
ಸ್ಕೌಟ್ಸ್ಗೈಡ್ಸ್ ಸ್ಥಳೀಯ ಸಂಸ್ಥೆಯು ಮೂಡುಬಿದಿರೆಯ ಹೃದಯಭಾಗದಲ್ಲಿರುವ ಸ್ವರಾಜ್ಯ ಮೈದಾನದ ಬಳಿ ಸುಸಜ್ಜಿತ ಸಭಾಂಗಣ ‘ಸ್ಕೌಟ್ಸ್ ಗೈಡ್ಸ್ ಕನ್ನಡ ಭವನ’ ಹಾಗೂ ‘ಮುಂಡ್ರುದೆಗುತ್ತು ಕೆ.ಅಮರನಾಥ ಶೆಟ್ಟಿ ಸಭಾಂಗಣ’ಗಳು ಫೆ-27ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಸುಸಜ್ಜಿತವಾದ ‘ಸ್ಕೌಟ್ಸ್ಗೈಡ್ಸ್ಕನ್ನಡ ಭವನ’ದ ನಿವೇಶನವು 1.00 ಎಕ್ರೆ ವಿಸ್ತೀರ್ಣವÀನ್ನೊಳಗೊಂಡು ಪ್ರಧಾನ ಸಭಾಂಗಣಕ್ಕೆ ‘ಮುಂಡ್ರುದೆಗುತ್ತು ಕೆ.ಅಮರನಾಥ ಶೆಟ್ಟಿ ಸಭಾಂಗಣ’ವೆಂದು ನಾಮಕರಣ ಮಾಡಲಾಗಿದೆ. ಮೂಡುಬಿದಿರೆಯಲ್ಲಿ ಸ್ಕೌಟ್ಸ್-ಗೈಡ್ಸ್ ಸಮಗ್ರ ಚಟುವಟಿಕೆಗಳ ಕೇಂದ್ರವಾಗಿ, ಇಲ್ಲಿನ ಶೈಕ್ಷಣಿಕ ಹಾಗೂ ಸಾಂಸ್ಕøತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲು ಮಾದರಿಯೆನಿಸುವಂತೆ ಸ್ಕೌಟ್ಸ್-ಗೈಡ್ಸ್ಕನ್ನಡ ಭವನವನ್ನು ನಿರ್ಮಿಸಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಲೋಕಾರ್ಪಣೆ ಗೊಳಿಸಲಿದ್ದಾರೆ. ಜೈನ ಮಠದ ಸ್ವಾಮೀಜಿ ಭಾರತ ಭೂಷಣ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ. ಎಂದರು. ಸಂಜೆ 7ಗಂಟೆಗೆ ಮುಂಡ್ರುದೆಗುತ್ತು ಅಮರನಾಥ ಶೆಟ್ಟಿ ಸಭಾಂಗಣದಲ್ಲಿ 250 ಪ್ರತಿಭಾವಂತ ವಿದ್ಯಾರ್ಥಿಗಳಿಂದ ‘ಆಳ್ವಾಸ್ ಸಾಂಸ್ಕøತಿಕ ವೈಭವ’ ಕಾರ್ಯಕ್ರಮವು ಸಂಪನ್ನಗೊಳ್ಳಲಿದೆ ಎಂದು ಡಾ. ಆಳ್ವರು ತಿಳಿಸಿದ್ದಾರೆ.