Header Ads
Header Ads
Breaking News

ಫೆ 16ರಂದು ಕೇರಳ ಸಂರಕ್ಷಣಾ ಎಲ್‌ಡಿಎಫ್ ರಾಜ್ಯ ಜಾಥಾ : ಸೀತರಾಮ ಯಚೂರಿ ಅವರಿಂದ ಚಾಲನೆ

ಮಂಜೇಶ್ವರ: ಎಲ್‌ಡಿಎಫ್ ರಾಜ್ಯ ಸಮಿತಿಯ ಮುಂದಾಳತ್ವದಲ್ಲಿ ಫೆಬ್ರವರಿ16 ರಂದು ಉತ್ತರವಲಯ ಜಾಥಕ್ಕೆ ಸಿಪಿಐ(ಎಂ) ಪೊಲಿಟ್ ಬ್ಯುರೋ ಪ್ರಧಾನ ಕಾರ್ಯುದರ್ಶಿ ಸೀತಾರಾಮ್ ಯಚೂರಿ ಚಾಲನೆ ನೀಡಲಿದ್ದಾರೆ ಎಲ್‌ಡಿಎಫ್ ನೇತಾರ ಬಿ.ವಿ ರಾಜನ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಮಂಜೇಶ್ವರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸಿಪಿಐ ರಾಜ್ಯ ಕಾರ್ಯದರ್ಶಿ ಕಾನಂ ರಾಜೇಂದ್ರನ್ ಜಾಥಾಕ್ಕೆ ನೇತೃತ್ವ ನೀಡಲಿದ್ದಾರೆ. ಜೊತೆಯಾಗಿ ಎಲ್‌ಡಿ ಎಫ್ ರಾಜ್ಯ ಘಟಕದಲ್ಲಿರುವ ಹತ್ತು ಪಕ್ಷಗಳ ನೇತಾರರು ಜಾಥಾದಲ್ಲಿ ಭಾಗವಹಿಸಲಿದ್ದಾರೆ.
ಕೇರಳ ಸಂರಕ್ಷಣಾ ಯಾತ್ರೆ ಎಂಬ ನಾಮಧೇಯದಲ್ಲಿ ಬಿಜೆಪಿಯನ್ನು ಹೊರದಬ್ಬಿರಿ ರಾಷ್ಟ್ರವನ್ನು ರಕ್ಷಿಸಿರಿ ಎಡ ಪಕ್ಷ ಜನಪಕ್ಷ ಎಂಬ ಘೋಷಣೆಯೊಂದಿಗೆ ಜಾಥಾ ಸಾಗಲಿದೆ. ಫೆಬ್ರವರಿ23 ರಂದು ಜಾಥಾ ತ್ರಿಶೂರಿನಲ್ಲಿ ಸಮಾಪ್ತಿಗೊಳ್ಳಲಿದೆ. ಇದರ ಜೊತೆಯಾಗಿ ತಿರವನಂತಪುರದಿಂದ ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಎಸ್ ಸುಧಾಕರ ರೆಡ್ಡಿ ಚಾಲನೆ ನೀಡಿದ ದಕ್ಷಿಣ ವಲಯ ಜಾಥಾ ಕೂಡಾ ತ್ರಿಶೂರಿನಲ್ಲಿ ಸಮಾಪ್ತಿಗೊಳ್ಳಲಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಸಂಚಾಲಕ ವಿ.ಪಿ.ಪಿ ಮುಸ್ತಫ, ಚೇಯರ್ ಮ್ಯಾನ್ ಬಿ ವಿ ರಾಜನ್, ಕೆ ಆರ್ ಜಯಾನಂದ, ಅಬ್ದುಲ್ ರಜಾಕ್ ಚಿಪ್ಪಾರು ಮೊದಲಾದವರು ಉಪಸ್ಥರಿದ್ದರು.

Related posts

Leave a Reply

Your email address will not be published. Required fields are marked *