Header Ads
Header Ads
Breaking News

ಫೆ.5ರಂದು ಮಂಗಳೂರಿನ ಪುರಭವನದಲ್ಲಿ:ಯಕ್ಷದ್ರುವ ಪಟ್ಲ ಪೌಂಡೇಶನ್‌ನ ವಾರ್ಷಿಕೋತ್ಸವ

ಮಂಗಳೂರಿನ ಯಕ್ಷ ಧ್ರುವ ಪಟ್ಲ ಫೌಂಡೇಶನ್ ದ್ವೀತಿಯ ವಾರ್ಷಿಕೋತ್ಸವ ಸಂಭ್ರಮ ಫೆಬ್ರವರಿ 5 ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲ್ಲಿದೆ ಎಂದು ಯಕ್ಷ ಧ್ರುವ ಪಟ್ಲ ಫೌಂಡೇಶನ್‌ನ ಸ್ಧಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.ಅವರು ಮಂಗಳೂರಿನ ಪ್ರತಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮಂಗಳೂರಿನ ಫಟಕದ ದ್ವಿತೀಯ ವಾರ್ಷಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಧೆಯ ಎ.ಸದಾನಂದ ಶೆಟ್ಟಿ ವಹಿಸಲಿದ್ದಾರೆ. ಮಹೇಶ್ ಮೋಟಾರ್‍ಸ್ ಮಂಗಳೂರು ಮಾಲೀಕರಾದ ಪದ್ಮಾವತಿ ಜಯರಾಮ ಶೇಖ ಜ್ಯೋತಿ ಪ್ರಜ್ವಲನೆ ಹಾಗೂ ಮುಖ್ಯ ಅತಿಥಿಯಾಗಿ ಶಾಸಕ ವೇದವ್ಯಾಸ ಕಾಮತ್ ಭಾಗವಹಿಸಲಿದ್ದಾರೆ.

ಯಕ್ಷ ಧ್ರುವ ಪಟ್ಲ ಫೌಂಡೇಶನ್ ವಾರ್ಷಿಕೋತ್ಸವ ಸಂಭ್ರಮದ ಯಕ್ವಗಾನ ಕ್ವೇತ್ರದಲ್ಲಿ ರೀತಿಯಲ್ಲಿ ಸಾಧನೆ ಮಾಡಿದವರಿಗೆ ಸಮ್ಮಾನ ಕಾರ್‍ಯಕ್ರಮ ನಡೆಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷರಾಧ ಪ್ರದೀಪ್ ಆಳ್ವ, ಕೃಷ್ಣ ಶೆಟ್ಟಿ ತಾರೆಮಾರು, ರವಿ ಶೆಟ್ಟಿ ಅಶೋಕನಗರ, ಕಾರ್ಯದರ್ಶಿ ಗೋಪಿನಾಥ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply