Header Ads
Header Ads
Header Ads
Breaking News

ಫೆ.16 ರಿಂದ 25 ಇತಿಹಾಸ ಪ್ರಸಿದ್ಧ ಕಟ್ಟತ್ತಿಲ ಉರೂಸ್ ಪ್ರಚಾರಕ್ಕೆ ಉಳ್ಳಾಲ ಖಾಝಿಯಿಂದ ಚಾಲನೆ

ಉಳ್ಳಾಲ: ಆತ್ಮಶುದ್ಧಿಯಿಂದ ಧಾರ್ಮಿಕ ಕಾರ್ಯಕ್ರಮಗಳನ್ನು ಪೂರೈಸಿದಾಗ ಅದು ಪರಿಪೂರ್ಣವಾಗಲು ಸಾಧ್ಯ ಎಂದು ಉಳ್ಳಾಲ ಖಾಝಿ ಅಸ್ಸಯ್ಯಿದ್ ಫಝಲ್ ಕೋಯ್ಯಮ್ಮ ಕೂರತ್ ತಂಙಳ್ ಹೇಳಿದರು.

ಅವರು 2018ರ ಫೆ.16 ರಿಂದ 25 ರ ತನಕ ಎರಡು ವರ್ಷಕ್ಕೊಮ್ಮೆ ನಡೆಯುವ ಇತಿಹಾಸ ಪ್ರಸಿದ್ದ ಕಟ್ಟತ್ತಿಲ ಮಖಾಂ ಶರೀಫ್ ಉರೂಸ್ ಮುಬಾರಕ್ ಪ್ರಯುಕ್ತ ಹಮ್ಮಿಕೊಂಡ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ಮತ್ತು ನೂತನ ಮಿನಾರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಅದ್ಧೂರಿ ಮತ್ತು ಆಧುನೀಕತೆಯ ಶೈಲಿಯಲ್ಲಿ ಉರೂಸ್ ಆಚರಣೆಯಿಂದ ಧಾರ್ಮಿಕತೆ ಮಾಯವಾಗುತ್ತಿದೆ. ಇದರಿಂದ ಯುವಸಮುದಾಯ ಹಾದಿ ತಪ್ಪುತ್ತಿದೆ. ಈ ನಿಟ್ಟಿನಲ್ಲಿ ಧಾರ್ಮಿಕತೆಯ ಪ್ರತಿಪಾದನೆಯ ಜತೆಗೆ ಆತ್ಮಶುದ್ಧಿಯನ್ನು ಕಾಪಾಡಬೇಕಿರುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.

ಕಟ್ಟತ್ತಿಲ ಜುಮಾ ಮಸೀದಿ ಜತೆ ಕಾರ್ಯದರ್ಶಿ ಕೆ.ಎಂ ಮುಹಿಯುದ್ದೀನ್ ಮದನಿ ಮಾತನಾಡಿ, ಉರೂಸ್ ಸಮಾರಂಭದಲ್ಲಿ ಕೇರಳ, ಕರ್ನಾಟಕದ ಪ್ರಸಿದ್ಧ ಉಲೇಮಾ ಉಮರಾ ನೇತಾರರು ಹಾಗೂ ರಾಜಕೀಯ ಮುಖಂಡರುಗಳು ಭಾಗವಹಿಸಲಿದ್ದು, ಸರ್ವಧರ್ಮೀಯರು ಸಮಾರಂಭದಲ್ಲಿ ಭಾಗವಹಿಸುವ ಮೂಲಕ ಸೌಹಾರ್ದಯುತ ಉರೂಸ್ ಸಮಾರಂಭ ನೆರವೇರಲಿದೆ ಎಂದರು.

ಉರೂಸ್ ಪ್ರಚಾರ ಭಿತ್ತಿಪತ್ರವನ್ನು ಉಳ್ಳಾಲ ಖಾಝಿಯವರು ಊರೂಸ್ ಕಮಿಟಿ ಅಧ್ಯಕ್ಷ ಕೆ.ಪಿ ಅಬ್ದುಲ್ ಖಾದರ್ ಅವರಿಗೆ ಹಸ್ತಾಂತರಿಸುವ ಮೂಲಕ ಉರೂಸ್ ಪ್ರಚಾರಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಮುದರ್ರಿಸ್ ಇಬ್ರಾಹೀಂ ಫೈಝಿ ಪುಳಿಕೂರು, ಕಟ್ಟತ್ತಿಲ ಜುಮಾ ಮಸೀದಿ ಮತ್ತು ಮಖಾಂ ಶರೀಫ್ ಅಧ್ಯಕ್ಷ ಕೆ.ಪಿ ಅಬ್ದುಲ್ ಖಾದರ್, ಉಪಾಧ್ಯಕ್ಷರುಗಳಾದ ಕೆ.ಮೂಸ, ಮುಹಮ್ಮದ್ ಮದನಿ ಅಲ್-ಮಾಸ್, ಪ್ರ.ಕಾರ್ಯದರ್ಶಿ ಇಬ್ರಾಹೀಂ ನಾಟೆಕಲ್, ಕಾರ್ಯದರ್ಶಿ ಕೆ. ಮೊಹಮ್ಮದ್ ಕುಂಞ, ಜೊತೆ ಕಾರ್ಯದರ್ಶಿ ಕೆ.ಎಂ ಮುಹಿದ್ದೀನ್ ಮದನಿ, ಸ್ವಾದಿಕ್, ಕೋಶಾಧಿಕಾರಿ ಕೆ.ಮೊಹಮ್ಮದ್ ಹಾಜಿ ಮೆದು, ಮಾಜಿ ಅಧ್ಯಕ್ಷರುಗಳಾದ ಅಬ್ದುಲ್ ಖಾದರ್ ಹಾಜಿ, ಉಮರ್ ಮದನಿ ಸದಸ್ಯರಾದ ಹಮೀದ್ ಹಾಜಿ ಕಟ್ಟತ್ತಿಲ, ಅಲಿಕುಂಞ ಕಟ್ಟತ್ತಿಲ, ಅಝೀಝ್ ಕೋಟ್ರಾನ್, ಪಿ.ಟಿ ಇಬ್ರಾಹೀಂ, ಕರೀಂ ಸ್ಟೋರ್, ಕೆ.ಬಿ ಉಮರ್ ಮುಂತಾದವರು ಉಪಸ್ಥಿತರಿದರು.

Related posts

Leave a Reply