Header Ads
Header Ads
Breaking News

ಫೆ. 17ರಂದು ಬಿಜೈನಲ್ಲಿರುವ ಪೆಟ್ ಪ್ಯಾಂಟ್ರಿಯಲ್ಲಿ ಅನಿಮಲ್ ಕೇರ್ ಟ್ರಸ್ಟ್‍ನಿಂದ ದತ್ತು ಶಿಬಿರ

ಮಂಗಳೂರು: ನಮ್ಮ ಜೀವನದಲ್ಲಿ ಸಾಕುಪ್ರಾಣಿಗಳು ಪ್ರಮುಖ ಪಾತ್ರವಹಿಸುತ್ತವೆ. ಕೆಲವು ಅಧ್ಯಯನಗಳ ಪ್ರಕಾರ, ಪ್ರಾಣಿಗಳನ್ನು ಸಾಕುವವರಿಗೆ ಆರೋಗ್ಯಕರ ಹೃದಯ ಕಂಡುಹಿಡಿದಿದೆ; ಕಡಿಮೆ ಅನಾರೋಗ್ಯ, ವೈದ್ಯರಿಗೆ ಕಡಿಮೆ ಭೇಟಿ, ಹೆಚ್ಚು ವ್ಯಾಯಾಮ, ಮತ್ತು ಕಡಿಮೆ ಖಿನ್ನತೆಗೆ ಒಳಗಾಗುತ್ತಾರೆ. ಈ ನಿಟ್ಟಿನಲ್ಲಿ ಅನಿಮಲ್ ಕೇರ್ ಟ್ರಸ್ಟ್, ಶಕ್ತಿನಗರ, ಆಗಾಗ್ಗೆ ದತ್ತು ಶಿಬಿರಗಳನ್ನು ನಡೆಸುತ್ತಿದೆ.

ಸಾಕುಪ್ರಾಣಿಗಳನ್ನು ಅಂಗಡಿಯಿಂದ ಹಣ ಕೊಟ್ಟು ತೆಗೆದುಕೊಳ್ಳುವ ಬದಲು, ನಮ್ಮ ದೇಶೀಯ ನಾಯಿ ಮತ್ತು ಬೆಕ್ಕಿನ ಮರಿಗಳನ್ನು ದತ್ತು ತೆಗೆದುಕೊಳ್ಳಬೇಕು ಎಂಬುದು ಅನಿಮಲ್ ಕೇರ್ ಟ್ರಸ್ಟ್ನ ಧ್ಯೇಯವಾಗಿದೆ. ಈ ಉದ್ದೇಶದಿಂದಾಗಿ ದತ್ತು ಶಿಬಿರಗಳನ್ನು ನಡೆಸಿ, ಮನೆಯಿಲ್ಲದ ಭಾರತೀಯ ತಳಿ ನಾಯಿ ಮತ್ತು ಬೆಕ್ಕುಗಳಿಗೆ ಪ್ರೀತಿಯ, ಶಾಶ್ವತವಾದ ಮನೆಗಳನ್ನು ಕಂಡುಹಿಡಿಯುತ್ತಿದೆ.

ಅಂತಹ ಒಂದು ಶಿಬಿರವನ್ನು ಬಿಜೈನಲ್ಲಿರುವ ಪೆಟ್ ಪ್ಯಾಂಟ್ರಿ, ಸಾಯಿ ಆರ್ಕೇಡ್, ಫೆಬ್ರುವರಿ 17, ರಂದು ಬೆಳಿಗ್ಗೆ 10.00 ರಿಂದ ಸಂಜೆ 5.00 ರವರೆಗೆ ನಡೆಸಲಾಗುವುದು. ಈ ಶಿಬಿರದಲ್ಲಿ ಸುಮಾರು 20 ನಾಯಿಮರಿಗಳ ಮತ್ತು 6 ಬೆಕ್ಕಿನಮರಿಗಳು ದತ್ತುತೆಗೆದುಕೊಳ್ಳಲು ಸಿಗುತ್ತವೆ.ನಾಯಿ ಮತ್ತು ಬೆಕ್ಕಿನಮರಿಗಳನ್ನು ದತ್ತು ತೆಗೆದುಕೊಳ್ಳಲು ರೂ 200 ನೆಯ ಶುಲ್ಕವನ್ನು ಸಂಗ್ರಹಿಸಲಾಗುತ್ತದೆ. ಇದರಲ್ಲಿ ರಾಬೀಸ್ ತಡೆಯುವ ಲಸಿಕೆಯ ಶುಲ್ಕ ಸೇರಿದೆ. ದತ್ತು ತೆಗೆದುಕೊಳ್ಳುವವರ ವಿಳಾಸದ ನಕಲು ಕೊಡಬೇಕು. ಅನಿಮಲ್ ಕೇರ್ ಟ್ರಸ್ಟ್ನವರು ನೀವು ಅವರಿಂದ ದತ್ತುತೆಗೆದುಕೊಂಡ ಪ್ರ್ರಾಣಿಯ ಯೋಗಕ್ಷೇಮದ ಬಗ್ಗೆ ಹಾಗೂ ಅದಕ್ಕೆ ಸಂತಾನವಾಗದಂತೆ ಚಿಕಿತ್ಸೆ ಮಾಡಿಸುವುದರ ಬಗ್ಗೆ ಸಂಪರ್ಕವಿಟ್ಟುಕೊಳ್ಳುತ್ತಾರೆ.

ದಾರಿ ತಪ್ಪಿದ, ಕಾಯಿಲೆಗೆ ಒಳಗಾದ ಮತ್ತು ತೊರೆದ ಪ್ರಾಣಿಗಳಿಗೆ ರಕ್ಷಣೆ ಮತ್ತು ಆಶ್ರಯ ಒದಗಿಸಲು, 2000 ಇಸವಿಯಲ್ಲಿ ಅನಿಮಲ್ ಕೇರ್ ಟ್ರಸ್ಟ್ ಅಸ್ತಿತ್ವಕ್ಕೆ ಬಂದಿತು. ದೇಶೀಯ ತಳಿಗಳನ್ನು ನಿರ್ಲಕ್ಷಿಸುವುದು ಮತ್ತು ದಾರಿಯಲ್ಲಿ ಬಿಟ್ಟುಬಿಡುವುದು ಹೆಚ್ಚಾಗಿರುವಾಗ, ಅನಿಮಲ್ ಕೇರ್ ಟ್ರಸ್ಟ್ ನವರು, ಈ ಪ್ರಾಣಿಗಳಿಗೆ ಪ್ರೀತಿಯಿಂದ ನೋಡಿಕೊಳ್ಳುವ ಮನೆಗಳನ್ನು ಹುಡುಕುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ಅನಿಮಲ್ ಕೇರ್ ಟ್ರಸ್ಟ್, ಅನಿಮಲ್ ವೆಲ್ಫೇರ್ ಬೋರ್ಡ್ ಆಫ್ ಇಂಡಿಯಾದಿಂದ ಗುರುತಿಸಲ್ಪಟ್ಟ ನೋಂದಾಯಿತ ಚಾರಿಟಬಲ್ ಟ್ರಸ್ಟ್ ಆಗಿದೆ. ಮಂಗಳೂರು ಸಿಟಿ ಕಾಪೆರೇಶನ್ಗಾಗಿ ಎಬಿಸಿ, ಎಆರ್ವಿ ನಡೆಸುತ್ತದೆ ಮತ್ತು ಮಂಗಳೂರು ಸಿಟಿ ಕಾಪೆರ್Çರೇಷನ್ ಅದರ ಚಟುವಟಿಕೆಗಳನ್ನು ಅಂಗೀಕರಿಸಲಾಗಿದೆ ಮತ್ತು ಗುರುತಿಸಿದೆ.

Related posts

Leave a Reply

Your email address will not be published. Required fields are marked *