Header Ads
Header Ads
Breaking News

ಫೆ.24ರಂದು ಕುತ್ತಾರಿನಿಂದ ಕೊಣಾಜೆಯ ವರೆಗೆ ಬಿಜೆಪಿ ಶಕ್ತಿಕೇಂದ್ರದಿಂದ ಜನಬೆಂಬಲ ಯಾತ್ರೆ

ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದಿಂದ ಅಸೈಗೋಳಿವರೆಗೆ ಕೊಣಾಜೆ ಬಿಜೆಪಿ ಶಕ್ತಿಕೇಂದ್ರದ ಆಶ್ರಯದಲ್ಲಿ ಜನಬೆಂಬಲ ಯಾತ್ರೆ ಫೆಬ್ರವರಿ 24 ರಂದು ಸಂಜೆ ನಡೆಯಲಿದೆ ಎಂದು ಕೊಣಾಜೆ ಶಕ್ತಿಕೇಂದ್ರದ ಅಧ್ಯಕ್ಷ ಸುರೇಶ್ ಶೆಟ್ಟಿ ಅಂಬ್ಲಮೊಗರು ತಿಳಿಸಿದರು. ಮತ್ತೊಮ್ಮೆ ಮೋದಿ ಅನ್ನುವ ಘೋಷವಾಕ್ಯದೊಂದಿಗೆ ಜಿಲ್ಲೆಯ ಸಂಸದರಿಗೆ ಜನ ಬೆಂಬಲಿಸುವ ಉದ್ದೇಶದೊಂದಿಗೆ ಕಾರ್ಯಕ್ರಮ ನಡೆಯಲಿದೆ.

ತೊಕ್ಕೊಟ್ಟುವಿನಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಕಾರ್ಯಕ್ರಮದ ಮಾಹಿತಿ ನೀಡಿದರು. ಸಂಜೆ 4 ಗಂಟೆಗೆ ವಾಹನಾ ಜಾಥಾಕ್ಕೆ ಚಾಲನೆ ನೀಡಲಾಗುವುದು. ಅಸೈಗೋಳಿಯ ಗಣೇಶ್ ಮಹಲಿನಲ್ಲಿ ನೂತನ ಶಕ್ತಿಕೇಂದ್ರದ ಉದ್ಘಾಟನೆ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಕಾರ್ಕಳ ಶಾಸಕ ಸುನಿಲ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಸೇರಿದಂತೆ ವಿವಿಧ ಗಣ್ಯರು ಭಾಗಿಯಾಗಲಿದ್ದಾರೆ. ಇದೇ ಸಂದರ್ಭ ಪಕ್ಷಕ್ಕಾಗಿ ಸೇವೆ ಸಲ್ಲಿಸಿದ ಗಣ್ಯರನ್ನು ಗೌರವಿಸುವ ಕಾರ್ಯಕ್ರಮವೂ ನಡೆಯಲಿದೆ ಎಂದರು.

ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಮಾತನಾಡಿ, ಜಿಲ್ಲೆ ಹಾಗೂ ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಮಂಗಳೂರು ಕ್ಷೇತ್ರದ ಐದು ಶಕ್ತಿಕೇಂದ್ರದ ವತಿಯಿಂದ ಜನಬೆಂಬಲ ಯಾತ್ರೆ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

ಈ ವೇಳೆ ಮಾಜಿ ಶಾಸಕ ಜಯರಾಮ ಶೆಟ್ಟಿ, ಜಿ.ಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಹೇಮಂತ್ ಶೆಟ್ಟಿ ದೇರಳಕಟ್ಟೆ, ಮುಖಂಡರುಗಳಾದ ಮೋಹನ್ ರಾಜ್ ಕೆ.ಆರ್, ಸಂಜೀವ ಶೆಟ್ಟಿ ಅಂಬ್ಲಮೊಗರು, ಮನೋಜ್ ಆಚಾರ್ಯ, ಬಾಬು ಶೆಟ್ಟಿ ಮುನ್ನೂರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *