Header Ads
Header Ads
Breaking News

ಫೆ.22 ರಿಂದ ಮಾರ್ಚ್ 2 ರವರೆಗೆ ತೋಡಾರು ಬದ್ರಿಯ ಸುನ್ನಿ ಜುಮ್ಮಾ ಮಸೀದಿ ಉರೂಸು

ಮೂಡುಬಿದಿರೆ : ತೋಡಾರು ಬದ್ರಿಯ ಸುನ್ನಿ ಜುಮ್ಮಾ ಮಸೀದಿ ಸಮೀಪ ಅಂತ್ಯ ವಿಶ್ರಮ ಹೋಂದಿರುವ ಬಹು ಸಯ್ಯದ್ ವಲಿಯುಲ್ಲಾಹಿರವರ ಹೆಸರಿನಲ್ಲಿ ಪ್ರತಿ 2 ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುವ ತೋಡಾರು ಮುಖಾಂ ಉರೂಸು ಫೆಬ್ರವರಿ 22 ರಿಂದ ಮಾರ್ಚ್ 2 ರ ತನಕ ನಡೆಯಲಿದೆ.

ಉರೂಸು ಸಮಿತಿ ಪ್ರಧಾನ ಕಾರ್ಯದರ್ಶಿ ಯೂಸೂಫ್ ಮಿಜಾರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಉರೂಸು ಕಾರ್ಯಕ್ರಮ ಪ್ರತಿ ಎರಡು ವರ್ಷಕ್ಕೊಮೆ ನಡೆಯುತ್ತದೆ.

ಸಮಾರೋಪ ಸಮಾರಂಭದಲ್ಲಿ ಬಹು| ಸಯ್ಯದ್ ಬಶೀರಲಿ ಶಿಹಾಬ್ ತಂಙಳ್ ಪಾಣಕ್ಕಾಡ್, ಬಹು| ಅಬೂಬಕ್ಕರ್ ಮುಸ್ಲಿಯಾರ್ ಖಾಝಿ ಅತ್ರಾಡಿ, ನಗರಾಭಿವೃದ್ಧಿ ಸಚಿವರಾದ ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಉಮನಾಥ ಕೋಟ್ಯಾನ್, ವಿಧಾನಪರಿಷತ್‍ನ ಸದಸ್ಯ ಭೋಜೇಗೌಡ ಹಾಗೂ ಸರಕಾರದ ಸಂಸದೀಯ ಕಾರ್ಯದರ್ಶಿ ಐವನ್ ಡಿ’ಸೋಜ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಮಾಜಿ ಸಚಿವರಾದ ಬಿ.ರಮನಾಥ ರೈ, ವಿಧಾನಪರಿಷತ್‍ನ ಸದಸ್ಯ ಬಿ.ಎಂ. ಫಾರೂಕ್, ಮಾಜಿ ಸಚಿವ ಅಭಯಚಂದ್ರ ಜೈನ್, ವೈ. ಮಹಮ್ಮದ್ ಬ್ಯಾರಿ ಎಡಪದವು, ಬಿ.ಹೆಚ್. ಅಬ್ದುಲ್ ಖಾದರ್ ಮತ್ತಿತರರು ಭಾಗವಹಿಸುವರು.

Related posts

Leave a Reply

Your email address will not be published. Required fields are marked *