Header Ads
Breaking News

ಫೆ.14ರ ಪ್ರೇಮಿಗಳ ದಿನಕ್ಕೆ ಬಜರಂಗದಳ ವಿರೋಧ : ಫೆ.14ರಂದು ಪುಲ್ವಾಮಾ ಹುತಾತ್ಮ ದಿನಾಚರಣೆಗೆ ಕರೆ

ಕಳೆದ ವರ್ಷ ಜಮ್ಮುವಿನ ಪುಲ್ವಾಮದಲ್ಲಿ ಭಯೋತ್ಪಾದಕರ ದಾಳಿಯಿಂದ ಬಲಿದಾನವಾದ ಸೈನಿಕರನ್ನು ನೆನೆಪು ಮಾಡಿಕೊಂಡು ಮತ್ತು ಅವರ ಕುಟುಂಬಗಳಿಗೆ ಗೌರವ ಕೊಡುವ ದೃಷ್ಟಿಯಿಂದ ಪ್ರತಿವರ್ಷ ಫೆ.14ರಂದು ಪುಲ್ವಾಮಾ ಹುತಾತ್ಮ ದಿನ ಆಚರಿಸಲು ಕೇಂದ್ರ ಸರ್ಕಾರಕ್ಕೆ ಆಗ್ರಹವನ್ನು ಮಾಡ್ತಾ ಇದ್ದೇವೆ ಎಂದು ವಿಶ್ವ ಹಿಂದೂ ಪರಿಷತ್ ಭಜರಂಗದಳದ ಪ್ರಾಂತ ಸಂಯೋಜಕ್ ಸುನಿಲ್ ಕೆ ಆರ್ ಹೇಳಿದ್ರು. ಅವರು ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿ, ಫೆ.14ರಂದು ಪುಲ್ವಾಮಾ ಹುತಾತ್ಮ ದಿನ ಆಚರಿಸಲು ಗೃಹ ಸಚಿವರಿಗೆ ಪತ್ರದ ಮೂಲಕ ಮನವಿ ಮಾಡಲಿದ್ದೇವೆ.
ಕರ್ನಾಟಕ ರಾಜ್ಯಾದ್ಯಂತ ಬಜರಂಗದಳದ ಎಲ್ಲಾ ಸಂಘಟನೆಯ ಕಾರ್ಯಕರ್ತರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದು, ಎಲ್ಲಾ ರಾಷ್ಟ್ರ ಪ್ರೇಮಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸೋಣ ಎಂದು ಕರೆ ನೀಡಿದ್ರು. ಇನ್ನು ಫೆ.14ರಂದು ಇಡೀ ದೇಶದಲ್ಲಿ ಪಾಶ್ಚಿಮಾತ್ಯ ಸಂಸ್ಕøತಿಯಾದ ಪ್ರೇಮಿಗಳ ದಿನವನ್ನು ಆಚರಣೆ ಮಾಡ್ತಾ ಇದ್ದಾರೆ. ಇದರ ಬದಲು ಪುಲ್ವಾಮದಲ್ಲಿ ಬಲಿದಾನಗೈದ ವೀರ ಸೈನಿಕರ ದಿನವನ್ನ ಆಚರಣೆ ಮಾಡಬೇಕೆಂದು ಹೇಳಿದ್ರು. ಈ ಸಂದರ್ಭ ಮಂಗಳೂರು ವಿಬಾಗ ಸಂಯೋಜಕ್ ಭುಜಂಗ ಕುಲಾಲ್, ಜಿಲ್ಲಾ ಸಂಯೋಜಕ್ ಪುನೀತ್ ಅತ್ತಾವರ್, ಉಡುಪಿ ಜಿಲ್ಲಾ ಸಂಯೋಜಕ್ ದಿನೇಶ್ ಮೆಂಡನ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *