Header Ads
Breaking News

ಫೆ.14ರಂದು ಎನ್ನ ತುಳು ಸಿನಿಮಾ ಕರಾವಳಿಯಾದ್ಯಂತೆ ಚಿತ್ರ ತೆರೆಗೆ

ಗ್ಲೋರಿಯಸ್ ಆಂಜೆಲೋರ್ ಪ್ರೊಡಕ್ಷನ್ ಬ್ಯಾನರ್‍ನಲ್ಲಿ ಕೋಡಿಕಲ್ ವಿಶ್ವನಾಥ್ ನಿರ್ದೇಶನದಲ್ಲಿ ತಯಾರಾಗಿರುವ ಸಿನಿಮಾ ಎನ್ನ. ಫೆಬ್ರವರಿ 14ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ ಎಂದು ಸುದ್ದಿಗೋಷ್ಟಿಯಲ್ಲಿ ಚಿತ್ರತಂಡ ಮಾಹಿತಿ ನೀಡಿದೆ.ಎನ್ನ ಸಿನೆಮಾ ರಂಗದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಎನ್ನ ಸಿನಿಮಾದಲ್ಲಿ ಬಹಳಷ್ಟು ಮಂದಿ ಹೊಸಬರಿಗೆ ಅವಕಾಶ ನೀಡಲಾಗಿದೆ. ಎನ್ನ ಸಿನೆಮಾವನ್ನು ಕ್ಯಾನೆಟ್ ಮಾತಾಯಸ್ ಪಿಲಾರ್ ನಿರ್ಮಾಣ ಮಾಡಿದ್ದು, ವಿಶ್ವನಾಥ್ ಕೋಡಿಕಲ್ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಎನ್ನ ಸಿನಿಮಾದ ಹಾಡೊಂದು ಬಿಡುಗಡೆಗೊಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಮೂಡಿಬಂದಿದೆ. ಎನ್ನ ಸಿನಿಮಾಕ್ಕೆ ಸೆನ್ಸಾರ್ ನಡೆದಿದ್ದು, ಚಿತ್ರಕ್ಕೆ ಯಾವುದೇ ಕಟ್ಸ್ ಇಲ್ಲದೆ ಸೆನ್ಸಾರ್ ಮಂಡಳಿಯಿಂದ ಯು ಎ ಸರ್ಟಿಫಿಕೇಟ್ ದೊರೆತಿದೆ. ಸಿನಿಮಾ ಫೆಬ್ರವರಿ 14ರಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ರಾಜ್ಯದ ಇತರ ಜಿಲ್ಲೆಗಳಲ್ಲೂ ಬಿಡುಗಡೆಗೊಳ್ಳಲಿದೆ. ಒಟ್ಟು 173 ಹೊಸ ಕಲಾವಿದರು ಇ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇದಲ್ಲದೆ ಕೋಸ್ಟಲ್‍ವುಡ್‍ನಲ್ಲಿ ಪ್ರಥಮ ಬಾರಿಗೆ ಮಹಿಳೆಯೊಬ್ಬರು ಛಾಯಾಗ್ರಹಣ ಮಾಡಿದ್ದೂ ಈ ಸಿನಿಮಾದ ಮತ್ತೊಂದು ವಿಶೇಷ. ಎನ್ನ ಸಿನಿಮಾಕ್ಕೆ ವೈಶಾಲಿ ಎಸ್. ಉಡುಪಿ ಛಾಯಾಗ್ರಹಣ ಮಾಡಿದ್ದೂ ಅನುಷ್ ಚಂದ್ರ ಸಂಕಲನ ಮಾಡಿದ್ದಾರೆ. ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ವಿನೀತ್ ಕುಮಾರ್, ಶೃತಿ ಪೂಜಾರಿ, ಅಶ್ಮಿತ್ ರಾಜ್, ಪ್ರತೀಕ್ ಸನಿಲ್, ಪ್ರಶಾಂತ್ ಸಿ.ಕೆ. ಮೊದಲಾದವರು ಅಭಿನಯಿಸಿದ್ದಾರೆ.

Related posts

Leave a Reply

Your email address will not be published. Required fields are marked *