Header Ads
Header Ads
Breaking News

ಫೆ.22ರಂದು ದುಬಾಯಿಯಲ್ಲಿ ಬಯ್ಯಮಲ್ಲಿಗೆ ನಾಟಕ ಪ್ರದರ್ಶನ

ದುಬಾಯಿಯ ಗಮ್ಮತ್ ಕಲಾವಿದರೆ ವತಿಯಿಂದ ಪ್ರೀಶಿಯಸ್ ಪಾರ್ಟೀಸ್ ಆಂಡ್ ಎಂಟರ್ಟೈನ್ಮೆಂಟ್ ಇವರ ಸಹಯೋಗದೊಂದಿಗೆ ಬಯ್ಯಮಲ್ಲಿಗೆ ನಾಟಕ ಪ್ರದರ್ಶನ ಫೆಬ್ರವರಿ 22ರಂದು ದುಬಾಯಿಯ ಊದ್ ಮೇತಾದಲ್ಲಿರುವ ಶೇಖ್ ರಶೀದ್ ಸಭಾಂಗಣದಲ್ಲಿ ನಡೆಯಲಿದೆ.

ತುಳು ನಾಟಕ ಎಂದರೆ ನಗಿಸಲಷ್ಟೇ ಸೀಮಿತ ಎಂದು ಭಾವಿಸಲಾಗುವ ಈ ದಿನಗಳಲ್ಲಿ ಹಿಂದಿನ ತುಳು ನಾಟಕದ ಘನತೆಯನ್ನು ಎತ್ತಿ ತೋರಿಸುವಂಥ ಒಂದು ಪ್ರಬುದ್ಧ ಸಾಂಸಾರಿಕ ನಾಟಕ ಬಯ್ಯಮಲ್ಲಿಗೆ. ಪರದೆ ನಾಟಕಗಳು ಬಹುತೇಕ ನೇಪಥ್ಯಕ್ಕೆ ಸರಿದಿರುವ ಈ ದಿನಗಳಲ್ಲಿ 54 ವರ್ಷಗಳ ಹಿಂದೆ ಡಾ| ಸಂಜೀವ ದಂಡೆಕೇರಿ ಅವರು ಬರೆದಿರುವ, ಆ ಬಳಿಕ ಸಿನಿಮಾ ಕೂಡ ಆಗಿರುವ ಬಯ್ಯಮಲ್ಲಿಗೆ ನಾಟಕವನ್ನು ದುಬೈನ ಗಮ್ಮತ್ ಕಲಾವಿದೆರ್ ಇವರು ಪ್ರೀಶಿಯಸ್ ಪಾರ್ಟೀಸ್ ಆನ್ಡ್ ಎಂಟರ್ಟೈನ್ಮೆಂಟ್ ಇವರ ಸಂಯೋಗದೊಂದಿಗೆ ಇದೇ ಬರುವ ಶುಕ್ರವಾರ ಅಂದರೆ ಫೆಬ್ರವರಿ 22 ರಂದು ಸಂಜೆ 5 ಗಂಟೆಗೆ ಸರಿಯಾಗಿ ದುಬೈಯ ಊದ್ ಮೇತಾದಲ್ಲಿರುವ ಶೇಖ್ ರಶೀದ್ ಸಭಾಂಗಣದಲ್ಲಿ ಪ್ರದರ್ಶಿಸಿಸಲಿದ್ದಾರೆ .

ವಿಶ್ವನಾಥ್ ಶೆಟ್ಟಿಯವರು ಈ ನಾಟಕವನ್ನು ನಿರ್ದೇಶಿಸಲಿದ್ದು,v4 ನ್ಯೂಸ್ ಸಿಪಿಎಲ್ ಖ್ಯಾತಿಯ ಸಾಕ್ಷಿ ಕಲಾವಿದೆರ್ ತಂಡದ ಸಾರಥಿ ಶುಭಕರ್ ಬೆಳಪು ಇವರು ಸಂಗೀತ ನೀಡಲಿದ್ದಾರೆ.ಎಲ್ಲಾ ತುಳು ನಾಟಕ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ನಾಟಕವನ್ನು ಯಶಸ್ವಿ ಗೊಳಿಸಬೇಕಾಗಿ ಗಮ್ಮತ್ ಕಲಾವಿದೆರ್ ಅಧ್ಯಕ್ಷೆ ಶ್ರೀಮತಿ ಸುವರ್ಣ ಸತೀಶ್ ಪೂಜಾರಿಯವರು ಕೋರಿದ್ದಾರೆ…

Related posts

Leave a Reply

Your email address will not be published. Required fields are marked *