Header Ads
Header Ads
Breaking News

ಫೆ.26ರಿಂದ ಮಾರ್ಚ್ 2ರ ವರೆಗೆ ಉಚ್ಚಿಲದಿಂದ ಮೂಲ್ಕಿ ಕಡಲ ಕಿನಾರೆ ಚಾರಣ ಶಿಬಿರ

ಭಾರತ್ ಸ್ಕೌಟ್ ಮತ್ತಯ ಗೈಡ್ಸ್ ರಾಜ್ಯ ಸಂಸ್ಥೆಯ ವತಿಯಿಂದ ಐದು ದಿನ ನಡೆಯಲಿರುವ ರೇಂಜರ್ ಕಡಲ ಕಿನಾರೆ ಚಾರಣ ಫೆ.26ರಿಂದ ಮಾರ್ಚ್ 2ರವರೆಗೆ ಉಚ್ಚಿಲದಿಂದ ಮೂಲ್ಕಿ ತನಕ ನಡೆಯಲಿದೆ.
ಜಿಲ್ಲೆಯಲ್ಲಿ 53 ಸಾವಿರ ವಿದ್ಯಾರ್ಥಿಗಳು ಸ್ಕೌಟ್ ಮತ್ತು ಗೈಡ್ಸ್‌ನಲ್ಲಿ ತೊಡಗಿಸಿಕೊಂಡಿದ್ದು ರಾಜ್ಯದಲ್ಲೇ ಅತ್ಯಧಿಕ ಎನಿಸಿದ್ದು ಜಿಲ್ಲಾ ಸಂಸ್ಥೆಗೆ ಪ್ರಶಸ್ತಿಯೂ ಲಭಿಸಿದೆ. ಈ ಬಾರಿ ಕಡಲ ಕಿನಾರೆ ಚಾರಣ ಶಿಬಿರ ಜಿಲ್ಲೆಯಲ್ಲಿ ನಡೆಯಲಿದ್ದು, ಫೆ.26ರಂದು ಸಂಜೆ ನಾಲ್ಕು ಗಂಟೆಗೆ ಸಂಸ್ಥೆಯ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಅವರು ಉಚ್ಚಿಲದಲ್ಲಿ ಉದ್ಘಾಟಿಸಲಿದ್ದಾರೆ. ಜಿಲ್ಲಾಧಿಕಾರಿ ಸಸಿಕಾಂಥ ಸೆಂಥಿಲ್ ಅಧ್ಯಕ್ಷತೆ ವಹಿಸಲಿದ್ದು, ಸಚಿವ ಯು.ಟಿ.ಖಾದರ್ ರೇಂಜರ್ ಶತಮಾನೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾ ಮುಖ್ಯ ಆಯುಕ್ತ ಎಂ.ಜಿ.ಮೋಹನ್ ಅವರು ತೊಕ್ಕೊಟ್ಟುವಿನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಶಿಬಿರದ ಎರಡನೇ ದಿನ ವಿದ್ಯಾರ್ಥಿಗಳು ಉಚ್ಚಿಲದಿಂದ ಹೊರಟು ಮಧ್ಯಾಹ್ನ ಉಳ್ಳಾಲದ ಬಿ.ಎಂ. ಪ್ರೌಢಶಾಲೆ, ಮೂರನೇ ದಿನ ವಿದ್ಯಾದಾಯಿನಿ ವಿದ್ಯಾಸಂಸ್ಥೆ, ನಾಲ್ಕನೇ ದಿನ ಮೂಲ್ಕಿ ತಲುಪಿ ಬಪ್ಪನಾಡು ದೇವಸ್ಥಾನದ ಸಭಾಭವನದಲ್ಲಿ ತಂಗುವರು. ಅಂದು ನಡೆಯಲಿರುವ ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಲಿದ್ದು, ರಾಜ್ಯ ಗೈಡ್ ಆಯುಕ್ತೆ ಗೀತಾ ನಟರಾಜ್ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ಕಾರ್ಯಕ್ರಮದ ಬಗ್ಗೆ ವಿವರಸಿದರು.
ಜಿಲ್ಲಾ ಆಯುಕ್ತ ರಾಮಶೇಷ ಶೆಟ್ಟಿ, ಕಾರ್ಯದರ್ಶಿ ಎಂ.ಜಿ.ಕಜೆ, ಜಂಟಿ ಕಾರ್ಯದರ್ಶಿ ಜಯವಂತಿ ಸೋನ್ಸ್ ಹಾಗೂ ಜಿಲ್ಲಾ ತರಬೇತಿ ಕೌನ್ಸಿಲರ್ ತ್ಯಾಗಂ ಹರೇಕಳ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *