Header Ads
Header Ads
Breaking News

ಫೆ. 22 ರಂದು ಕಂಬಳಬೆಟ್ಟು ಭಟ್ರೆನ ಮಗಳ್ ತುಳು ಸಿನಿಮಾ ದ.ಕ., ಕಾಸರಗೋಡಿನಲ್ಲಿ ಚಿತ್ರ ಬಿಡುಗಡೆ

ಮಂಜೇಶ್ವರ : ರೆಚಲ್ ಫಿಲ್ಮ್ ಪ್ರೊಡೆಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡ “ ಕಂಬಳಬೆಟ್ಟು ಭಟ್ರೆನ ಮಗಳ್ ತುಳು ಚಿತ್ರ ಫೆಬ್ರವರಿ 22ರಂದು ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯ ವಿವಿಧ ಚಿತ್ರಮಂದಿರದಲ್ಲಿ ಚಿತ್ರ ತೆರೆಕಾಣಲಿದೆ. ಈ ಬಗ್ಗೆ ಮಂಜೇಶ್ವರ ಪ್ರೆಸ್‌ಕ್ಲಬ್‌ನಲ್ಲಿ ಚಿತ್ರ ತಂಡ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ರೊನಾಲ್ಡ್ ಮಾರ್ಟಿನ್ ನಿರ್ಮಾಣದ ಎಲ್.ಎನ್ ಪ್ರಕಾಶ್ ಗಟ್ಟಿ ಕಂಬಳಪದವು ನಿರ್ವಹಣೆಯಲ್ಲಿ ಶರತ್ ಎಸ್. ಪೂಜಾರಿ ಬಗ್ಗತೋಟ ನಿರ್ದೇಶನದ “ ಕಂಬಳಬೆಟ್ಟು ಭಟ್ರೆನ ಮಗಳ್ ತುಳು ಚಿತ್ರ ಬಿಡುಗಡೆಗೆ ಸಿದ್ಧತೆ ನಡೆಸಿದೆ.

ತುಳುನಾಡಿದ ಖ್ಯಾತ ಕಲಾವಿದರಾದ ಅರವಿಂದ್ ಬೋಳಾರ್ , ಭೋಜರಾಜ್ ವಾಮಂಜೂರು , ರಮೇಶ್ ರೈ , ಪ್ರಕಾಶ್ ತೂಮಿನಾಡು , ಶಿವ ಪ್ರಕಾಶ್ ಪೂಂಜಾ ಸೇರಿದಂತೆ ಹಲವಾರು ಹೊಸ ನಟ ನಟಿಯರಿಗೆ ಅವಕಾಶ ಕಲ್ಪಿಸಿರುವ ಚಿತ್ರದಲ್ಲಿ ಇದೇ ಮೊದಲ ಭಾರಿಗೆ ತುಳು ಚಿತ್ರದಲ್ಲಿ ಕೇರಳದ ಕಳರಿ ಫೈಟ್ ಒಳಗೊಂಡ ಚಿತ್ರ ಇದಾಗಿದೆ ಎಂದು ಚಿತ್ರ ತಂಡ ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿ ರೊನಾಲ್ಡ್ ಮಾರ್ಟಿನ್ , ಶರತ್ ಎಸ್ , ಲೈಯನ್ ಪ್ರಕಾಶ್ ಗಟ್ಟಿ , ರಮೇಶ್ ರೈ ಕುಕ್ಕುವಳ್ಳಿ , ಶಂಕರ್ ಭಟ್ ಪುದುಕೊಳಿ, ಯೋಗೀಶ್ ಕುಪ್ಪೂಸ್ , ವಾಲ್ಟನ್, ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *