರು.

Related posts

Leave a Reply