Header Ads
Header Ads
Breaking News

ಫೆ.11ರಂದು ಬಿಕರ್ನಕಟ್ಟೆಯಲ್ಲಿ ಶಕ್ತಿ ಕೋಚಿಂಗ್ ಅಕಾಡೆಮಿ ಉದ್ಘಾಟನೆ

ಮಂಗಳೂರಿನ ಬಿಕರ್ನಕಟ್ಟೆಯ ಕ್ಲಾಸಿಕ್ ಫ್ರೈಡ್ ಕಟ್ಟಡದಲ್ಲಿ ಶಕ್ತಿ ಕೋಚಿಂಗ್ ಅಕಾಡೆಮಿಯ ಉದ್ಘಾಟನಾ ಕಾರ್ಯಕ್ರಮ ಫೆಬ್ರವರಿ 11ರಂದು ನಡೆಯಲಿದೆ ಎಂದು ಶಕ್ತಿ ಕೋಚಿಂಗ ಆಕಾಡೆಮಿಯ ಆಡಳಿತ ನಿರ್ದೇಶಕರಾದ ಕೆ.ಸಿ. ನಾಕ್ ತಿಳಿಸಿದರು.
ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಂಗಳೂರಿನ ಶಾರದಾ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್ ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಭಾಸ್ಕರ್ ಕೆ, ಸದಸ್ಯೆ ಸಬಿತಾ ಮಿಸ್ಕಿತ್ ಹಾಗೂ ದಕ್ಷಿಣ ಕನ್ನಡ ಪಿಯು ಕಾಲೇಜು ಪ್ರಾಚಾರ್ಯರ ಸಂಘದ ಅಧ್ಯಕ್ಷ ಕೆ.ಕೆ. ಉಪಾಧ್ಯಾಯ ಉಪಸ್ಥಿತರಿರುವರು.
ಶಕ್ತಿ ಕೋಚಿಂಗ್ ಅಕಾಡೆಮಿಯು ಅನುಭವಿ ಶಿಕ್ಷಕರನ್ನು ಹೊಂದಿದ್ದು, ಪಿಯುಸಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ರಜಾ ಕಾಲದಲ್ಲಿ ವಿಶೇಷ ಕೋಚಿಂಗ್ ಹಾಗೂ ನಿರಂತರ ಕೋಚಿಂಗ್ ತರಗತಿಗಳನ್ನು ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಸಂಚಾಲಕರಾದ ಸುದೀರ್ ಎಮ್.ಎಸ್ ಉಪಸ್ಥಿತರಿದ್ದರು.

Related posts

Leave a Reply