Header Ads
Breaking News

ಫೆ.21 ರಂದು ನಡೆಯಲಿರುವ ಕಡಲ ಜಾನಪದ ವಿಚಾರಗೋಷ್ಠಿ

ಇದೇ ಮೊದಲ ಬಾರಿಗೆ ತುಳು ಪರಿಷತ್ ವತಿಯಿಂದ ಕಡಲ ಜಾನಪದ ವಿಚಾರಗೋಷ್ಠಿಯು ನಾಳೆ ಮಂಗಳೂರಿನ ಕಡಲಿನಲ್ಲಿ ನಡೆಯಲಿದೆ.

ಹೊಸದಾಗಿ ಆರಂಭಗೊಂಡಿರುವ ಅಬ್ಬಕ್ಕ ಕ್ವೀನ್ ಕ್ರೂಸ್‌ನಲ್ಲಿ ಈ ವಿಚಾರಗೋಷ್ಠಿ ನಡೆಯಲಿದೆ. ಕರಾವಳಿ ಕಾಲೇಜು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗಣೇಶ್ ರಾವ್ ಉದ್ಘಾಟಿಸಲಿದ್ದಾರೆ. ಮಂಗಳೂರು ವಿವಿ ರಿಜಿಸ್ಟ್ರಾರ್ ಪ್ರೊ.ಎ.ಎಂ.ಖಾನ್ ಅಧ್ಯಕ್ಷತೆ ವಹಿಸಲಿದ್ದಾರೆ. ಎಸ್ ಡಿಸಿಸಿ ಬ್ಯಾಂಕ್‌ನ ಸಿಇಓ ಬಿ.ರವೀಂದ್ರ ಹಾಗೂ ವಿವಿ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ರಾಮಕೃಷ್ಣ ಬಿ.ಎಂ. ಅತಿಥಿಗಳಾಗಿ ಭಾಗವಹಿಸುವರು.

ಮೊದಲ ಗೋಷ್ಠಿಯಲ್ಲಿ ಡಾ.ಕೆ.ಎಂ ರಾಘವ ನಂಬಿಯಾರ್ ಪಡವುದಪ್ಪೆನ ಪಾರ್ದನ ಬಗ್ಗೆ ಮಾತನಾಡಲಿದ್ದಾರೆ.ಕಡಲಿಗೆ ಹೋಗಿ ವ್ಯವಹಾರ ಮಾಡುವವರ ಬದುಕಿನ ಚಿತ್ರಣ ನೀಡುವರು ಹಾಗೂ ಪಡವುದ ಅಪ್ಪೆ ಎಂದು ಜನಮಾನ್ಯ ಪಡೆದ ದೈವದ ಪಾರ್ದನದದ ಬಗ್ಗೆ ನಂಬಿಯಾರ್ ನಂಬಿಯಾರ್ ಪಡವುದಪ್ಪೆನ ಪಾರ್ದನ ಎಂಬ ಕೃತಿಯನ್ನು ಮಲಯಾಳಂನಿಂದ ತುಳುವಿಗೆ ಅನುವಾದಿಸಿದ್ದು, ಆಹಿನ್ನೆಯಲ್ಲಿ ವಿಚಾರ ಮಂಡಿಸಲಿದ್ದಾರೆ.

ಎರಡನೇ ಗೋಷ್ಠಿಯಲ್ಲಿ ಎಂಆರ್‌ಪಿಎಲ್ ಸಂಸ್ಥೆಯ ಕಾರ್ಪೋರೇಟ್ ಕಮ್ಯೂನಿಕೇಶನ್ ವಿಭಾಗದ ಜನರಲ್ ಮ್ಯಾನೇಜರ್ ರುಡಾಲ್ಫ್ ನೊರೊನ್ಹಾ ಹಳೆ ಕಾಲದ ಕಡಲ ಬದುಕಿನ ತಂತ್ರಜ್ಞಾನ ಎಂಬ ವಿಚಾರದ ಬಗ್ಗೆ ಮಾತನಾಡಲಿದ್ದಾರೆ. ಲೇಖಲಿ ಡಾ. ಮಿನಾಕ್ಷಿ ರಾಮಚಂದ್ರ ಅಧ್ಯಕ್ಷತೆ ವಹಿಸಲಿದ್ದು, ಡಾ.ವಾಸುದೇವ ಬೆಳ್ಳೆ ಗೋಷ್ಠಿಯನ್ನು ನಿರ್ವಹಿಸಲಿದ್ದಾರೆ ಎಂದು ತುಳು ಪರಿಷತ್ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *