Header Ads
Header Ads
Breaking News

ಫೆ. 13 ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರ ದಿನ : ಬಂಟ್ಸ್ ಹಾಸ್ಟೆಲ್‍ನಿಂದ ಫೋರಂ ಫಿಜಾ ಮಾಲ್‍ವರೆಗೆ ರ್‍ಯಾಲಿ

 

ಫೆಬ್ರವರಿ 13ರಂದು ಭಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರ ದಿನದ ಅಂಗವಾಗಿ ಜನಜಾಗೃತಿ ಮೂಡಿಸಲು ಬಹತ್ ರಸ್ತೆ ಸುರಕ್ಷಾ ತಿಳುವಳಿಕೆ ರ್ಯಾಲಿಯನ್ನು ಬಾಯಿ ಮುಳ ಮತ್ತು ದವಡೆ ಶಸ್ತ್ರ ಚಿಕಿತ್ಸಕರ ಸಂಘದ ವತಿಯಿಂದ ಆಯೋಜಿಸಲಾಗಿದೆ ಎಂದು ದಂತ ವೈದ್ಯ ಡಾ. ಮುರಳಿ ಮೋಹನ್ ಚುಂತಾರು ತಿಳಿಸಿದರು. ಅವರು ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗಷ್ಟಿಯಲ್ಲಿ ಮಾತನಾಡಿ, ಫೆಬ್ರವರಿ 13 ರಂದು ಸಂಜೆ 4.30ಕ್ಕೆ ಬಂಟ್ಸ್ ಹಾಸ್ಟೆಲ್ ವೃತ್ತದಿಂದ ರ್ಯಾಲಿಯು ಆರಂಭವಾಗಲಿದ್ದು ಫೋರಂ ಫಿಜಾ ಮಾಲ್‍ನ ಎದುರು ಸಮಾರೋಪಗೊಳ್ಳಲಿದೆ ಎಂದರು. ಈ ರ್ಯಾಲಿಯಲ್ಲಿ ನಗರದ ಎ.ಬಿ. ಶೆಟ್ಟಿ ದಂತ ಕಾಲೇಜು, ಎಜೆ ಶೆಟ್ಟಿ ದಂತ ಕಾಲೇಜು,ಶ್ರೀನಿವಾಸ ದಂತ ಕಾಲೇಜು, ಯೇನಪೋಯ ದಂತ ಕಾಲೇಜು ಹಾಗೂ ಕೆವಿಜಿ ಸುಳ್ಯ ದಂತ ಕಾಲೇಜಿನ ವಿದ್ಯಾರ್ಥಿಗಳು ಹಾಘೂ ಬಾಯಿ ಮತ್ತು ಮುಖ ಶಸ್ತ್ರ ಚಿಕಿತ್ಸಕರು ಭಾಗವಹಿಸಲಿದ್ದಾರೆ.ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಡಾ ಮುಸ್ತಫಾ, ಡಾ. ಮಂಜುನಾಥ್ ರೈ ಉಪಸ್ಥಿತಿದ್ದರು.

Related posts

Leave a Reply